Asianet Suvarna News Asianet Suvarna News

ಕನ್ನಡದಲ್ಲಿ ಹಿಟ್ ಆಯ್ತು ಮತ್ತೊಂದು ಹೊಸಬರ ಸಿನಿಮಾ..! ಮಿ. ನಟ್ವರ್ ಲಾಲ್ ಮೆಚ್ಚಿದ ಸ್ಟಾರ್ಸ್..!

ಕನ್ನಡ ಸಿನಿ ಪ್ರೇಕ್ಷಕರಿಗೆ ಕ್ರೈಂ ಥ್ರಿಲ್ಲರ್ ಸಿನಿಮಾ ಟ್ರೀಟ್.!
ಸಿನಿ ಪ್ರೇಮಿಗಳ ಮನಸ್ಸು ಗೆದ್ದ 'ಮಿಸ್ಟರ್ ನಟ್ವರ್‌ಲಾಲ್‌' 
ಮಿ.ನಟ್ವರ್ ಲಾಲ್ ಸಿನಿಮಾ ಮೆಚ್ಚಿದ ಕನ್ನಡ ಕಲಾವಿದರು
ತನುಷ್ ಶಿವಣ್ಣ, ಸೋನಲ್ ಮಂಥೋರೆ ನಟಿಸಿರೋ ಚಿತ್ರ

ಕಳೆದ ವಾರ ಕನ್ನಡದಲ್ಲಿ ಕ್ರೈಂ ಥ್ರಿಲ್ಲರ್ ಸಿನಿಮಾ ಮಿಸ್ಟರ್ ನಟ್ವರ್ ಲಾಲ್(Mr. Natwarlal) ಸ್ಯಾಂಡಲ್‌ವುಡ್(Sandalwood) ಸಿನಿ ಪ್ರೇಕ್ಷಕರಿಗೆ ದರ್ಶನ ಕೊಟ್ಟಿತ್ತು. ಈ ಸಿನಿಮಾ ನೋಡಿದ ಪ್ರೇಕ್ಷಕರು ಮಿಸ್ಟರ್ ನಟ್ವರ್‌ಲಾಲ್‌ ಗೆಲ್ಲುತ್ತೆ ತುಂಬಾ ಚನ್ನಾಗಿದೆ ಅನ್ನೋ ರಿವ್ಯೂ ಕೊಟ್ಟಿದ್ರು. ಇದೀಗ ಮಿಸ್ಟರ್ ನಟ್ವರ್‌ಲಾಲ್ ಮೂವಿಯನ್ನ ಕನ್ನಡ ಸಿನಿ ಪ್ರೇಕ್ಷಕರು ಮೆಚ್ಚಿದ್ದಾರೆ. ಸೆಲೆಬ್ರಿಟಿ ಶೋನಲ್ಲಿ(Celebrity show) ಸಿನಿಮಾ ನೋಡಿದ ಕನ್ನಡದ ಕಲಾವಿದರು ಈ ಸಿನಿಮಾವನ್ನ ಮೆಚ್ಚಿ ಕೊಂಡಾಡಿದ್ದಾರೆ. ಮಡಮಕ್ಕಿ, ನಂಜುಂಡಿ ಕಲ್ಯಾಣ2 ಚಿತ್ರಗಳಲ್ಲಿ ನಟಿಸಿದ್ದ ತನುಷ್ ಶಿವಣ್ಣ ನಟಿಸಿ ನಿರ್ಮಾಣ ಮಾಡಿರುವ ಚಿತ್ರ ಮಿಸ್ಟರ್ ನಟ್ವರ್ ಲಾಲ್. ಈ ಸಿನಿಮಾಲ್ಲಿ 8 ಡಿಫರೆಂಟ್ ಅವತಾರಗಳಲ್ಲಿ ನಟ ತನುಷ್ ಕಾಣಿಸಿಕೊಂಡಿದ್ದಾರೆ. ತನುಷ್ ಶಿವಣ್ಣಾಗೆ ನಾಯಕಿಯಾಗಿ  ಸೋನಲ್ ಮಂಥೋರೋ ನಟಿಸಿದ್ದಾರೆ. ಡೈರೆಕ್ಟರ್ ಲವ ಆಕ್ಷನ್ ಕಟ್ ಹೇಳಿರೋ ಮಿಸ್ಟರ್ ನಟ್ವರ್ ಲಾಲ್ ಸಿನಿಮಾದಲ್ಲಿ ಮೆಡಿಕಲ್ ಮಾಫಿಯಾ, ಪೊಲಿಟಿಕಲ್ ಮಾಫಿಯಾ ಎಲ್ಲಾ ಇದೆ. ಚಿತ್ರದಲ್ಲಿ ನಟ ರಾಜೇಶ್ ನಟರಂಗ, ಯಶ್ ಶೆಟ್ಟಿ, ಹರಿಣಿ, ವಿಜಯ್ ಚೆಂಡೂರ್, ಕಾಕ್ರೋಚ್ ಸುಧಿ, ಕಾಂತರಾಜ್ ಕಡ್ಡಿಪುಡಿ ಅದ್ಭತವಾಗಿ ನಟಿಸಿದ್ದಾರೆ. ಈ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಮಿಸ್ಟರ್ ನಟ್ವಲ್ ಲಾಲ್ ಕೂಡ ಭಾರಿ ಎಂಟರ್ಟೈನ್ಮೆಂಟ್ ಕೊಡುತ್ತಿದೆ. 

ಇದನ್ನೂ ವೀಕ್ಷಿಸಿ:  Allu Ayan: ಅಲ್ಲು ಅರ್ಜುನ್ ಪುತ್ರ ಚಿತ್ರರಂಗಕ್ಕೆ ಎಂಟ್ರಿ..? ಅಪ್ಪನ ಸಿನಿಮಾದಲ್ಲೇ ಅಲ್ಲು ಅಯಾನ್ ಅಭಿನಯ..!