Asianet Suvarna News Asianet Suvarna News

10 ಕೋಟಿಗೂ ಹೆಚ್ಚು ಆಸ್ತಿ ಒಡತಿ ಪವಿತ್ರಾ ಗೌಡ: ರೇಂಜ್ ರೋವರ್ ಕಾರ್ ಒಡತಿ ಆಗಿದ್ದು ಹೇಗೆ ?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ ಗೌಡ ಜೈಲಿಗೆ ಹೋದ್ರೆ, ನಟ ದರ್ಶನ್‌ರನ್ನು ಮತ್ತೆ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.
 

ಒಂದು ಸಣ್ಣ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಪವಿತ್ರ ಗೌಡ (Pavitra Gowda) ಮತ್ತವರ ತಾಯಿ . ಇಂದು ಕೋಟಿಗಳ ರೇಂಜ್ ರೋವರ್ ಕಾರ್  ಒಡತಿ. ಮೂರು ಫ್ಲೋರ್ ಡುಪ್ಲೆಕ್ಸ್‌ ಹೌಸ್‌ನ ಒಡತಿಯಾಗಿದ್ದಾರೆ. ಹೀಗೆ ಸಾಮಾನ್ಯಳು ಕೆಲವೇ ವರ್ಷಗಳಲ್ಲಿ ಅಸಾಮಾನ್ಯಳಾಗಿ ಕೋಟಿ ಕೋಟಿ ಆಸ್ತಿಯ ಒಡತಿಯಾಗೋದು ಅಂದ್ರೆ ಸುಮ್ನೆ ಅಲ್ಲವೆ ಅಲ್ಲ. ದರ್ಶನ್(Actor Darshan) ಅಂತ ದೊಡ್ಡ ಖುಳ ಸಿಕ್ಕಮೇಲೆ ಪವಿತ್ರಾ ಅದೃಷ್ಟ ಖುಲಾಯಿಸಿಬಿಟ್ಟಿತ್ತು. ಆದ್ರೆ ಅದೇ ಪವಿತ್ರ ಹಿಂದೆ ಬಿದ್ದ ದರ್ಶನ್ ನಸೀಬ್ ಮಾತ್ರ ಜೈಲು ಸೇರುವಂತಾಗಿದೆ. ಪವಿತ್ರಾ ಗೌಡ ಅವರು ಸ್ಯಾಂಡಲ್‌ವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರೀತಿ ಕಿತಾಬು ಇವರ ಜನಪ್ರಿಯ ಸಿನಿಮಾ. ಬತಾಸ್‌, ಛತ್ರಿಗಳು ಸಾರ್‌ ಛತ್ರಿಗಳು ಚಿತ್ರದಲ್ಲಿ ನಟಿಸಿದ್ದಾರೆ. ಆದರೆ, ಇವರು ದರ್ಶನ್‌ ಜತೆಗಿನ ಸಂಬಂಧದ ವಿಷಯದಲ್ಲಿ ಹೆಚ್ಚು ಸುದ್ದಿಯಲ್ಲಿದ್ದರು. ಕಾಟೇರ ಯಶಸ್ಸಿನ ಸಂದರ್ಭದಲ್ಲಿ "ನನ್ನ ದರ್ಶನ್‌ ಸಂಬಂಧಕ್ಕೆ 10 ವರ್ಷಗಳು" ಎಂದು ಪೋಸ್ಟ್‌ ಮಾಡಿದ್ದರು. ಈ ವಿಷಯಕ್ಕೆ ಸಂಬಂಧಪಟ್ಟಂತೆ ದರ್ಶನ್‌ ಪತ್ನಿ ವಿಜಯ ಲಕ್ಷ್ಮಿ ಮತ್ತು ಪವಿತ್ರಾ ಗೌಡ ನಡುವೆ ಜಗಳವೂ ಆಗಿದೆ. ಸಿನಿಮಾ ಕಾರ್ಯಕ್ರಮವೊಂದರಲ್ಲಿ ಕಾಮನ್‌ ಫ್ರೆಂಡ್‌ವೊಬ್ಬರ ನೆರವಿನಿಂದ ದರ್ಶನ್‌ ಮತ್ತು ಪವಿತ್ರಾ ಗೌಡ ಪರಿಚಯವಾಗಿತ್ತು ಎಂದು ಹೇಳಲಾಗಿದೆ. ಚೆನ್ನಾಗಿದ್ದ ಸಂಸಾರದಲ್ಲಿ ಪವಿತ್ರಾ ಗೌಡ ವಕ್ಕರಿಸಿದ್ದೆ ದರ್ಶನ್ ದುರ್ಯೋಧನನಾಗುವಂತಾಯ್ತು. ನಾಯಕ ಖಳನಾಯಕನಾಗಲು ಶುರುವಾಗಿದ್ದೆ ಇಲ್ಲಿಂದ.

ಇದನ್ನೂ ವೀಕ್ಷಿಸಿ:  ಜರ್ನಲಿಸ್ಟ್ ಕೊಲೆ..ತಮಿಳು ಸೂಪರ್ ಸ್ಟಾರ್ ಸೆರೆವಾಸ ! ಅಪರಾಧ ಲೋಕದಲ್ಲೂ ಸ್ಟಾರ್‌ಗಳದ್ದೇ ದರ್ಬಾರ್ !

Video Top Stories