Bigboss ಮನೆಯಲ್ಲಿ ನೈಜಿರಿಯನ್ ಕನ್ನಡಿಗನದ್ದೇ ಸದ್ದು: ವೇಷ-ಭಾಷೆ-ಹೇರ್‌ಸ್ಟೈಲ್‌ಗೆ ಸ್ಪರ್ಧಿಗಳೆಲ್ಲ ದಂಗು !

ಬಿಗ್‌ಬಾಸ್ 10, ಕಳೆದೆಲ್ಲ ಸಿಜನ್‌ಗಿಂತಲೂ ಸ್ಪೆಷಲ್ ಸಿಸನ್ ಆಗಲಿದೆ. ಹೊಸ ಮನೆಗೆ ಆಗಲೇ ಸ್ಪರ್ಧಿಗಳು ಎಂಟ್ರಿ ಆಗಿದ್ದಾರೆ. ಟಾಸ್ಕ್ ಕೂಡ ಶುರುವಾಗಿದೆ. ಇವರ ಜೊತೆಗೆ ನೈಜಿರಿಯಾದ ಯುವಕ ಮೈಕಲ್ ಸಹ ಎಂಟ್ರಿಯಾಗಿದ್ದಾರೆ.

Share this Video
  • FB
  • Linkdin
  • Whatsapp

ಈ ಮನೆಯಲ್ಲಿ ಸೇರಿರುವ ಎಲ್ಲ ಸ್ಪರ್ಧಿಗಳ ಮಧ್ಯೆ, ನೈಜಿರಿಯಾದ ಯುವಕನ ಮೇಲೆಯೇ ಎಲ್ಲರ ಕಣ್ಣು.. ಬಿಕಾಸ್ ಆತ ನೋಡಲಷ್ಟೆ ಸ್ಪೇಷಲ್ ಆಗಿಲ್ಲ.. ಆತ ನುಡಿಯುವ ಮಾತು ಕೂಡ ಅಷ್ಟೆ ಸ್ಪೆಷಲ್ ಆಗಿದೆ. ಎಸ್.. ನೈಜಿರಿಯಾದ ಈ ಯುವಕನ ಹೆಸರು ಮೈಕಲ್. ವಿದೇಶದಲ್ಲಿ ಬೆಳೆದಿರೋ ಮೈಕಲ್(Michael) ಗೆಟಪ್‌ ವಿಚಿತ್ರವಾಗಿದ್ರೂ, ಮಾತಾಡೋ ಮಾತು ಕೇಳ್ತಿದ್ರೆ ಎಂಥವರ ದಿಲ್ ಕೂಡ ಖುಷ್ ಆಗಿಬಿಡುತ್ತೆ. ಬಿಕಾಸ್ ಆತ ಮಾತಾಡೋ ಕನ್ನಡ ಅಷ್ಟು ಚೆಂದ. ವಿಚಿತ್ರವಾಗಿರೋ ಹೇರ್‌ಸ್ಟೈಲ್‌ನಿಂದ ಮಿಂಚ್ತಿರೋ ಮೈಕಲ್, ಬಾಸ್ಕೆಟ್‌ಬಾಲ್ ಪ್ಲೇಯರ್ ಕೂಡ. ಹಾಗೆಯೇ ಬಾಡಿ ಬಿಲ್ಡಿಂಗ್ ಮಾಡ್ಕೊಂಡು ಮಾಡೆಲಿಂಗ್ ಮಾಡಿದ್ದಾರೆ. ಅಷ್ಟೆಅಲ್ಲ ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡೋ ಆಸೆ ಇವರಿಗೆ. ಸದ್ಯಕ್ಕೆ ಬೆಂಗಳೂರಲ್ಲೇ(Bengaluru) ಬರ್ಗರ್‌ ಶಾಪ್ ನಡೆಸ್ತಿದ್ದಾರೆ. ಈಗ ಬಿಗ್‌ಬಾಸ್ ಮನೆಗೆ ಎಂಟ್ರಿ ಆಗೋ ಮೂಲಕ ಎಲ್ಲರ ಗಮನ ಸೆಳೆದಿರುವ ಮೈಕಲ್, ಮುಂದಿನ ದಿನಗಳಲ್ಲಿ ಹೇಗೆ ಟಾಸ್ಕ್ ಆಡ್ತಾರೆ, ಪ್ರೇಕ್ಷಕರಿಗೆ ಹೇಗೆ ಎಂಟರ್‌ಟೈನ್ ಮಾಡ್ತಾರೆ ಅನ್ನೊದನ್ನ ಕಾದು ನೋಡ್ಬೇಕಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ವಿಜಯ್-ಕಿಟ್ಟಿ ಸ್ನೇಹದಲ್ಲಿ ಮೂಡಿದೆಯಾ ಬಿರುಕು? ಹಳೇ ಗೆಳೆಯರ ನಡುವೆ ಏನಿದು ಮಾತಿನ ಸಮರ..?

Related Video