Asianet Suvarna News Asianet Suvarna News

ಕೆಜಿಎಫ್ ನಿರ್ಮಾಪಕರಿಂದ ಡಾಲಿ ಧನಂಜಯ್ 'ಹೊಯ್ಸಳ ' ಚಿತ್ರಕ್ಕೆ ಓಂಕಾರ.!

ಕೆಜಿಎಫ್ (KGF 2) ಸಿನಿಮಾ ಮೂಲಕ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಶಿಸ್ತು ಬದ್ದ ನಿರ್ಮಾಣ ಸಂಸ್ಥೆ ಅನ್ನೋ ಬ್ರ್ಯಾಂಡ್ ಕ್ರಿಯೆಟ್ ಮಾಡಿರೋ ಹೊಂಬಾಳೆ ಪ್ರೊಡಕ್ಷನ್ (Hombale Production) ಟೀಂ ಈಗ ಡಾಲಿ ಧನಂಜಯ್ (Dali Dhananjay) ಜೊತೆ ಹೊಸ ಸಿನಿಮಾ ಅನೌನ್ಸ್ ಮಾಡಿದೆ. 
 
ಈ ಹಿಂದೆ ರತ್ನನ್ ಪ್ರಪಂಚ ಸಿನಿಮಾ ಮಾಡಿದ್ದ ಹೊಂಬಾಳೆ ಪ್ರೊಡಕ್ಷನ್‌ನ ಅಂಗ ಸಂಸ್ಥೆ ಕೆಆರ್‌ಜಿ ಸ್ಟುಡಿಯೋ ಈ ಭಾರಿ ಮತ್ತೆ ನಟ ಭಯಂಕರ ಡಾಲಿ ಧನಂಜಯ್ ಜೊತೆ ಹೊಯ್ಸಳ ಅನ್ನೋ ಸಿನಿಮಾ ಶುರುಮಾಡಿದೆ. ಈ ಸಿನಿಮಾದ ಮುಹೂರ್ತ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿದೆ. ಹೊಯ್ಸಳ ಚಿತ್ರಕ್ಕೆ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರ್ ಅರ್ಪಿಸುತ್ತಿದ್ದು, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. 

ಕೆಜಿಎಫ್ 2 ಗೆದ್ದಿದ್ದಕ್ಕೆ ಚಿಕ್ಕ ಕಥೆ ಹೇಳಿ ಧನ್ಯವಾದ ತಿಳಿಸಿದ ರಾಕಿಭಾಯ್!

ವಿಜಯ್ ಎನ್ ಅವರು ಕಥೆ, ಚಿತ್ರಕಥೆ ಬರೆದು ಸಿನಿಮಾವನ್ನ ನಿರ್ದೇಶಿಸುತ್ತಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ. ಕಾರ್ತಿಕ್ ಎಸ್ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ. ಬಡವ ರಾಸ್ಕಲ್ ಸಿನಿಮಾದಲ್ಲಿ ಜೊತೆಯಾಗಿದ್ದ ಧನಂಜಯ್ ಹಾಗೂ ಅಮೃತ ಅಯ್ಯಂಗಾರ್ ಜೋಡಿ ಈ ಸಿನಿಮಾದಲ್ಲೂ ಜೊತೆಯಾಗುತ್ತಿದ್ದಾರೆ. ಇನ್ನುಳಿದಂತೆ  ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ರಾಜೇಶ್ ನಟರಂಗ ಹಾಗೂ ನಾಗಭೂಷಣ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
 
Video Top Stories