ಸಿನಿ ಜಗತ್ತಲ್ಲಿ ಮಿಂಚಲು ಎರಡು ಹೆಸರು ಬದಲಿಸಿದ ರಾಮು ಪುತ್ರಿ!
ಮುದ್ದಿನ ಮಗಳಿಗೆ ಮಾಲಾಶ್ರೀ ಮರು ನಾಮಕರಣ..!
ಸೌಂದರ್ಯದ ಗಣಿ ಮಾಲಾಶ್ರೀ ಸುಪುತ್ರಿ ಆರಾಧನಾ ರಾಮ್
ಎರಡು ಭಾರಿ ಹೆಸರು ಬದಲಿಸುತ್ತಿರೋದೇಕೆ ಮಾಲಾಶ್ರೀ ಪುತ್ರಿ?
ಸ್ಯಾಂಡಲ್‌ವುಡ್‌ನ ಕನಸಿನ ರಾಣಿ ಮಾಲಾಶ್ರೀಯ(Malashree) ದೊಡ್ಡ ಕನಸು ಮತ್ತೆ ಆಸೆ ನನ್ನ ಹಾಗೆ ನನ್ನ ಮಗಳು ಕೂಡ ಬೆಳ್ಳಿತೆರೆ ಮೇಲೆ ಮಿಂಚಬೇಕು. ಸ್ಟಾರ್ ಹೀರೋಯಿನ್ ಆಗಿ ಚಿತ್ರರಂಗವನ್ನ ಆಳಬೇಕು ಅನ್ನೋದು. ಮಗಳ ಬಣ್ಣದ ಜಗತ್ತಿನ ಬೆಳವಣಿಗೆಗಾಗಿ ಸ್ಟ್ರಾಂಗ್ ಪಿಲ್ಲರ್ ರೀತಿ ನಿಂತುಕೊಂಡಿರೋ ಮಾಲಾಶ್ರೀ ತನ್ನ ಮುದ್ದು ಗೊಂಬೆ ಮಗಳು ರಾಧನಾಗೆ(Radhana) ಮರು ನಾಮಕರಣ ಮಾಡಿದ್ದಾರೆ. ರಾಧನಾ ರಾಮ್ ಅಂತ ಇದ್ದ ಮಾಲಾಶ್ರೀ ಪುತ್ರಿಯ ಹೆಸ್ರು ಈಗ ಆರಾಧನಾ ರಾಮ್ ಆಗಿ ಬದಲಾಗಿದೆ. ಮಾಲಾಶ್ರೀ ಮಗಳ ಮೊದಲ ಹೆಸರು ಅನನ್ಯಾ ರಾಮ್. ಆದ್ರೆ ಅನನ್ಯಾ ಹೆಸರು ಕಾಮನ್ ಆಗುತ್ತೆ ಅಂತ ಸಿನಿಮಾದಲ್ಲಿ ಆಫರ್‌ಗಳು ಬರುತ್ತಿದ್ದ ಹಾಗೆ ಮಗಳಿಗೆ ರಾಧನಾ ರಾಮ್ ಅಂತ ಯುನೀಕ್ ಆಗಿರೋ ಹೆಸರನ್ನ ನಾಮಕರಣ ಮಾಡಿದ್ರು. ಈಗ ಈ ರಾಧನಾ ನೇಮ್ ಕೂಡ ಚೇಂಜ್ ಆಗಿದೆ. ರಾಧನಾ ಹೆಸರಿನ ಹಿಂದೆ ಆ ಅಕ್ಷರ ಸೇರಿಸಿ ಆರಾಧನಾ ರಾಮ್(Aradhana Ram) ಅಂತ ಮಾಡಿಕೊಂಡಿದ್ದಾರೆ. ನಿರ್ಮಾಪಕ ರಾಮು ಮಗಳು.. ಅಷ್ಟಕ್ಕು ರಾಧನಾ ಹೆಸರು ಆರಾಧನಾ ಅಂತ ಬದಲಿಸಿಕೊಂಡಿದ್ದು ಯಾಕೆ ಗೊತ್ತಾ.? ಆರಾಧನಾ ಹುಟ್ಟು ಹೆಸರು ಅನನ್ಯಾ ರಾಮ್. ಸಂಖ್ಯಾ ಶಾಸ್ತ್ರದ ಪ್ರಕಾರ ಆ ಅನ್ನೋ ಅಕ್ಷರದಿಂದ ರಾಮು ಮಗಳಿಗೆ ತುಂಬಾ ಒಳ್ಳೆಯದಾಗುತ್ತಂತೆ. ಹೀಗಾಗಿ ಈಗ ಮತ್ತೆ ರಾಧನಾ ಹೆಸರಿನ ಹಿಂದೆ ಆ ಅಕ್ಷರ ಸೇರಿಕೊಂಡು ಆರಾಧನಾ ರಾಮ್ ಅಂತ ಹೆಸರು ಬದಲಿಸಿಕೊಂಡಿದ್ದಾರೆ ಮಾಲಾಶ್ರೀ ಮಗಳು.
ಇದನ್ನೂ ವೀಕ್ಷಿಸಿ: ಚಿರು ಪಾತ್ರಕ್ಕೆ ಜೀವ ತುಂಬಿದ ಧ್ರುವ ಸರ್ಜಾ: ತಮ್ಮನ ಹುಟ್ಟುಹಬ್ಬಕ್ಕೆ ಅಣ್ಣನ ಕೊನೆಯ ಗಿಫ್ಟ್..!