Asianet Suvarna News Asianet Suvarna News

ಪ್ರೆಸ್‌ಮೀಟ್‌ನಲ್ಲಿ ಯುದ್ಧಕ್ಕೆ ರೆಡಿ ಅಂದಿದ್ದೇಕೆ? ಡಿಸೆಂಬರ್ ಮೇಲೆ ಕಣ್ಣಿಟ್ಟ ಧ್ರುವ, ದರ್ಶನ್!

ಸ್ಯಾಂಡಲ್‌ವುಡ್‌ ಮತ್ತೆ ಆಕ್ಟೀವ್ ಆಗುತ್ತಿದೆ. ಸ್ಟಾರ್‌ಗಳ ಸಿನಿಮಾಗಳು ರಿಲೀಸ್‌ಗೆ ರೆಡಿ ಆಗುತ್ತಿವೆ. ದರ್ಶನ್ ಡೆವಿಲ್ ಚಿತ್ರ ಡಿಸೆಂಬರ್‌ನಲ್ಲಿ ರಿಲೀಸ್ ಎಂದು ಇತ್ತೀಚೆಗಷ್ಟೆ ಚಿತ್ರತಂಡ ಅನೌನ್ಸ್ ಮಾಡಿತ್ತು. ಇದೀಗ ಧ್ರುವ ಸರ್ಜಾ ಕೆಡಿ ಸಿನಿಮಾ ಕೂಡ  ಡಿಸೆಂಬರ್‌ನಲ್ಲೇ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಅನೌನ್ಸ್ ಮಾಡಿ ದೊಡ್ಡ ಸುದ್ದಿಗೆ ಕಾರಣವಾಗಿದೆ.

ಸುಮಾರು ಮೂರು ವರ್ಷಗಳ ಬಳಿಕ ನಟ ಧ್ರುವ ಸರ್ಜಾ(Dhruva Sarja) ನಟನೆಯ ಎರಡು ಸಿನಿಮಾಗಳು ರಿಲೀಸ್ ಆಗುತ್ತಿವೆ. ‘ಮಾರ್ಟಿನ್’ ಹಾಗೂ ‘ಕೆಡಿ’ ಈ ಎರಡೂ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಿವೆ. ಆದರೆ ಇದರ ಮಧ್ಯೆ ನಿರ್ದೇಶಕ ಪ್ರೇಮ್ ‘ಕೆಡಿ’ ಸಿನಿಮಾವನ್ನು(KD movie) ಡಿಸೆಂಬರ್‌ನಲ್ಲಿ ರಿಲೀಸ್(Release) ಮಾಡುವುದಾಗಿ ಹೇಳಿದ್ದಾರೆ. ಆದರೆ ಇದೇ ಡಿಸೆಂಬರ್‌ನಲ್ಲಿ ದರ್ಶನ್(Darshan) ಸಿನಿಮಾ ‘ಡೆವಿಲ್’(Devil movie) ಕೂಡ ಬಿಡುಗಡೆಯಾಗುತ್ತಿದೆ. ಕೆಡಿ ರಿಲೀಸ್ ಬಗ್ಗೆ ಮಾತಾಡಿದ ನಟ ಹಾಗೂ ನಿರ್ದೇಶಕ ಪ್ರೇಮ್, ಯುದ್ಧಕ್ಕೆ ರೆಡಿ ಯಾರಾದ್ರು ಬನ್ನಿ. ಮೊದಲ ಇಂಡಿಯನ್ ಸಿನಿಮಾ ನಮ್ಮದು. ಆಗಸ್ಟ್ ತಿಂಗಳಲ್ಲಿ ಟೀಸರ್ ರಿಲೀಸ್ ಮಾಡ್ತೀನಿ. ಮುಂಬೈನಲ್ಲಿ ಟೀಸರ್ ಲಾಂಚ್ ಆಗಲಿದೆ. ಅದೇ ತಿಂಗಳು ಫಸ್ಟ್ ಸಿಂಗಲ್ ರಿಲೀಸ್ ಆಗಲಿದ್ದು, ಡಿಸೆಂಬರ್ ತಿಂಗಳಲ್ಲಿ KD ಪಿಚ್ಚರ್ ರಿಲೀಸ್ ಮಾಡ್ತೀವಿ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಯುದ್ಧಕ್ಕೆ ಯಾರು ಬರ್ತೀರೋ ಬನ್ನಿ ನಾವ್ ರೆಡಿ ಎಂದಿದ್ದಾರೆ. ಒಂದುಕಡೆ ಪ್ರೇಮ ಬರಹ ಸಿನಿಮಾದ ವಿತರಣೆಗೆ ಸಂಬಂಧಪಟ್ಟಂತೆ ದರ್ಶನ್ ಅರ್ಜುನ್ ಸರ್ಜಾ ನಡುವೆ ಹಣಕಾಸಿನ ವಿಚಾರಕ್ಕೆ ಮಾತುಕತೆ ನಡೆದು ಮನಸ್ತಾಪ ಉಂಟಾಗಿತ್ತು. ಇದೇ ಕಾರಣಕ್ಕೆ ಧ್ರುವ ಸರ್ಜಾ ಹಾಗೂ ದರ್ಶನ್ ನಡುವೆಯೂ ವಿವಾದ ಉಂಟಾಗಿ ಇಬ್ಬರು ನಟರ ಅಭಿಮಾನಿಗಳ ಫ್ಯಾನ್ ವಾರ್‌ಗೂ ಕಾರಣವಾಗಿತ್ತು. ಈಗ ಒಂದೇ ತಿಂಗಳಲ್ಲಿ ಇಬ್ಬರು ನಟರ ಚಿತ್ರಗಳು ರಿಲೀಸ್ ಆಗುತ್ತಿರೋದು ಗಾಂಧಿನಗರದ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. 

ಇದನ್ನೂ ವೀಕ್ಷಿಸಿ:  ‘ರೆಮಲ್’ ಅಬ್ಬರಕ್ಕೆ ಜನಜೀವನವೇ ಅಲ್ಲೋಲಕಲ್ಲೋಲ..ಬಂಗಾಳಕೊಲ್ಲಿಯಿಂದ ಬರುತ್ತಿರುವ ಚಂಡಿ ಮಾರುತ..!

Video Top Stories