#BoycottBanaras; ಜಮೀರ್ ಪುತ್ರನ ಸಿನಿಮಾ ಬಹಿಷ್ಕರಿಸುವಂತೆ ನೆಟ್ಟಿಗರ ಒತ್ತಾಯ

ಬಾಲಿವುಡ್‌ನಲ್ಲಿ ಬಾಯ್ಕಟ್ ಸಮಸ್ಯೆ ದೊಡ್ಡ ಭೂತವಾಗಿ ಕಾಡುತ್ತಿದೆ. ಹಿಂದಿಯ ಅನೇಕ ಸಿನಿಮಾಗಳು ಬಹಿಷ್ಕರಿಸುವಂತೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡುತ್ತಾರೆ.ಇದೀಗ ಕನ್ನಡ ಸಿನಿಮಾಗೂ ಬಾಯ್ಕಟ್ ಸಮಸ್ಯೆ ಎದುರಾಗಿದೆ. ಜಯತೀರ್ಥ ನಿರ್ದೇಶದ ಬನಾಸರ್ ಚಿತ್ರಕ್ಕೆ ಬಾಯ್ಕಟ್ ಬಿಸಿ ತಟ್ಟಿದೆ.

Share this Video
  • FB
  • Linkdin
  • Whatsapp

ಬಾಲಿವುಡ್‌ನಲ್ಲಿ ಬಾಯ್ಕಟ್ ಸಮಸ್ಯೆ ದೊಡ್ಡ ಭೂತವಾಗಿ ಕಾಡುತ್ತಿದೆ. ಹಿಂದಿಯ ಅನೇಕ ಸಿನಿಮಾಗಳು ಬಹಿಷ್ಕರಿಸುವಂತೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡುತ್ತಾರೆ. ಇತ್ತೀಚಿಗೆ ಬಂದ ಅನೇಕ ಸಿನಿಮಾಗಳು ಬಾಯ್ಕಟ್ ಸಮಸ್ಯೆಯ ಸುಳಿಯಲ್ಲಿ ಸಿಲುಕ್ಕಿದ್ದವು. ಇದೀಗ ಕನ್ನಡ ಸಿನಿಮಾಗೂ ಬಾಯ್ಕಟ್ ಸಮಸ್ಯೆ ಎದುರಾಗಿದೆ. ಜಯತೀರ್ಥ ನಿರ್ದೇಶದ ಬನಾಸರ್ ಚಿತ್ರಕ್ಕೆ ಬಾಯ್ಕಟ್ ಬಿಸಿ ತಟ್ಟಿದೆ. ಸಿನಿಮಾ ಬಹಿಷ್ಕರಿಸುವಂತೆ ನಟ್ಟಿಗರು ಒತ್ತಾಯ ಮಾಡುತ್ತಿದ್ದಾರೆ. ಅಷ್ಟಕ್ಕೂ ಕನ್ನಡದ ಬನಾರಸ್ ಸಿನಿಮಾಗೆ ಈ ಸಮಸ್ಯೆ ಎದುರಾಗಿದ್ದು ಯಾಕೆ ಅಂತೀರಾ ಜಮೀರ್ ಅಹ್ಮದ್. ಹೌದು ಈ ಸಿನಿಮಾದ ನಾಯಕ ಜಮೀರ್ ಪುತ್ರ ಝೈದ್ ಖಾನ್. ಜಮೀರ್ ರಾಜಕೀಯ ನಿಲುವುಗಳನ್ನು ಮುಂದಿಟ್ಟುಕೊಂಡು ಪುತ್ರನ ಸಿನಿಮಾ ಬಹಿಷ್ಕರಿಸುವಂತೆ ಟ್ರೆಂಡ್ ಮಾಡಲಾಗುತ್ತಿದೆ. ಮೂಲಕ ಬಾಯ್ಕಟ್ ಸಮಸ್ಯೆ ಸ್ಯಾಂಡಲ್ ವುಡ್‌ಗೂ ಕಾಲಿಟ್ಟಿದೆ. ಇನ್ನು ಯಾವೆಲ್ಲ ಸಿನಿಮಾಗಳಿಗೆ ಈ ಸಮಸ್ಯೆ ಕಾಡಲಿದೆ ಎನ್ನುವುದು ಕಾದುನೋಡಬೇಕಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred


Related Video