ನಿತಿನ್ ಸಿನಿಮಾದಿಂದ ಕೊಡಗಿನ ಬೆಡಗಿ ಕಿಕ್ ಔಟ್: ರಶ್ಮಿಕಾ ಜಾಗಕ್ಕೆ ಕಿಸ್ ಬ್ಯೂಟಿ ಶ್ರೀಲೀಲಾ ಎಂಟ್ರಿ..!

ಶ್ರೀವಲ್ಲಿ ರಶ್ಮಿಕಾ ನಟಿಸಿದ ಎಲ್ಲ ದೃಶ್ಯಗಳೂ ವೇಸ್ಟ್..!
ರಶ್ಮಿಕಾ ಹೆಗಲ ಮೇರಿಲ್ಲ ಶನಿ, ಏರಿದ್ದು ಶ್ರೀಲೀಲಾ.!
ಲಿಲ್ಲಿಯನ್ನ ಹೆಜ್ಜೆ ಹೆಜ್ಜೆಗೂ ಕಾಡುತ್ತಿದ್ದಾರೆ ಕಿಸ್ ಬ್ಯೂಟಿ!

Share this Video
  • FB
  • Linkdin
  • Whatsapp

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮೇಲೆ ಕಿಸ್ ಚೆಲುವೆ ಶ್ರೀಲೀಲಾ ಹೆಗಲೇರಿದ್ದಾರೆ. ಯಾಕ್ ಗೊತ್ತಾ ಶ್ರೀವಲ್ಲಿ ರಶ್ಮಿಕಾ ಕೈಯಲ್ಲಿರೋ ಎಲ್ಲಾ ಅದ್ಭುತ ಸಿನಿಮಾಗಳನ್ನ ಕಿಕ್ ಚೆಲುವೆ ಶ್ರೀಲೀಲಾ ಕಿತ್ತುಕೊಳ್ಳುತ್ತಿದ್ದಾರೆ. ಇದೀಗ ನಿತಿನ್ ನಟನೆಯ ಹೊಸ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ(Rashmika Mandanna ) ನಾಯಕಿ ಆಗಿ ಫಿಕ್ಸ್ ಆಗಿದ್ರು. ಆ ಚಿತ್ರಕ್ಕೆ ವೆಂಕಿ ಕುದುಮುಲ ನಿರ್ದೇಶನ ಮಾಡುತ್ತಿದ್ದು ಸಿನಿಮಾದ ಶೂಟಿಂಗ್ ಕೂಡ ಆಗುತ್ತಿದೆ. ಆದ್ರೆ ಶ್ರೀವಲ್ಲಿ ರಶ್ಮಿಕಾ ನಟಿಸಿದ ಎಲ್ಲ ದೃಶ್ಯಗಳೂ ವೇಸ್ಟ್ ಆದ್ರು ಪರವಾಗಿಲ್ಲ ಅಂತ ಆ ಸಿನಿಮಾದಿಂದ ರಶ್ಮಿಕಾರನ್ನ ಕಿಕ್ಔಟ್ ಮಾಡಲಾಗಿದೆ. ಕೊಡಗಿನ ಕುವರಿ ರಶ್ಮಿಕಾ ಜಾಗಕ್ಕೆ ಕನ್ನಡದ ಮತ್ತೋರ್ವ ಬ್ಯೂಟಿ ಶ್ರೀಲೀಲಾರನ್ನ(Srileela) ಕರೆತರಲಾಗಿದೆ. ನಟ ನಿತಿನ್(Actor Nithin) ಹಾಗೂ ನಿರ್ದೇಶಕ ವೆಂಕಿ ಕುದುಮುಲ ಮತ್ತು ರಶ್ಮಿಕಾ ಮಂದಣ್ಣ ಈ ಮೊದಲು ‘ಭೀಷ್ಮ’ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ರು. ಆದ್ರೆ ಈಗ ಅದೇನಾಯ್ತೋ ಏನೋ ಈ ಮೂವರು ಕಾಂಬಿನೇಷನ್ನ ಇನ್ನೂ ಹೆಸರಿಡದ ಎರಡನೇ ಚಿತ್ರದಿಂದ ರಶ್ಮಿಕಾರನ್ನ ಕೈ ಬಿಡಲಾಗಿದೆ. ಹೀಗಾಗಿ ರಶ್ಮಿಕಾ ನಟಿಸಿದ್ದ ಕೆಲ ದೃಶ್ಯಗಳನ್ನ ಶ್ರೀಲೀಲಾ ಜೊತೆ ಮರು ಚಿತ್ರೀಕರಣ ಮಾಡುತ್ತಿದೆ ಚಿತ್ರತಂಡ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  ಸಿನಿ ಜಗತ್ತಲ್ಲಿ ಮಿಂಚಲು ಎರಡು ಹೆಸರು ಬದಲಿಸಿದ ರಾಮು ಪುತ್ರಿ!

Related Video