Vikrant Rona: ಫೆಬ್ರವರಿ 24ರಂದು ಕಿಚ್ಚ ಸುದೀಪ್ ಚಿತ್ರ ಬಿಡುಗಡೆಯಾಗುತ್ತಾ?

ಕನ್ನಡ ಚಿತ್ರರಂಗದ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೂ ಬಿಡುಗಡೆ ದಿನಾಂಕ ಮುಂದೆ ಹೋಗೋ ಅನುಮಾನ ಶುರುವಾಗಿದೆ. ಯಾಕಂದ್ರೆ ರಿಲೀಸ್ ಡೇಟ್ ಅನೌನ್ಸ್ ಆಗಿದ್ದರೂ ಕೂಡ ಕಿಚ್ಚನ ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ' ಬಿಡುಗಡೆ ದಿನಾಂಕವನ್ನು ಹಾಕದೇ ಹೊಸ ವರ್ಷದ ಶುಭಾಶಯ ಹೇಳಿದ್ದಾರೆ. 
 

Share this Video
  • FB
  • Linkdin
  • Whatsapp

ಈ ವರ್ಷ ಬಿಗ್ ಸ್ಟಾರ್ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡಬಹುದು ಅಂತ ಸಿನಿ ಪ್ರೇಕ್ಷಕರ ನಂಬಿಕೆ. ಆದರೆ ಆ ನಂಬಿಕೆ ಸುಳ್ಳಾಗೋ ಹಾಗಿದೆ. ಜನವರಿ 7ರಂದು ಬರಬೇಕಿದ್ದ 'ಆರ್‌ಆರ್‌ಆರ್‌' (RRR) ಚಿತ್ರ ಒಮಿಕ್ರಾನ್ (Omicron) ಕಾರಣ ಕೊಟ್ಟು ರಿಲೀಸ್ ಡೇಟ್ ಮುಂದೂಡಿದ್ದಾರೆ. ಈಗ ಕನ್ನಡ ಚಿತ್ರರಂಗದ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೂ ಬಿಡುಗಡೆ ದಿನಾಂಕ ಮುಂದೆ ಹೋಗೋ ಅನುಮಾನ ಶುರುವಾಗಿದೆ. ಯಾಕಂದ್ರೆ ರಿಲೀಸ್ ಡೇಟ್ ಅನೌನ್ಸ್ ಆಗಿದ್ದರೂ ಕೂಡ ಕಿಚ್ಚನ ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ' (Vikrant Rona) ಬಿಡುಗಡೆ ದಿನಾಂಕವನ್ನು ಹಾಕದೇ ಹೊಸ ವರ್ಷದ ಶುಭಾಶಯ ಹೇಳಿದ್ದಾರೆ. 

Vikranth Rona Release: ಭೀಮ್ಲಾ ನಾಯಕ್ ಜೊತೆ ವಿಕ್ರಾಂತ್ ರೋಣ ಕ್ಲಾಶ್

ಹೌದು! ಕಿಚ್ಚ ಸುದೀಪ್ (Kichcha Sudeep) 'ವಿಕ್ರಾಂತ್ ರೋಣ' ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಅನುಮಾನ ಮೂಡಿದೆ. 'ವಿಕ್ರಾಂತ್ ರೋಣ' ಫೆ.24ರಂದು ತೆರೆಗೆ ಬರಲು ಸಜ್ಜಾಗಿದೆ. ಆದರೆ ರಿಲೀಸ್ ಡೇಟ್ ಇಲ್ಲದೇ 'ವಿಕ್ರಾಂತ್ ರೋಣ' ನ್ಯೂ ಈಯರ್ ಪೋಸ್ಟರ್ ಅನ್ನು ರಿವೀಲ್ ಮಾಡಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ (Anup Bhandari). ಈ ಪೋಸ್ಟರ್‌ನಲ್ಲಿ ‘ಹ್ಯಾಪಿ ನ್ಯೂ ಇಯರ್ 2022’ ಎಂದು ಬರೆಯಲಾಗಿದೆ ಹೊರತು ಸಿನಿಮಾ ರಿಲೀಸ್ ದಿನಾಂಕ ಮಾತ್ರ ಎಲ್ಲೂ ಕಾಣಿಸಿಲ್ಲ. ಹಾಗಾಗಿ ಈ ಸಿನಿಮಾ ಕೂಡ ಅನೌನ್ಸ್ ಮಾಡಿದ ದಿನದಂದು ಬರೋದು ಡೌಟಾ ಅಂತ ಕೇಳುವಂತಾಗಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video