Asianet Suvarna News Asianet Suvarna News

ಒಂದಲ್ಲ ಎರಡಲ್ಲ 8 ಹುಡುಗಿಯರ ಜೊತೆಗೆ ಗಣೇಶ್ ಮದುವೆ..! ನನ್ನ ಮದುವೆ ಫಿಕ್ಸ್..ರೆಡಿ ಟು ಟೇಕ್ ರಿಸ್ಕ್..!

ಸ್ಯಾಂಡಲ್‌ವುಡ್‌ನ ಗೋಲ್ಡ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಚಿತ್ರದ ಮೊಟ್ಟ ಮೊದಲ ಹಾಡು ರಿಲೀಸ್ ಆಗಿದೆ.
 

ಕೃಷ್ಣಂ ಪ್ರಣಯ ಸಖಿ ಚಿತ್ರದ(Krishnam Pranaya Sakhi Movie) ಮೊಟ್ಟ ಮೊದಲ ಹಾಡು ರಿಲೀಸ್ ಆಗಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಇಲ್ಲಿ ಒಳ್ಳೆ ಸೌಂಡಿಂಗ್ ಕ್ರಿಯೇಟ್ ಮಾಡಿದ್ದಾರೆ. ಚಂದನ್ ಶೆಟ್ಟಿ ಇದನ್ನ ತುಂಬಾನೇ ಚೆನ್ನಾಗಿ ಹಾಡಿದ್ದಾರೆ. ವಿಶೇಷವಾಗಿ ಇಲ್ಲಿ ಬರೆದಿರೋ ಸಾಲುಗಳು ಸ್ಪೆಷಲ್ ಫೀಲ್ ಕೊಡುತ್ತವೆ. ಒಂದಲ್ಲ ಎರಡಲ್ಲ 8 ಹುಡುಗಿಯರ ಜೊತೆಗೆ ಗಣಿ ಮದ್ವೆ ಆಗುತ್ತಿರೋದು ಇಲ್ಲಿ ಹೆಚ್ಚು ಕುತೂಹಲ ಕೆರಳಿಸುತ್ತದೆ. ಇದರೊಟ್ಟಿಗೆ ಇಡೀ ಒಂದು ದೊಡ್ಡ ಮದುವೆಯಲ್ಲಿ ಕಲಾವಿದರ ದೊಡ್ಡ ದಂಡೇ ಕಾಣಿಸುತ್ತದೆ. ಸಿನಿಮಾದ(Sandalwood) ಈ ಒಂದು ಹಾಡನ್ನ ಮೈಸೂರಿನಲ್ಲಿ ದೊಡ್ಡಮಟ್ಟದ ಕಾರ್ಯಕ್ರಮ ಮಾಡಿ ರಿಲೀಸ್ ಮಾಡಲಾಗಿದೆ. ಇದು ಗಣೇಶ್ ನಟಿಸುತ್ತಿರೋ ಲವ್ ಕಮ್ ಕಾಮಿಡಿ ಸಿನಿಮಾ ಕೃಷ್ಣಂ ಪ್ರಣಯ ಸಖಿ ಚಿತ್ರದ ಮದುವೆ ಸಾಂಗ್(Song released) ಈ ಹಾಡಿನಲ್ಲಿ ಗಣೇಶ್  ಮದುವೆ ಎಂಟು ಹುಡುಗಿಯರ ಜೊತೆ ಆಗುತ್ತಿದೆ. ನನ್ನ ಮ್ಯಾರೇಜ್ ಫಿಕ್ಸ್ ಆಯಿತು. ರಿಸ್ಕ್ ತೆಗೆದುಕೊಳ್ಳಲು ನಾನು ರೆಡಿ ಎಂದಿದ್ದಾರೆ ಗಣೇಶ್. ಶ್ರೀನಿವಾಸ್ ರಾಜು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  Max Movie: ಮ್ಯಾಕ್ಸ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಹೊತ್ತಲ್ಲಿ ಕ್ಲೈಮ್ಯಾಕ್ಸ್ ಸೀನ್ ಲೀಕ್..!

Video Top Stories