'ಖಡಕ್ ಹಳ್ಳಿ ಹುಡುಗರು' ಚಿತ್ರಕ್ಕೆ ಮೂಹೂರ್ತ: ಪ್ರಮುಖ ಪಾತ್ರದಲ್ಲಿ Raghavendra Rajkumar

ವರನಟ ಡಾ. ರಾಜ್​ಕುಮಾರ್ ಅವರು ಜನಿಸಿದ್ದು, ಚಾಮರಾಜನಗರದ ಗಾಜನೂರಿನಲ್ಲಿ. ವಿಶೇಷ ಎಂದರೆ ರಾಘವೇಂದ್ರ ರಾಜ್​ಕುಮಾರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ 'ಖಡಕ್​ ಹಳ್ಳಿ ಹುಡುಗರು' ಎಂಬ ಹೊಸ ಸಿನಿಮಾದ ಮುಹೂರ್ತ ಗಾಜನೂರಿನಲ್ಲೇ ನಡೆಯಲಿದೆ.

Share this Video
  • FB
  • Linkdin
  • Whatsapp

ಚಾಮರಾಜನಗರ (ಮಾ.10): ವರನಟ ಡಾ. ರಾಜ್​ಕುಮಾರ್ ಅವರು (Dr Rajkumar) ಜನಿಸಿದ್ದು, ಚಾಮರಾಜನಗರದ ಗಾಜನೂರಿನಲ್ಲಿ. ವಿಶೇಷ ಎಂದರೆ ರಾಘವೇಂದ್ರ ರಾಜ್​ಕುಮಾರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ 'ಖಡಕ್​ ಹಳ್ಳಿ ಹುಡುಗರು' ಎಂಬ ಹೊಸ ಸಿನಿಮಾದ ಮುಹೂರ್ತ ಗಾಜನೂರಿನಲ್ಲೇ ನಡೆಯಲಿದೆ. ಈ ಸಲುವಾಗಿ ರಾಘವೇಂದ್ರ ರಾಜ್​ಕುಮಾರ್ (Raghavendra Rajkumar) ಗಾಜನೂರಿಗೆ ಭೇಟಿ ನೀಡಿದ್ದು, ಚಿತ್ರದ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಗಾಜನೂರಿನಲ್ಲಿ (Gajanur) ಸಂಪತ್ತಿಗೆ ಸವಾಲ್, ಶ್ರೀನಿವಾಸ ಕಲ್ಯಾಣ ಚಿತ್ರಗಳ ಚಿತ್ರೀಕರಣ​ ಆಗಿದೆ. ಆದರೆ, ಯಾವುದೇ ಚಿತ್ರದ ಮುಹೂರ್ತ ನಡೆದಿಲ್ಲ. 

Add Asianetnews Kannada as a Preferred SourcegooglePreferred

James Trailer Released: ತಮ್ಮನನ್ನು ನೋಡಿ ರಾಘವೇಂದ್ರ ರಾಜ್‌ಕುಮಾರ್ ಕಣ್ಣೀರು

ಹೀಗಾಗಿ ಗಾಜನೂರಿನಲ್ಲೇ ಈ ಸಿನಿಮಾ ಮುಹೂರ್ತ ಮಾಡಿ, ನಮ್ಮ ಸೋದರತ್ತೆ ನಾಗಮ್ಮನ ಕೈಲಿ ಪೂಜೆ ಮಾಡಿಸುತ್ತೇವೆ. ನಾನು ಈ ಚಿತ್ರದ ಹೀರೋ ಅಲ್ಲ. ಆದರೆ, ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಅಪ್ಪಾಜಿ ಹುಟ್ಟಿದ ಮನೆ, ಓದಿದ ಶಾಲೆ, ಮಂಟೇಸ್ವಾಮಿ ದೇವಾಲಯದಲ್ಲಿ ಚಿತ್ರೀಕರಣ ನಡೆಯುತ್ತದೆ. 'ಕನ್ನಡಕ್ಕೆ ಮೊದಲ ಗೌರವ..' ಎಂಬ ಹಾಡಿನ ಚಿತ್ರೀಕರಣ ಇಲ್ಲೇ ನಡೆಯಲಿದೆ' ಹಾಗೂ ಅಪ್ಪಾಜಿ ಹುಟ್ಟಿದ ಗಾಜನೂರಿಗೆ ಒಂದು ಮಹತ್ವ ಇದೆ. ಇಲ್ಲಿ ಚಿತ್ರದ ಮೂಹೂರ್ತ ನಡೆಸಿದ್ರೆ ನಮ್ಮ ಪೂರ್ವಿಕರೆಲ್ಲಾ ಬಂದು ಆಶಿರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ರಾಘವೇಂದ್ರ ರಾಜ್​ಕುಮಾರ್ ತಿಳಿಸಿದರು.

ನಾಗತ್ತೆ ನಮಗೆ ಹಾಲು ಕುಡಿಸಿ ಬೆಳೆಸಿದ್ದಾರೆ: 'ಖಡಕ್​ ಹಳ್ಳಿ ಹುಡುಗರು' ಚಿತ್ರದ ಮುಹೂರ್ತದ ಪೂಜೆಯನ್ನು ನಮ್ಮ ಸೋದರತ್ತೆ ನಾಗಮ್ಮನ ಕೈಲಿ ಪೂಜೆ ಮಾಡಿಸುತ್ತೇವೆ. ಅವರು ನಮಗೆ ಹಾಲು ಕುಡಿಸಿ ಬೆಳೆಸಿದ್ದಾರೆ, ಅವರಿಗೆ ಹುಷಾರಿಲ್ಲ. ಆರೋಗ್ಯ ವಿಚಾರಿಸಲು ಹಾಗೂ ಚಿತ್ರೀಕರಣಕ್ಕೆ ಪೂಜೆ ಮಾಡಿಸಲು ನಾವೇ ಇಲ್ಲಿಗೆ ಬಂದಿದ್ದೇವೆ. ತಂದೆ ಚಿತ್ರೀಕರಣಕ್ಕೆ ಹೋದಾಗ ತಾಯಿಯೂ ಹೋಗುತ್ತಿದ್ರು. ಆಗ ನಾಗತ್ತೆ ನಮ್ಮನ್ನು ಸಾಕಿ ಸಲುಹಿದರು ಎಂದು ರಾಘವೇಂದ್ರ ರಾಜ್​ಕುಮಾರ್ ಹೇಳಿದರು.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video