ಕೋಟಿ ಕೋಟಿ ಕಲೆಕ್ಷನ್ ಮಾಡ್ತಿರೋ 'ಕೋಟಿ'! ಡಾಲಿ ಅಭಿಮಾನಿಗಳು ಫುಲ್‌ ಖುಷ್!

ಬಹುಷಃ ಕನ್ನಡದಲ್ಲಿ ಕ ಅಕ್ಷರದಿಂದ ಸಿನಿಮಾ ಟೈಟಲ್ ಇಟ್ಟರೆ ಅದೃಷ್ಟ ಅನ್ನಿಸುತ್ತೆ. ಬಿಗ್ ಹಿಟ್ಟಾದ ಹಲವು ಸಿನಿಮಾಗಳ ಉದಾಹರಣೆ ಸಿಗುತ್ತವೆ. ಕುರುಕ್ಷೇತ್ರ, ಕಿರಿಕ್ ಪಾರ್ಟಿ,ಕೆಜಿಎಫ್, ಕಾಂತಾರ ,ಕಾಟೇರ, ಎಲ್ಲವೂ ಹಿಟ್ ಲಿಸ್ಟ್ ಸೇರಿವೆ. ಇದೀಗ ಆ ಲಿಸ್ಟ್ ಗೆ ಸೇರಿದ ಹೊಸಾ ಚಿತ್ರ ಡಾಲಿ ಕೋಟಿ.
 

Share this Video
  • FB
  • Linkdin
  • Whatsapp

ಕಳೆದ ವಾರವಷ್ಟೇ ರಿಲೀಸ್ ಆಗಿದ್ದ ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ(Sandalwood) ಸದ್ಯಕ್ಕೆ ಸದ್ದು ಮಾಡುತ್ತಿದೆ. ಪಕ್ಕಾ ಫ್ಯಾಮಿಲಿ ಇಷ್ಟ ಪಡುವ ಕಮರ್ಷಿಯಲ್ ಸಿನಿಮಾ ಇದಾಗಿದೆ. 'ಕೋಟಿ'(Koti Movie) ನೋಡಿದ ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಕುಟುಂಬ ಸಮೇತ ಈ ಸಿನಿಮಾವನ್ನು ನೋಡಬಹುದು ಅಂತ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ 'ಕೋಟಿ' ಸಿನಿಮಾದ ಸರ್ಪ್ರೈಸಿಂಗ್ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದೇನಂದರೆ, ಪ್ರಮುಖ ಪಾತ್ರದಲ್ಲಿ ಡಾಲಿ ಧನಂಜಯ್ ಜೊತೆ ದುನಿಯಾ ವಿಜಯ್ ಕೂಡ ಕಾಣಿಸಿಕೊಂಡಿದ್ದಾರೆ. 'ಕೋಟಿ' ಸಿನಿಮಾದಲ್ಲಿನ ದುನಿಯಾ ವಿಜಯ್ ಪಾತ್ರದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಪರಮೇಶ್ವರ್ ಗುಂಡ್ಕಲ್ ನಿರ್ದೇಶಿಸಿದ ಮೊದಲ ಸಿನಿಮಾ 'ಕೋಟಿ'ಯಲ್ಲಿ ದುನಿಯಾ ವಿಜಯ್ ಎಂಟ್ರಿ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ. ಧನಂಜಯ್, ತಾರಾ, ರಮೇಶ್ ಇಂದಿರಾ ಕಾಂಬಿನೇಷನ್ ಸಿನಿಮಾದಲ್ಲಿ ಎಂಗೇಜಿಂಗ್ ಆಗಿದೆ. ಇದರ ಜೊತೆನೇ 'ಕೋಟಿ'ಯ ಕ್ಲೈಮ್ಯಾಕ್ಸ್ ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಜೊತೆಗೆ 'ದುನಿಯಾ ವಿಜಯ್' ವಿಶೇಷ ಪಾತ್ರ ಪ್ರೇಕ್ಷಕರಿಗೆ ಕಿಕ್ ಕೊಡಲು ಶುರು ಮಾಡಿದೆ.

ಇದನ್ನೂ ವೀಕ್ಷಿಸಿ:  10 ಕೋಟಿಗೂ ಹೆಚ್ಚು ಆಸ್ತಿ ಒಡತಿ ಪವಿತ್ರಾ ಗೌಡ: ರೇಂಜ್ ರೋವರ್ ಕಾರ್ ಒಡತಿ ಆಗಿದ್ದು ಹೇಗೆ ?

Related Video