ಮತ್ತೆ ಮಿಂಚಿದ ಮುಂಗಾರುಮಳೆ 2 ನೇಹಾ ಶೆಟ್ಟಿ! ಟಾಲಿವುಡ್‌ನಲ್ಲಿ ಅರಳುತ್ತಿರೋ ಮತ್ತೊಬ್ಬ ಕನ್ನಡ ಚೆಲುವೆ !

ಕನ್ನಡದ ‘ಮುಂಗಾರು ಮಳೆ 2’ ಸಿನಿಮಾದಿಂದ ಶುರುವಾದ ನೇಹಾ ಶೆಟ್ಟಿ ಜರ್ನಿ ಈಗ ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಪೀಕ್‌ನಲ್ಲಿದ್ದಾರೆ.

Share this Video
  • FB
  • Linkdin
  • Whatsapp

ಕರಾವಳಿ ನಟಿ ನೇಹಾ ಶೆಟ್ಟಿ(Neha Shetty) ಟಾಲಿವುಡ್(Tollywood) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಡಿಜೆ ಟಿಲ್ಲು’ ನಂತರ ಈಗ ‘ಗ್ಯಾಂಗ್ಸ್ ಆಫ್ ಗೋದಾವರಿ’(Gangs of Godavari) ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ‘ಡಿಜೆ ಟಿಲ್ಲು’ ಸಿನಿಮಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಮೇಲೆ ನೇಹಾಗೆ ಬೇಡಿಕೆ ಹೆಚ್ಚಾಗಿತ್ತು. ಇತ್ತೀಚೆಗೆ ರಿಲೀಸ್ ಆದ ‘ಟಿಲ್ಲು ಸ್ಕ್ವೇರ್’ನಲ್ಲಿ ಗೆಸ್ಟ್ ರೋಲ್ನಲ್ಲಿ ನೇಹಾ ನಟಿಸಿದ್ದರು. ಇದೀಗ ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದಲ್ಲಿ ವಿಶ್ವಕ್ ಸೇನ್ಗೆ ನಾಯಕಿಯಾಗಿ ನೇಹಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ.. ಕೃಷ್ಣ ಚೈತನ್ಯ ಬರೆದು ನಿರ್ದೇಶಿಸಿರುವ ಈ ಚಿತ್ರ ಆಕ್ಷನ್ ಥ್ರಿಲ್ಲರ್ ಡ್ರಾಮ ಆಗಿದೆ. ಈ ಹಿಂದೆ ಬಿಡುಗಡೆಯಾದ ಚಿತ್ರದ ಗ್ಲಿಂಪ್ಸ್ ವಿಡಿಯೋ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ಒಂದು ಹಳ್ಳಿಗಾಡಿನಲ್ಲಿ ನಡೆಯೋ ಘಟನೆಯ ಸುತ್ತ ಸುತ್ತುವ ಕತೆಯಾಗಿ ಬಿಂಬಿಸಿತ್ತು. ನಟಿ ನೇಹಾ ಶೆಟ್ಟಿಗೆ ಮತ್ತೆ ಈ ಚಿತ್ರ ಬ್ರೇಕ್ ನೀಡುವ ಎಲ್ಲಾ ಸಾಧ್ಯತೆಗಳಿವೆ. ರಶ್ಮಿಕಾ, ಶ್ರೀಲೀಲಾ, ನಂತರ ಇದೀಗ ನೇಹಾ ಶೆಟ್ಟಿ ತೆಲುಗಿನಲ್ಲಿ(Telugu) ತಳವೂರುವ ಎಲ್ಲ ಸೂಚನೆಗಳು ಈ ಚಿತ್ರದಿಂದ ಸಿಗುತ್ತಿದೆ. ಈ ಚಿತ್ರದಲ್ಲೂ ನೇಹಾಶೆಟ್ಟಿ ಗ್ಲ್ಯಾಮರ್ ರಂಗಿನಿಂದ ಮತ್ತೇರಿಸುತ್ತಿದ್ದು. ಚಿತ್ರದಲ್ಲಿ ಪಾತ್ರ ಖಡಕ್ ಆಗಿದೆ ಎಂದು ಹೇಳುತ್ತಿದ್ದಾರೆ, ನಮ್ಮ ನೆಲದ ಪ್ರತಿಭೆ ಪಕ್ಕದ ರಾಜ್ಯದಲ್ಲಿ ಮಿಂಚುತ್ತಿದ್ದು ಡಿಜೆ ಟಿಲ್ಲು ನಂತರ ಮತ್ತೊಂದು ಸಕ್ಸಸ್ ಸಿಗುವ ಎಲ್ಲ ಸಾಧ್ಯತೆಗಳು ಇವೆ. ಇದೇ ಮೇ 31ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಸಕ್ಸಸ್ಗಾಗಿ ಎದುರು ನೋಡ್ತಿರುವ ನೇಹಾಗೆ ಈ ಚಿತ್ರ ಕೈ ಹಿಡಿಯುತ್ತಾ? ಟಾಲಿವುಡ್ನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ತಾರಾ ಕಾದುನೋಡಬೇಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಪ್ರೆಸ್‌ಮೀಟ್‌ನಲ್ಲಿ ಯುದ್ಧಕ್ಕೆ ರೆಡಿ ಅಂದಿದ್ದೇಕೆ? ಡಿಸೆಂಬರ್ ಮೇಲೆ ಕಣ್ಣಿಟ್ಟ ಧ್ರುವ, ದರ್ಶನ್!

Related Video