Allu Ayan: ಅಲ್ಲು ಅರ್ಜುನ್ ಪುತ್ರ ಚಿತ್ರರಂಗಕ್ಕೆ ಎಂಟ್ರಿ..? ಅಪ್ಪನ ಸಿನಿಮಾದಲ್ಲೇ ಅಲ್ಲು ಅಯಾನ್ ಅಭಿನಯ..!

ಸ್ಟೈಲಿಶ್‌ ಸ್ಟಾರ್ ಅಲ್ಲು ಅರ್ಜುನ್ ಸದ್ಯ ಪುಷ್ಪ2 ಕೆಲಸದಲ್ಲಿದ್ದಾರೆ. ಈ ಮಧ್ಯೆ ಅಲ್ಲು ಅರ್ಜುನ್ ಸನ್ ಬಗ್ಗೆ ಬಿಗ್ ನ್ಯೂಸ್ ಒಂದು ಹೊರ ಬಂದಿದೆ. ಅಲ್ಲು ಅರ್ಜುನ್ ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅದು ಅಪ್ಪನ ಸಿನಿಮಾದಲ್ಲೇ ಅನ್ನೋದು ಈಗ ಟಾಲಿವುಡ್‌ನಲ್ಲಿ ಟಾಕ್ ಆಫ್ ದಿ ಮ್ಯಾಟರ್.

First Published Feb 27, 2024, 10:37 AM IST | Last Updated Feb 27, 2024, 10:38 AM IST

ಪುಷ್ಪ2 ಇಡೀ ಭಾರತೀಯ ಚಿತ್ರರಸಿಕರು ಕಣ್ಣರಳಿಸಿ ಕಾಯುತ್ತಿರೋ ಸಿನಿಮಾ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ (Allu Arjun) ಪುಷ್ಪರಾಜ್ ರೋಲ್ ಮಾಡಿದ್ರೆ ರಶ್ಮಿಕಾ ಶ್ರೀವಲ್ಲಿಯಾಗಿ ಪುಷ್ಪರಾಜ್ ಹೆಂಡ್ತಿ ಪಾತ್ರ ಮಾಡಿದ್ದಾರೆ. ಪುಷ್ಪ2 (Pushpa 2) ನ ಈ ಗಂಡ ಹೆಂಡತಿಗೆ ಒಂದ್ ಮಗು ಕೂಡ ಇರುತ್ತಂತೆ. ಆ ಮಗನ ಪಾತ್ರದಲ್ಲಿ ಅಲ್ಲು ಅರ್ಜುನ್ ಪುತ್ರ ಅಲ್ಲು ಅಯಾನ್(Allu Ayan) ನಟಿಸಿದ್ದಾನಂತೆ. ಅಂದ್ರೆ ರಿಯಲ್ ಲೈಫ್‌ನಲ್ಲೂ ಅಲ್ಲು ಅರ್ಜುನ್ ಮಗನಾಗಿರೋ ಅಲ್ಲು ಅಯಾನ್ ರೀಯಲ್ ಮೇಲೂ ಅಲ್ಲು ಮಗನಾಗೆ ನಟಿಸಿದ್ದಾನೆ. ನಟ ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ ಈಗಾಗ್ಲೆ ಬಣ್ಣ ಹಚ್ಚಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಇರೋ ಅಲ್ಲು ಅರ್ಹಾ ‘ಅಂಜಲಿ-ಅಂಜಲಿ’ ವಿಡಿಯೋ ಹಾಡಿನಲ್ಲಿ ಕಾಣಿಸಿಕೊಂಡಿದ್ರು. ಬಳಿಕ ಸಮಂತಾ ನಟಿಸಿರುವ ‘ಶಾಕುಂತಲಂ’ ಸಿನಿಮಾದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ರು. ಇದೀಗ 9 ವರ್ಷದ ಅಲ್ಲು ಅಯಾನ್ ಚಿತ್ರರಂಗಕ್ಕೆ ಬರಲು ಸಜ್ಜಾಗಿದ್ದಾನೆ. ಅನ್ನೋನೆ ಲೆಟೆಸ್ಟ್ ವಿಷಯ..

ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಪುತ್ರ ಅಲ್ಲು ಅಯಾನ್ ಶಾರುಖ್ ನಟನೆಯ ಡಂಕಿ ಸಿನಿಮಾದ ಹಾಡು ಹಾಡಿದ್ದಾನೆ. ಅಲ್ಲು ಅರ್ಜುನ್ ಮಗ ಅಯಾನ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿ ಆಯಾನ್ ಹಾಡು ಕೇಳಿದ ಶಾರುಖ್ ಕೂಡ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಧನ್ಯವಾದಗಳು ಲಿಟಲ್ ಒನ್, ಪುಷ್ಪ ಹಾಗೂ ಫೈಯರ್ ಒಂದಾಗಿದೆ. ಈಗ ನನ್ನ ಮಕ್ಕಳಿಗೆ ಅಲ್ಲು ಅರ್ಜುನ್ ಅವರ ಶ್ರೀವಲ್ಲಿ ಹಾಡನ್ನು ಅಭ್ಯಾಸ ಮಾಡಿಸಬೇಕು ಎಂದು ತಮಾಷೆಯಾಗಿ ಬರೆದು ಆಯಾನ್ ಮೇಲಿನ ಪ್ರೀತಿ ತೋರಿಸಿದ್ದಾರೆ. ಅಲ್ಲಿಗೆ ಅಪ್ಪ ಅಲ್ಲು ಅರ್ಜುನ್ರ ಹಾಗೆ ಮಗ ಅಲ್ಲು ಅಯಾನ್ ಕೂಡ ಸ್ಟಾರ್ ಆಗೋಕೆ ಎಲ್ಲಾ ಅರ್ಹತೆಗಳನ್ನ ಪಡೆಯುತ್ತಿದ್ದಾನೆ.

ಇದನ್ನೂ ವೀಕ್ಷಿಸಿ:  ಟ್ರೋಲ್ ಆದ ಜವಾನ್ ಡೈರೆಕ್ಟರ್ ಅಟ್ಲಿ..! ಹಾಗಾದ್ರೆ ಯಾರು ನಿಜವಾದ ಪ್ಯಾನ್ ಇಂಡಿಯಾ ಸ್ಟಾರ್..?

Video Top Stories