Asianet Suvarna News Asianet Suvarna News

Kerebete: ಕೆರೆಬೇಟೆ ಸಿನಿಮಾಕ್ಕೆ ನಟ ಕಿಚ್ಚ ಸುದೀಪ್ ಸಾಥ್‌..! ಚಿತ್ರದ ಟ್ರೈಲರ್ ರಿಲೀಸ್ ಮಾಡ್ತಾರೆ ಕಿಚ್ಚ !

ಕರೆಬೇಟೆ ಸಿನಿಮಾಕ್ಕೆ ನಟ ಕಿಚ್ಚ ಸುದೀಪ್ ಸಾಥ್‌..!
ಕೆರೆಬೇಟೆ ಟ್ರೈಲರ್ ರಿಲೀಸ್ ಮಾಡ್ತಾರೆ ಸುದೀಪ್..!
ಗೌರಿ ಶಂಕರ್ ನಾಯಕನಾಗಿ ನಟಿಸಿರೋ ಸಿನಿಮಾ..!

ಸ್ಯಾಂಡಲ್‌ವುಡ್‌ನಲ್ಲಿ ಕೆರೆಬೇಟೆ ಸಿನಿಮಾ(Kerebete movie) ಗಮನ ಸೆಳೆಯುತ್ತಿದೆ. ಚಿತ್ರದ ಟೀಸರ್ ರಿಲೀಸ್(Teaser) ಆಗಿ ಗುಡ್ ಫೀಲ್ ಕೊಟ್ಟಿದೆ. ಡಾಲಿ ಧನಂಜಯ್ (Dolly Dhananjay) ಈ ಟೀಸರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಭೇಷ್ ಅಂದಿದ್ರು. ಮಲೆನಾಡ ಗೊಂಬೆ ಹಾಡು ರಿಲೀಸ್ ಮಾಡಿ ರಿಯಲ್ ಸ್ಟಾರ್ ಉಪೇಂದ್ರ ಗುಡ್ ಲಕ್ ಹೇಳಿದ್ರು.ರಾಜಹಂಸ ಸಿನಿಮಾ ಹೀರೋ ಗೌರಿಶಂಕರ್ ಕೆರೆಬೇಟೆ ಸಿನಿಮಾದಲ್ಲಿ ನಾಯಕ. ಮಲೆನಾಡ ಕಥೆಯ ಕೆರೆಬೇಟೆ ಭಾರಿ ನಿರೀಕ್ಷೆ ಮೂಡಿಸಿದೆ. ಹೀಗಾಗಿ ಈ ಸಿನಿಮಾದ ಟ್ರೈಲರ್ ರಿಲೀಸ್‌ಗೆ ದೊಡ್ಡ ಪ್ಲಾನ್ ಮಾಡಿರೋ ನಟ ಗೌರಿ ಶಂಕರ್ ಚಿತ್ರದ ಟ್ರೈಲರ್‌ನನ್ನ ನಟ ಕಿಚ್ಚ ಸುದೀಪ್‌ರಿಂದ ಬಿಡುಗಡೆ ಮಾಡಿಸುತ್ತಿದ್ದಾರೆ. ಫೆಬ್ರವರಿ-20 ರಂದು ಕೆರೆಬೇಟೆ ಟ್ರೈಲರ್ ರಿಲೀಸ್ ಆಗುತ್ತಿದೆ. ಕೆರೆ ಬೇಟೆ ಸಿನಿಮಾಗೆ ಗಗನ್ ಬಡೇರಿಯಾ ಸಂಗೀತ ನೀಡಿದ್ದಾರೆ. ಬಿಂದು ಶಿವರಾಂ ನಾಯಕಿಯಾಗಿ ನಟಿಸಿದ್ದಾರೆ. ಕೆರೆಬೇಟೆ ಚಿತ್ರವನ್ನ ರಾಜಗುರು ಬಿ ಡೈರೆಕ್ಟ್ ಮಾಡಿದ್ದಾರೆ. ಮಾರ್ಚ್‌-15 ರಂದು ಕೆರೆಬೇಟೆ ಸಿನಿಮಾ ಬಿಡುಗಡೆ ಆಗುತ್ತಿದೆ. 

ಇದನ್ನೂ ವೀಕ್ಷಿಸಿ:  UI Movie: ಉಪ್ಪಿ 'ಯುಐ' ವರ್ಲ್ಡ್‌ನಲ್ಲಿ ಸನ್ನಿ ಲಿಯೋನ್ ರೌಂಡ್..! ನಟಿ 'ಯುಐ'ನಲ್ಲಿ ಕುಣಿಯಲ್ಲ ನಟಿಸುತ್ತಾರೆ..!

Video Top Stories