ಬಿಡುಗಡೆಗೆ ಸಜ್ಜಾದ ಮಂಜು ಪಾವಗಡ ಅಭಿನಯದ 'U Turn 2' ಸಿನಿಮಾ!

ಶ್ರದ್ಧಾ ಶ್ರೀನಾಥ್, ರಾಧಿಕಾ ಚೇತನ್ ನಟಿಸಿ ಪವನ್‍ ಕುಮಾರ್ ನಿರ್ದೇಶಿಸಿದ್ದ ಯಶಸ್ವಿ ಸಿನಿಮಾವಾದ 'ಯೂ ಟರ್ನ್' ಚಿತ್ರದ ಮುಂದುವರೆದ ಭಾಗವೆಂಬಂತೆ 'ಯೂ ಟರ್ನ್ 2' ಎಂಬ ಹೆಸರಿನ ಚಿತ್ರ  ನಿರ್ಮಾಣವಾಗಿದ್ದು, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಚಂದ್ರು ಓಬಯ್ಯ ನಿರ್ದೇಶನ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಶ್ರದ್ಧಾ ಶ್ರೀನಾಥ್, ರಾಧಿಕಾ ಚೇತನ್ ನಟಿಸಿ ಪವನ್‍ ಕುಮಾರ್ ನಿರ್ದೇಶಿಸಿದ್ದ ಯಶಸ್ವಿ ಸಿನಿಮಾವಾದ 'ಯೂ ಟರ್ನ್' (U Turn) ಚಿತ್ರದ ಮುಂದುವರೆದ ಭಾಗವೆಂಬಂತೆ 'ಯೂ ಟರ್ನ್ 2' (U Turn 2) ಎಂಬ ಹೆಸರಿನ ಚಿತ್ರ ನಿರ್ಮಾಣವಾಗಿದ್ದು, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಚಂದ್ರು ಓಬಯ್ಯ (Chandru Obayya) ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರತಂಡ ಚಿತ್ರದ ಸುದ್ದಿಗೋಷ್ಠಿಯನ್ನು ನಡೆಸಿ ಚಿತ್ರೀಕರಣ ಮುಕ್ತಾಯವಾದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Dhruva Sarja: ಅಭಿಮಾನಿ ಮನೆಗೆ ಸರ್ಪ್ರೈಸ್ ಆಗಿ ಎಂಟ್ರಿ ಕೊಟ್ಟ ಆಕ್ಷನ್ ಪ್ರಿನ್ಸ್

ಚಿತ್ರಕ್ಕೆ ಆನಂದ್ ಸಂಪಂಗಿ (Anand Sampangi) ಬಂಡವಾಳ ಹೂಡಿದ್ದಾರೆ. ಮಂಜು ಪಾವಗಡ (Manju Pavagada), ಆನಂದ್, ಚಂದ್ರು ಒಬಯ್ಯ, ರಚನಾ, ಕರಿಸುಬ್ಬು ಸೇರಿದಂತೆ ಮುಂತಾದವರ ತಾರಾಬಳಗ ಚಿತ್ರಕ್ಕಿದೆ. ಸಕಲೇಶಪುರ, ಚಿಕ್ಕಮಗಳೂರು ಸುತ್ತಮುತ್ತ ಚಿತ್ರದ ಹಾಡುಗಳ ಚಿತ್ರೀಕರಣ ನಡೆದಿದ್ದು, ಏಪ್ರಿಲ್‌ನಲ್ಲಿ 'ಯೂ ಟರ್ನ್ 2' ಚಿತ್ರವು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video