ಮೊದಲ ಇನ್‌ಸ್ಟಾಗ್ರಾಂ ವಿಡಿಯೋ ಹಂಚಿಕೊಂಡ ಪವನ್ ಕಲ್ಯಾಣ್: ಇದರಲ್ಲಿರುವ ಕನ್ನಡದ 4 ನಟರು ಯಾರು ?

ಮೊದಲ ಇನ್‌ಸ್ಟಾಗ್ರಾಂ ವಿಡಿಯೋ ಹಂಚಿಕೊಂಡ ಪವನ್‌ ಕಲ್ಯಾಣ್‌
ಪವನ್ ಕಲ್ಯಾಣ್ ವಿಡಿಯೋದಲ್ಲಿ ನಾಲ್ಕು ಜನ ಕನ್ನಡದ ನಟರು!
ನಟ ಪವನ್ ಕಲ್ಯಾನ್‌ಗೆ ಆತ್ಮೀಯರು ಈ ಕನ್ನಡದ ನಟರು 
 

Share this Video
  • FB
  • Linkdin
  • Whatsapp


ಮೊದಲ ಇನ್ಸ್ಟಾಗ್ರಾಂ ಪೋಸ್ಟ್( Instagram) ಆಗಿ ಒಂದು ಸುಂದರವಾದ ವಿಡಿಯೋವನ್ನು ಪವನ್‌ ಕಲ್ಯಾಣ್‌ (Pawan Kalyan)ಹಂಚಿಕೊಂಡಿದ್ದಾರೆ. "ಚಿತ್ರರಂಗದ ಭಾಗವಾಗಿರುವುದಕ್ಕೆ ಹಾಗೂ ಅತ್ಯುತ್ತಮ, ಪ್ರತಿಭಾವಂತ ನಟರೊಟ್ಟಿಗೆ ಕೆಲಸ ಮಾಡಿರುವುದಕ್ಕೆ ಸಂತೋಷವಿದೆ” ಎಂಬ ಸವಿಮಾತಿನೊಂದಿಗೆ ಆರಂಭವಾಗುವ ಫೋಟೊಗಳ ಕಲೆಕ್ಷನ್ವುಳ್ಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪವನ್ ಕಲ್ಯಾಣ್ ಈವರೆಗೆ ಕೆಲಸ ಮಾಡಿರುವ ತೆಲುಗು ಚಿತ್ರರಂಗದ ಹಲವು ನಟ, ನಟಿಯರ ಚಿತ್ರಗಳು ಇವೆ. ಅಣ್ಣ ಮೆಗಾಸ್ಟಾರ್ ಚಿರಂಜೀವಿ ಪವನ್ಗೆ ಮುತ್ತು ಕೊಡುತ್ತಿರುವ ಚಿತ್ರದ ಮೂಲಕ ಆರಂಭವಾಗುವ ವಿಡಿಯೋದ ಮೊದಲಲ್ಲಿಯೇ ತೆಲುಗು ಚಿತ್ರರಂಗದ ಸ್ಟಾರ್ಗಳಾದ ಬಾಲಕೃಷ್ಣ, ನಾಗಾರ್ಜು, ವೆಂಕಟೇಶ್ ಅವರೊಟ್ಟಿಗಿನ ಪವನ್ರ ಚಿತ್ರಗಳಿವೆ, ಜೊತೆಗೆ ಬಾಲಿವುಡ್ನ ಲಿಜೆಂಡ್ ಅಮಿತಾಬ್ ಬಚ್ಚನ್ ಅವರೊಟ್ಟಿಗಿನ ಚಿತ್ರವೂ ಇದೆ.ಟಾಲಿ ವುಡ್ ಪವರ್ಸ್ಟಾರ್ ಸ್ಯಾಂಡಲ್ವುಡ್ ಪವರ್ಸ್ಟಾರ್ ಸೋದರ ಶಿವರಾಜ್ಕುಮಾರ್ (Shivaraj kumar)ಅವರನ್ನು ನೆನಪಿಸಿಕೊಂಡಿದ್ದಾರೆ. ವಿಡಿಯೋನ ಆರಂಭದ ಕೆಲವು ಸೆಕೆಂಡ್ಗಳಲ್ಲಿಯೇ ಪವನ್ ಕಲ್ಯಾಣ್ ಹಾಗೂ ಶಿವರಾಜ್ ಕುಮಾರ್ ಅವರು ಒಟ್ಟಿಗೆ ಕಾರ್ಯಕ್ರಮದಲ್ಲಿ ಕುಳಿತು ಮಾತನಾಡುತ್ತಿರುವ ಚಿತ್ರವನ್ನು ಸೇರಿಸಲಾಗಿದೆ. ಪವನ್ ಕಲ್ಯಾಣ್ ಹಾಗೂ ಸುದೀಪ್ (Sudeep) ಅವರು ಒಟ್ಟಿಗೆ ನಿಂತಿರುವ ಚಿತ್ರ ವಿಡಿಯೋನಲ್ಲಿ ಮೂಡಿಬರುತ್ತದೆ. ವಿಡಿಯೋ ಅಂತ್ಯವಾಗುವ ಕೆಲ ಹೊತ್ತಿನ ಮುಂಚೆ ನಟ, ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ (Girish Karnada) ಅವರೊಟ್ಟಿಗಿನ ಚಿತ್ರವನ್ನು ಸಹ ಪವನ್ ಕಲ್ಯಾಣ್ ತಮ್ಮ ನೆನಪಿನ ವಿಡಿಯೋಕ್ಕೆ ಸೇರಿಸಿದ್ದಾರೆ. ಕನ್ನಡದವರೇ ಆದರೂ ಬಹುಭಾಷಾ ನಟ ಎನಿಸಿಕೊಂಡಿರುವ ಪ್ರಕಾಶ್ ರೈ(Prakash Rai) ಅವರೊಟ್ಟಿಗಿನ ಚಿತ್ರವನ್ನು ಪವನ್ ಕಲ್ಯಾಣ್ ವಿಡಿಯೋನಲ್ಲಿ ಸೇರಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  ಸುದೀಪ್ ಅಳಿಯನ ‘ಜಿಮ್ಮಿ’ ಕ್ಯಾರೆಕ್ಟರ್ ಗ್ಲಿಂಪ್ಸ್ ರಿಲೀಸ್: ಇದರ ಮೇಕಿಂಗ್ ಮಾಡಿದೆ ಸಖತ್ ಸೌಂಡ್!

Related Video