Drone Pratap: ಡ್ರೋನ್ ಪ್ರತಾಪ್‌ ಆಸ್ಪತ್ರೆಗೆ ದಾಖಲು..ಬಿಗ್ ಬಾಸ್ ಮನೆಗೆ ಪೊಲೀಸರ ಎಂಟ್ರಿ!

ಡ್ರೋನ್ ಪ್ರತಾಪ್ ಆಸ್ಪತ್ರೆಗೆ ದಾಖಲಾಗಿದ್ದೆ ತಡ..!
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಪೊಲೀಸರು..!
ಈಗ ಹೇಗಿದ್ದಾರೆ ಗೊತ್ತಾ ಡ್ರೋನ್ ಪ್ರತಾಪ್..?

Share this Video
  • FB
  • Linkdin
  • Whatsapp

ಡ್ರೋನ್ ಪ್ರತಾಪ್ ಆತ್ಮಹತ್ಯೆ ವದಂತಿ ಹಬ್ಬುತ್ತಿದ್ದಂತೆ ಪೊಲೀಸರು(Police) ಅಲರ್ಟ್ ಆಗಿದ್ದಾರೆ. ಒಂದುಕಡೆ ಪ್ರತಾಪ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಮತ್ತೊಂದು ಕಡೆ ಪೊಲೀಸರು ಕೂಡ ವಿಚಾರಣೆಗೆ ಮುಂದಾಗಿದ್ದಾರೆ. ಆಹಾರದಲ್ಲಿ ವ್ಯತ್ಯಾಸವಾದ ಪರಿಣಾಮ ಪ್ರದೀಪ್ ಸಂಜೀವಿನಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಕುಂಬಳಗೋಡು ಪೊಲೀಸ್ ಠಾಣಾ ಅಧಿಕಾರಿ ಶಿವಾರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಪ್ರತಾಪ್‌ಗೆ(Drone Pratap) ಚಿಕಿತ್ಸೆ ಕೊಟ್ಟ ವೈದ್ಯರ ಜೊತೆ ಚರ್ಚೆ ಮಾಡಿ, ಆರೋಗ್ಯದ(Health) ಬಗ್ಗೆ ಮಾಹಿತಿ ತಗೆದುಕೊಂಡಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ನಂತರ ಸೀದಾ ಬಿಗ್ ಬಾಸ್(Bigg Boss) ಮನೆಯತ್ತ ತೆರಳಿರುವ ಪೊಲೀಸ್ ಅಧಿಕಾರಿಗಳು ಅಲ್ಲಿಯೂ ಡ್ರೋನ್ ಪ್ರತಾಪ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರಂತೆ. ಪೊಲೀಸರು ಈ ಪ್ರಕರಣದಲ್ಲಿ ಪ್ರವೇಶ ಮಾಡಿರುವುದು ನಾನಾ ರೀತಿಯ ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ. ಆದರೆ, ಪ್ರತಾಪ್ ಅವರ ಆರೋಗ್ಯ ಸುಧಾರಿಸಿದ್ದು, ಮತ್ತೆ ಅವರು ಬಿಗ್ ಬಾಸ್ ಮನೆಯೊಳಗೆ ಮರು ಪ್ರವೇಶ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  Yash: ಟಾಕ್ಸಿಕ್ ಟೈಟಲ್ ಕಿಕ್ ಬಳಿಕ ಯಶ್ ಫ್ಯಾನ್ಸ್‌ಗೆ ಶಾಕ್..! ಜ. 8ಕ್ಕೆ ಅಭಿಮಾನಿಗಳ ಕೈಗೆ ಸಿಗಲ್ಲ ನಟ..!

Related Video