Asianet Suvarna News Asianet Suvarna News
breaking news image

Nayanthara: ಯಶ್ ಸಿನಿಮಾ ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್..! ಟಾಕ್ಸಿಕ್ ಟೀಂ ಸೇರಿದ ಲೇಡಿ ಸೂಪರ್ ಸ್ಟಾರ್!

ರಾಕಿಂಗ್ ಸ್ಟಾರ್ ಯಶ್ ನಟ ದರ್ಶನ್. ಇವರಿಬ್ಬರು ಒಂದ್ ಟೈಂನಲ್ಲಿ ಜೋಡೆತ್ತಾಗಿ ಹೋರಾಡಿ ಮಂಡ್ಯ ಮಂದಿ ಮನಸ್ಸು ಗೆದ್ದಿದ್ರು. ಆದ್ರೆ ಈ ಜೋಡೆತ್ತಲ್ಲಿ ಒಂದೆಂತ್ತು ನೊಗಾ ಮುರಿದುಕೊಂಡು ಅಡ್ಡ ದಾರಿ ಹಿಡಿದ್ರೆ ಮತ್ತೊಂದೆತ್ತು ಯಾರ್ ಸಹವಾಸ ಬೇಡ ಅಂತ ತನ್ ಪಾಡಿಗೆ ತನ್ನ ಫ್ಯಾನ್ಸ್ ಇಷ್ಟ ಪಡೋ ಹಾಗೆ ಕೆಲಸ ಮಾಡ್ಕೊಂಡು ಹೋಗುತ್ತಿದ್ದಾರೆ. 

ರಾಕಿಂಗ್ ಸ್ಟಾರ್ ಯಶ್. ದರ್ಶನ್ ಮೇಲೆ ಬಂದಿರೋ ಕೊಲೆ ಆರೋಪ ಅವರ ಫ್ಯಾನ್ಸ್ಅನ್ನ ದೊಡ್ಡ ಮುಜುಗರಕ್ಕೆ ತಳ್ಳಿದೆ. ಆದ್ರೆ ನಟ ಯಶ್ ತನ್ನ ಫ್ಯಾನ್ಸ್ ತಲೆ ತಗ್ಗಿಸೋ ಕೆಲಸ ಮಾಡಲ್ಲ ನಂದೇನಿದ್ರು ನನ್ನ ಅಭಿಮಾನಿಗಳು ತಲೆ ಎತ್ತಿಕೊಂಡೇ ಓಡಾಡೋ ಹಾಗೆ ಕೆಲಸ ಮಾಡುತ್ತೇನೆ ಅಂತ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಹೀಗಾಗಿ ದರ್ಶನ್ ವಿವಾದದ ಮಧ್ಯೆಯೂ ಯಶ್ರ ಟಾಕ್ಸಿಕ್ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ಒಂದು ಸಿಕ್ಕಿದೆ. ರಾಕಿಂಗ್ ಸ್ಟಾರ್ ಯಶ್ (Yash)19ನೇ ಸಿನಿಮಾ ಟಾಕ್ಸಿಕ್ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಇತ್ತ ರಾಕಿ ಭಾಯ್ ಕೂಡ ಟಾಕ್ಸಿಕ್ ಸಿನಿಮಾ(Toxic movie)ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ನಟ ಯಶ್ ಸದ್ದಿಲ್ಲದೆ ಟಾಕ್ಸಿಕ್ ಸಿನಿಮಾ ಶೂಟಿಂಗ್ ಶುರು ಮಾಡಿದ್ದಾರೆ. ಸಿನಿಮಾ ಶೂಟಿಂಗ್ ವಿಡಿಯೋ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಟಾಕ್ಸಿಕ್ ಸಿನಿಮಾ ಸ್ಟಾರ್ ಕಾಸ್ಟ್ ಬಗ್ಗೆ ಹಲವು ರೂಮರ್ಸ್‌ಗಳು ಹರಿದಾಡ್ತಿದೆ. ಇದೀಗ ಹೊಸ ಸುದ್ದಿ ಹೊರಬಿದ್ದಿದೆ. ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾ(Nayanthara) ಟಾಕ್ಸಿಕ್ ಸಿನಿಮಾ ತಂಡ ಸೇರಿದ್ದಾರೆ. ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ನಟಿಸಬೇಕಿತ್ತು. ಕರೀನಾ ಯಶ್ ಅಕ್ಕನ ರೋಲ್ ಮಾಡಬೇಕಿತ್ತು. ಆದ್ರೆ ಆ ಜಾಗಕ್ಕೆ ನಯನತಾರಾ ಎಂಟ್ರಿ ಆಗಿದ್ದಾರೆ. ನಯನತಾರಾ ಯಶ್ ಸಹೋದರಿ ರೋಲ್ ಮಾಡಲಿದ್ದಾರೆ. ಈಗಾಗಲೇ ಲೇಡಿ ಸೂಪರ್ ಸ್ಟಾರ್ ನಯನತಾರಾ ಟಾಕ್ಸಿಕ್ ಚಿತ್ರತಂಡ ಸೇರಿದ್ದಾರೆ. ಭಾರತದ ವಿವಿಧ ಸ್ಥಳಗಳಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಸಧ್ಯ ಯಶ್ ಮತ್ತು ನಯನತಾರಾ ಶೆಡ್ಯೂಲ್‌ ಶೂಟಿಂಗ್ ಸಾಗುತ್ತಿದೆ. 

ಇದನ್ನೂ ವೀಕ್ಷಿಸಿ:  ಹೆಣ್ಣು, ಹೆಂಡದ ಚಟದಿಂದ ದರ್ಶನ್ ವಿಲನ್ ಆಗಿದ್ದಾನೆ! ಶಿಷ್ಯನ ನಡವಳಿಕೆಗೆ ಕೋಪಗೊಂಡ ಗುರು!

Video Top Stories