Dhruva Sarja: ಅಭಿಮಾನಿ ಮನೆಗೆ ಸರ್ಪ್ರೈಸ್ ಆಗಿ ಎಂಟ್ರಿ ಕೊಟ್ಟ ಆಕ್ಷನ್ ಪ್ರಿನ್ಸ್

ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಮಾರ್ಟಿನ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಧ್ರುವ ತಮ್ಮ ಕಟ್ಟಾಭಿಮಾನಿ ಮನೆಗೆ ದಿಢೀರ್ ಅಂತಾ ಭೇಟಿ ಕೊಟ್ಟಿದ್ದಾರೆ. ಹೌದು! ಬೆಂಗಳೂರಿನ ಲಗ್ಗೆರೆಯಲ್ಲಿರುವ ರವಿ ಎಂಬ ಧ್ರುವ ಸರ್ಜಾ ಕಟ್ಟಾಭಿಮಾನಿಗೆ ದೊಡ್ಡ ಆಸೆಯೊಂದಿತ್ತು.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) 'ಮಾರ್ಟಿನ್' (Matrin) ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆಂಜನೇಯನ ಪರಮ ಭಕ್ತನಾಗಿರುವ ಧ್ರುವ ಸರ್ಜಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. 'ಅದ್ದೂರಿ', 'ಬಹದ್ದೂರ್​', 'ಭರ್ಜರಿ', 'ಪೊಗರು' ಸಿನಿಮಾಗಳ ಮೂಲಕ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಇದೀಗ ಧ್ರುವ ತಮ್ಮ ಕಟ್ಟಾಭಿಮಾನಿ ಮನೆಗೆ ದಿಢೀರ್ ಅಂತಾ ಭೇಟಿ ಕೊಟ್ಟಿದ್ದಾರೆ. ಹೌದು! ಬೆಂಗಳೂರಿನ ಲಗ್ಗೆರೆಯಲ್ಲಿರುವ ರವಿ ಎಂಬ ಧ್ರುವ ಸರ್ಜಾ ಕಟ್ಟಾಭಿಮಾನಿಗೆ ದೊಡ್ಡ ಆಸೆಯೊಂದಿತ್ತು. ನನ್ನ ಮನೆಗೆ ಧ್ರುವ ಬಾಸ್ ಬರಬೇಕು ಎಂದು ಆಸೆ ಪಟ್ಟಿದ್ದರು.

Badava Rascal Pair: ಅಮೃತಾ ಅಯ್ಯಂಗಾರ್​ಗೆ ಲವ್ ಪ್ರಪೋಸ್ ಮಾಡಿದ ಡಾಲಿ ಧನಂಜಯ

ಈ ವಿಷಯ ತಿಳಿದ ಧ್ರುವ ಸರ್ಜಾ ತನ್ನ ನೆಚ್ಚಿನ ಅಭಿಮಾನಿಯ (Fan) ಹುಟ್ಟುಹಬ್ಬದ (Birthday) ದಿನ ಅವರ ಮನೆಗೆ ಭೇಟಿ ನೀಡಿ ಜನ್ಮದಿನದ ಶುಭಾಶಯವನ್ನು ತಿಳಿಸಿದ್ದಾರೆ. ಈ ಮೂಲಕ ಅಭಿಮಾನಿಯ ಆಸೆಯನ್ನು ಧ್ರುವ ಸರ್ಜಾ ಈಡೇರಿಸಿದ್ದಾರೆ. ಇನ್ನು ವರನಟ ಡಾ.ರಾಜ್‌ಕುಮಾರ್ ತಮ್ಮ ಅಭಿಮಾನಿಗಳನ್ನು 'ಅಭಿಮಾನಿಗಳೇ ದೇವರು' ಎಂದು ಕರೆದಿದ್ದರು. ಧ್ರುವ ಸರ್ಜಾ ತಮ್ಮ ಫ್ಯಾನ್ಸ್‌ಗಳನ್ನು ವಿಐಪಿ ಎಂದು ಕರೆದಿದ್ದಾರೆ. ಹಾಗಾಗಿ ಆ ವಿಐಪಿಗಳ ಮನೆಗೆ ಧ್ರುವ ಸರ್ಜಾ ಆಗಾಗ ಭೇಟಿ ಕೊಟ್ಟು ಸಂಭ್ರಮಿಸುತ್ತಿರುತ್ತಾರೆ. ಇದೀಗ ಲಗ್ಗೆರೆಯಲ್ಲಿರುವ ರವಿ ಮನೆಗೆ ಧ್ರುವ ವಿಸಿಟ್ ಮಾಡಿರೋದು ಅವರ ವಿಐಪಿ ಅಭಿಮಾನಿಗಳಿಗೆ ಖುಷಿ ನೀಡಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video