ಈ ಸಿನಿಮಾಗೆ ನಟರೂ ಬೇಡ.. ತಂತ್ರಜ್ಞರೂ ಬೇಡ: ಇದು ಕನ್ನಡ ಚಿತ್ರರಂಗಕ್ಕೆ ಹಿರಿಮೆ!

ಸದ್ಯ ಎಲ್ಲಾ ಕ್ಷೇತ್ರಗಳಲ್ಲೂ ಎಐ ತಂತ್ರಜ್ಞಾನ ಎಂಟ್ರಿ ಕೊಡ್ತಾ ಇದೆ. ನಮ್ಮ ಸಿನಿಮಾರಂಗಕ್ಕೂ ಎಐ ಎಂಟ್ರಿ ಕೊಟ್ಟಾಗಿದೆ. ಎಐ ಟೆಕ್ನಾಲಜಿಯನ್ನ ಬಿಡಿಬಿಡಿಯಾಗಿ ಅನೇಕ ಸಿನಿಮಾಗಳು ಬಳಸಿಕೊಂಡಿವೆ. ಆದ್ರೆ ಇಲ್ಲೊಬ್ರು ಸಂಪೂರ್ಣ ಎಐ ಬಳಸಿ ಇಡಿ ಸಿನಿಮಾ ರೆಡಿ ಮಾಡಿದ್ದಾರೆ.
 

Share this Video
  • FB
  • Linkdin
  • Whatsapp

ಸದ್ಯ ಎಲ್ಲಾ ಕ್ಷೇತ್ರಗಳಲ್ಲೂ ಎಐ ತಂತ್ರಜ್ಞಾನ ಎಂಟ್ರಿ ಕೊಡ್ತಾ ಇದೆ. ನಮ್ಮ ಸಿನಿಮಾರಂಗಕ್ಕೂ ಎಐ ಎಂಟ್ರಿ ಕೊಟ್ಟಾಗಿದೆ. ಎಐ ಟೆಕ್ನಾಲಜಿಯನ್ನ ಬಿಡಿಬಿಡಿಯಾಗಿ ಅನೇಕ ಸಿನಿಮಾಗಳು ಬಳಸಿಕೊಂಡಿವೆ. ಆದ್ರೆ ಇಲ್ಲೊಬ್ರು ಸಂಪೂರ್ಣ ಎಐ ಬಳಸಿ ಇಡಿ ಸಿನಿಮಾ ರೆಡಿ ಮಾಡಿದ್ದಾರೆ. ವಿಶ್ವದ ಮೊಟ್ಟ ಮೊದಲ ಎಐ ಸಿನಿಮಾ ಕನ್ನಡದಲ್ಲಿ ಸಿದ್ದವಾಗಿದೆ. AI ಟೆಕ್ನಾಲಜಿ ವಿಶ್ವದಾದ್ಯಂತ ಎಲ್ಲಾ ಕ್ಷೇತ್ರಗಳಲ್ಲೂ ಸಂಚಲನ ಮೂಡಿಸ್ತಾ ಇದೆ. ಸಿನಿಮಾ ರಂಗಕ್ಕೂ AI ಬಂದಾಗಿದೆ. ಈಗಾಗ್ಲೇ ಅನೇಕ ಸಿನಿಮಾ ತಂಡಗಳು ಮೇಕಿಂಗ್​ನಲ್ಲಿ ಎಐ ಬಳಕೆ ಮಾಡ್ತಾ ಇವೆ. ಆದ್ರೆ ಇಲ್ಲೊಬ್ರು ಇಡೀ ಸಿನಿಮಾವನ್ನೇ AI ಬಳಕೆ ಮಾಡಿಕೊಂಡು ರೆಡಿಮಾಡಿದ್ದಾರೆ. ‘ಲವ್ ಯು’ ಅನ್ನೋ ಈ ಸಿನಿಮಾವನ್ನ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ ಬಳಸಿ ನಿರ್ಮಿಸಲಾಗಿದೆ. ಎಸ್. ನರಸಿಂಹಮೂರ್ತಿ ಈ ಚಿತ್ರದ ನಿರ್ದೇಶಕರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇವರ ಕಥೆ ಚಿತ್ರಕಥೆ ಸಂಭಾಷಣೆಯನ್ನ ಬಳಿಸಕೊಂಡು ಎಐ ತಂತ್ರಜ್ಞ ನೂತನ್ ಈ ಚಿತ್ರವನ್ನ ರೆಡಿಮಾಡಿದ್ದಾರೆ. ಇಲ್ಲಿನ ಕಲಾವಿದರು, ಕ್ಯಾಮೆರಾ ವರ್ಕ್, ಮ್ಯೂಸಿಕ್, ಹಾಡುಗಳು ಎಲ್ಲವೂ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಆಧರಿಸಿ ಮಾಡಲಾಗಿದೆ. 95 ನಿಮಿಷಗಳ ಲವ್ ಯು ಸಿನಿಮಾದ ಟೀಸರ್ ಕೂಡ ರಿಲೀಸ್ ಆಗಿದ್ದು ಎಲ್ಲರ ಗಮನ ಸೆಳೀತಾ ಇದೆ. ಸೆನ್ಸಾರ್ ಕೂಡ ಮುಗಿಸಿರೋ ಈ ಸಿನಿಮಾ ಯುಐ ಸರ್ಟಿಫಿಕೇಟ್ ಪಡೆದುಕೊಂಡಿದ್ದು ಮೇ 2ನೇ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅಲ್ಲಿಗೆ ವಿಶ್ವದ ಮೊದಲ ಎಐ ಸಿನಿಮಾ ನಿರ್ಮಿಸಿದ ಖ್ಯಾತಿ ಸ್ಯಾಂಡಲ್​ವುಡ್​ಗೆ ಸಿಕ್ತಾ ಇದೆ. ಈ ಖ್ಯಾತಿಯ ಖುಷಿ ಜೊತೆಗೆ ಮುಂದಿನ ದಿನಗಳಲ್ಲಿ ಎಐ ಟೆಕ್ನಾಲಜಿ, ಸಿನಿಮಾ ಕಲಾವಿದರ-ತಂತ್ರಜ್ಞರ ಕೆಲಸ ಕಿತ್ತುಕೊಳ್ಳುತ್ತೆ ಅನ್ನೋ ಆತಂಕವೂ ಶುರುವಾಗಿದೆ.

Related Video