ವಿಜಯ್-ಕಿಟ್ಟಿ ಸ್ನೇಹದಲ್ಲಿ ಮೂಡಿದೆಯಾ ಬಿರುಕು? ಹಳೇ ಗೆಳೆಯರ ನಡುವೆ ಏನಿದು ಮಾತಿನ ಸಮರ..?

ದುನಿಯಾ ವಿಜಯ್ ಹಾಗೂ ಶ್ರೀನಗರ ಕಿಟ್ಟಿ. ಇಬ್ಬರು ಸ್ಯಾಂಡಲ್‌ವುಡ್‌ನ ಸ್ಟಾರ್ಸ್. ಅದ್ಭುತ ಸಿನಿಮಾಗಳನ್ನ ಕೊಟ್ಟಿರೋ ಹೀರೋಗಳು. ಇಂದೇ ಇಂಡಸ್ಟ್ರಿಯವರಾಗಿರೋ ವಿಜಯ್ ಶ್ರೀನಗರ ಕಿಟ್ಟಿ ಸ್ನೇಹಿತರೂ ಹೌದು. ಆದ್ರೆ ಈಗ ಈ ಇಬ್ಬರ ಮಧ್ಯೆ ಯಾವ್ದು ಸರಿ ಇಲ್ವಾ..? ಇಂತದ್ದೊಂದು ಡೌಟ್ ಶುರುವಾಗಿದೆ. 
 

Share this Video
  • FB
  • Linkdin
  • Whatsapp

ವಿಜಯ್ ಹೆಂಗೆಂಗೆಲ್ಲಾ ಬೆಳೆದು ಏನೇನ್ ತರ ಆಟ ಆಟ್ಕೊಂಡ್ ಬಂದ ಅಂತ ಎಲ್ಲಾ ನೋಡಿದ್ದೇನೆ ಅಂತ ವಿಜಯ್ ಎದುರಲ್ಲೇ ಶ್ರೀನಗರ ಕಿಟ್ಟಿ(Srinagar Kitty) ಹೇಳ್ತಾರೆ. ಇದಕ್ಕೆ ಕೌಂಟರ್ ಅಟ್ಯಾಕ್ ಮಾಡೋ ವಿಜಯ್ ಕಿಟ್ಟಿ ನನ್ನ ಯಾವ್ ಯಾವ್ ತರ ನೋಡಿದ್ದಾನೋ ಗೊತ್ತಿಲ್ಲ. ಕಿಟ್ಟಿಗೆ ಪಾಪ ಒಳ್ಳೆ ಮನಸ್ಸಿದೆ. ಇಂತವರು ಅಂದು ಅಂದು ನಾನ್ ಬೆಳೀತಾನೆ ಇದೀನಿ ಅವರೆಲ್ಲಾ ಹಂಗೇ ಇದ್ದಾರೆ. ನಾನು ಯಾವನ್‌ಗೂ ಯಾವತ್ತು ಹೆದರೋದಿಲ್ಲ ಫೈಟ್ ಮಾಡ್ತಾನೆ ಇರ್ತೀನಿ ಅಂತ ಶ್ರೀನಗರ ಕಿಟ್ಟಿ ಮಾತಿಗೆ ವಿಜಯ್(Duniya Vijay) ಎದುರೇಟು ಕೊಟ್ಟಿದ್ದಾರೆ. ಶ್ರೀನಗರ ಕಿಟ್ಟಿ ಹಾಗು ದುನಿಯಾ ವಿಜಯ್ ಒಂದೇ ಟೈಂನಲ್ಲಿ ಚಿತ್ರರಂಗಕ್ಕೆ ಬಂದವ್ರು. ಕಿಟ್ಟಿಗೆ ಸ್ಟಾರ್ ಲೈಫ್ ತಂದುಕೊಟ್ಟ ನಿರ್ದೇಶಕ ದುನಿಯಾ ಸೂರಿ(Duniya Suri). ಅಟ್ ಟೆ ಟೈಂ ದುನಿಯಾ ವಿಜಯ್ರನ್ನ ಸ್ಟಾರ್ ಮಾಡಿದ್ದು ಕೂಡ ನಿರ್ದೇಶಕ ಸೂರಿ. ಚಿತ್ರರಂಗದಲ್ಲಿ ಇಬ್ಬರ ಸ್ಟ್ರಗಲ್ ಒಂದೇ ತರ ಇತ್ತು. ಹೀಗಾಗಿ ಇವ್ರಿಬ್ಬರ ಸ್ನೇಹಿತರಾದ್ರು. ಇವರಿಬ್ಬರನ್ನ ಚಿತ್ರರಂಗದ ಮಂದಿ ಕಿಲಾಡಿ ಜೋಡಿ ಅಂತಾನೂ ಕರೀತಿದ್ರು. ದುನಿಯಾ ವಿಜಯ್ ಕಿಟ್ಟಿ ಸ್ನೇಹ ಎಂತಾದ್ದು ಅಂತ ಗೊತ್ತಾಗ್ಬೇಕು ಅಂದ್ರೆ ಶ್ರೀನಗರ ಕಿಟ್ಟಿ ನಟನೆಯ ಗೌಳಿ ಸಿನಿಮಾದ ಟೀಸರ್ ರಿಲೀಸ್ ಆರ್ಯಕ್ರಮಕ್ಕೆ ಗೆಸ್ಟ್ ಆಗಿ ಬಂದಿದ್ದ ವಿಜಯ್ ಅಂದು ಮಾತನಾಡಿರೋ ಈ ವೀಡಿಯೋನ ಒಮ್ಮೆ ನೋಡಿ..

ಇದನ್ನೂ ವೀಕ್ಷಿಸಿ:  Today Horoscope: ಮಿಥುನ ರಾಶಿಯವರ ಮನಸ್ಸಿಗೆ ಇಂದು ವ್ಯಥೆ ಉಂಟಾಗಲಿದ್ದು, ಈಶ್ವರನಿಗೆ ರುದ್ರಾಭಿಷೇಕ ಮಾಡಿಸಿ

Related Video