Asianet Suvarna News Asianet Suvarna News

ಹೆಣ್ಣು, ಹೆಂಡದ ಚಟದಿಂದ ದರ್ಶನ್ ವಿಲನ್ ಆಗಿದ್ದಾನೆ! ಶಿಷ್ಯನ ನಡವಳಿಕೆಗೆ ಕೋಪಗೊಂಡ ಗುರು!

ನಟ ದರ್ಶನ್ ಲೈಫ್‌ನಲ್ಲಿ ಆಗಬಾರದಲ್ಲೇ ಆಗುತ್ತಿದೆ. ತೆರೆ ಮೇಲೆ ನಾಯಕನಾಗಿ ಎಲ್ಲರ ಮನಸ್ಸು ಗೆಲ್ಲುತ್ತಿದ್ದ ದರ್ಶನ್ ರೀಯಲ್ ಲೈಫ್‌ನಲ್ಲಿ ಖಳ ನಟ, ಕ್ರೂರಿ ಮನಸ್ಸಿನ ತುಂಬೆಲ್ಲಾ ಕ್ರೌರ್ಯವನ್ನೇ ತುಂಬಿಕೊಂಡಿರೋ ನಟ ಅನ್ನೋ ಪಟ್ಟ ಕಟ್ಟಿಕೊಂಡು ಓಡಾಡಬೇಕಾಗಿದೆ. ಅದಕ್ಕೆ ಕಾರಣ ದರ್ಶನ್ ತನ್ನ ವೈಯಕ್ತಿಕ ಜೀವನಲ್ಲಿ ಅಂಟಿಸಿಕೊಂಡಿರೋ ಹೆಣ್ಣು ಹೆಂಡದ ಚಟ ಎನ್ನಲಾಗುತ್ತಿದೆ.

ಇಷ್ಟು ದಿನ ನಟ ಅನ್ನೋ ಪಟ್ಟದಲ್ಲಿ ಸಾಮ್ರಾಜ್ಯ ಕಟ್ಟಿಕೊಂಡಿದ್ದ ದರ್ಶನ್(Darshan) ಈಗ ಪವಿತ್ರಾ ಗೌಡ ಸಹವಾಸದಿಂದ ಜೈಲು ಸೇರಿದ್ದಾರೆ. ಪವಿತ್ರಾ ಗೌಡಗೆ(Pavitra Gowda) ಕೆಟ್ಟ ಮೆಸೇಜ್ ಕಳಿಸಿದ ಅನ್ನೋ ಒಂದೇ ಕಾರಣಕ್ಕೆ ತನ್ನ ಅಭಿಮಾನಿ ಆಗಿದ್ದ ರೇಣುಕಾಸ್ವಾಮಿಯನ್ನೇ (Renukaswamy) ಕ್ರೂರವಾಗಿ ಕೊಂದ ಆರೋಪ ದರ್ಶನ್ ಮೇಲೆ ಬಂದಿದೆ. ತೆರೆ ಮೇಲಿದ್ದ ಈ ಹೀರೋ ಈಗ ಕಂಬಿ ಹಿಂದೆ ಸೇರಿರೋ ವಿಲನ್ ಆಗಿದ್ದಾರೆ. ಇದನ್ನ ನೋಡಿ ದರ್ಶನ್ಗೆ ನಟನೆ ಹೇಳಿಕೊಟ್ಟ ಮೊದಲು ಗುರು ಅಡ್ಡಂಡ ಕಾರ್ಯಪ್ಪ(Addanda Cariappa) ಸಂಕಟ ಪಡುತ್ತಿದ್ದಾರೆ. ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು. ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಲೇ ಬೇಕು. ಕಳೆದ ಐದು ದಿನದಿಂದ ಪೊಲೀಸ್ ಕಸ್ಟಡಿಯಲ್ಲಿ ಕಂಬಿ ಹಿಂದೆ ಸೇರಿರೋ ದರ್ಶನ್ಗೆ ಈಗ ತಪ್ಪಿನ ಅರಿವಾಗಿದೆಯಂತೆ. ತಾನು ಮಾಡಿದ ಕೆಲಸಕ್ಕೆ ಪಶ್ಛಾತಾಪ ಪಡುತ್ತಿದ್ದಾರಂತೆ. ದರ್ಶನ್ ಪರಿಚಯಸ್ಥ ಅಧಿಕಾರಿಗಳ ಬಳಿ‌ತಪ್ಪಾಗೋಯ್ತು ಅಂದಿದ್ದಾರೆ. ಕೋತಿ ತಾನು ಕೆಡೋದಲ್ಲದೇ ವನವನ್ನೆಲ್ಲಾ ಕೆಡಿಸಿತು ಅಂತಾರಲ್ಲ. ಆ ಮಾತು ಈ ಡಿ ಗ್ಯಾಂಗ್‌ಗೆ ಪಕ್ಕಾ ಸೂಟ್ ಆಗುತ್ತೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಜೊತೆ ಕೈ ಜೋಡಿಸಿದ್ದ ಉಳಿದ ಆರೋಪಿಗಳು ಈಗ ಪಶ್ಚಾತಾಪ ಪಡುತ್ತಿದ್ದಾರಂತೆ. ಅತಿರೇಕದ ಅಭಿಮಾನದಲ್ಲಿ ದರ್ಶನ್ಗೆ ಉಪಕಾರ ಮಾಡಲು ಹೋಗಿ ಹಿಂಬದಿ ಸುಟ್ಟುಕೊಂಡು ಕೂರಲೂ ಆಗದೇ ನಿಲ್ಲಲೂ ಆಗದೆ ಒದ್ದಾಡುತ್ತಿದ್ದಾರಂತೆ. ಯಾಕಂದ್ರೆ ಎ ಒನ್ ಆರೋಪಿ ಪವಿತ್ರಾ ಗೌಡ ಎ 2 ಆರೋಪಿ ದರ್ಶನ್ ಹೊರತು ಪಡಿಸಿ ಉಳಿದ ಆರೋಪಿಗಳ ಸಪೋರ್ಟ್ಗೆ ಯಾರು ಬರುತ್ತಿಲ್ಲವಂತೆ. ಬಾಸ್ ಎಂದು ಜೈ ಕಾರ ಹಾಕಿ ಕಂಬಿ ಹಿಂದೆ ಸೇರಿದವರ ಕುಟುಂಬಗಳು ಈಗ ಕಣ್ಣೀರು ಹಾಕುತ್ತಿವೆ.

ಇದನ್ನೂ ವೀಕ್ಷಿಸಿ:  Weekly-Horoscope: ಈ ರಾಶಿಯವರಿಗೆ ವೃತ್ತಿಯಲ್ಲಿ ವಿಶೇಷ ಅನುಕೂಲವಿದ್ದು, ಹೆಚ್ಚಿನ ವ್ಯಯ ಇದೆ..

Video Top Stories