Asianet Suvarna News Asianet Suvarna News

UI Movie: ಉಪ್ಪಿ 'ಯುಐ' ವರ್ಲ್ಡ್‌ನಲ್ಲಿ ಸನ್ನಿ ಲಿಯೋನ್ ರೌಂಡ್..! ನಟಿ 'ಯುಐ'ನಲ್ಲಿ ಕುಣಿಯಲ್ಲ ನಟಿಸುತ್ತಾರೆ..!

ರಿಯಲ್ ಸ್ಟಾರ್ ಉಪೇಂದ್ರ ನಿದ್ದೆ ಮಾಡುತ್ತಿಲ್ಲ. ದಿನಕ್ಕೆ ಎರಡು ಮೂರು ಗಂಟೆ ರೆಸ್ಟ್ ಮಾಡಿದ್ರೆ ಹೆಚ್ಚು. ಇದನ್ನ ನಾವ್ ಹೇಳುತ್ತಿಲ್ಲ. ರಿಯಲ್ ಸ್ಟಾರ್ ಉಪ್ಪಿಯ ಯುಐ ಸಿನಿಮಾದ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಹೇಳುತ್ತಿರೋ ಮಾತು.

First Published Feb 19, 2024, 10:07 AM IST | Last Updated Feb 19, 2024, 10:08 AM IST

ಯುಐ ಸಿನಿಮಾದ ಕೆಲಸ ಅಷ್ಟೊಂದು ಫಾಸ್ಟ್ ಅಗಿ ನಡೀತಿದೆಯಂತೆ. ಹೆಚ್ಚು ಗ್ರಾಫಿಕ್ಸ್ನಿಂದಲೇ ತುಂಬಿಕೊಂಡಿರೋ ಈ ಸಿನಮಾದ ಕೆಲಸಕ್ಕಾಗಿ ಉಪ್ಪಿ ಸಿಕ್ಕಾಪಟ್ಟೆ ತಲೆ ಕೆರೆದುಕೊಂಡಿದ್ದಾರಂತೆ. ಇಷ್ಟಾದ್ಮೇಲೆ ಯುಐ ರಿಲೀಸ್ ಯಾವಾಗ ಅಂತ ಕೇಳಿದ್ರೆ, ಅದನ್ನ ಹೇಳೋದಕ್ಕಾಗೆ ಡೇಟ್, ಟೈಂ ಫಿಕ್ಸ್ ಮಾಡಿದ್ದೇವೆ ಎಂದಿದ್ದಾರೆ. ಯುಐ ಸಿನಿಮಾ(UI Movie) ಹಲವು ಸಪ್ಪ್ರೈಸ್ಗಳ ಹೂರಣ. ಒಂದೊಂದೇ ಸರ್ಪ್ರೈಸ್‌ಗಳನ್ನ ಉಪ್ಪಿ ಬಿಡುತ್ತಾ ಬರುತ್ತಿದ್ದಾರೆ. ಟೀಸರ್ ಕೊಟ್ಟ ಬಳಿಕ ಈಗ ಹಾಡು ಬಿಡುಗಡೆ ಮಾಡೋದಾಗಿ ಹೇಳಿದ್ದಾರೆ. ಅದಕ್ಕೂ ಮೊದಲೇ ಯುಐ ಪ್ರಪಂಚದ ಬಗ್ಗೆ ಮತ್ತೊಂದು ಸುದ್ದಿ ಆವರಿಸಿದೆ. ಅದೇ ಯುಐನಲ್ಲಿ ಹಾಟಿ, ಪಡ್ಡೆಗಳ ಮನದನ್ನೆ, ಗಂಡ್ ಹೈಕ್ಳ ಸಿಂಗಾರ ಸಿರಿ ಸನ್ನಿ ಲಿಯೋನ್(Sunny Leone) ಇದ್ದಾರೆ ಅನ್ನೋದು. ಈ ಸೇಸಮ್ಮ ಯುಐ ಸಿನಿಮಾದಲ್ಲಿದ್ದಾರೆ ಅನ್ನೋ ಸುದ್ದಿ ಕಳೆದ ನಾಲ್ಕು ತಿಂಗಳ ಹಿಂದೆಯೇ ತಂಗಾಳಿಯಂತೆ ತೇಲಿ ಬಂದಿತ್ತು. ಆಗ ಯುಐನಲ್ಲಿ ಸನ್ನಿಯ ಹಾಟ್ ಡಾನ್ಸ್ ಇರುತ್ತೆ ಅನ್ನೋದು ಉಪ್ಪಿ ಫ್ಯಾನ್ಸ್ ಊಹೆಯಾಗಿತ್ತು. ಯಾಕಂದ್ರೆ ಈ ಬ್ಯೂಟಿ ಹಾಟ್ ಆಗಿ ಡಾನ್ಸ್ ಮಾಡಿದ್ರೇನೆ ಅದಕ್ಕೊಂದು ಕಳೆ ಅನ್ನೋದು ಪಡ್ಡೆಗಳ ವಾದ. ಕನ್ನಡದ ಸಿನಿಮಾದಲ್ಲಿ ಸನ್ನಿ  ಹೆಜ್ಜೆ ಗುರುತು ಇರೋದೇ ಹಾಡಿನಲ್ಲಿ. ಆದ್ರೆ ಯುಐ ಸಿನಿಮಾದಲ್ಲಿ ಲಿಯೋನಿ ಕುಣಿಯುತ್ತಿಲ್ಲ ನಿಮ್ಮನ್ನ ಕುಣಿಸುತ್ತಲೂ ಇಲ್ಲ. ಉಪೇಂದ್ರ(Upendra) ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ನಟಿಸುತ್ತಿದ್ದಾರೆ ಅನ್ನೋದು ಈಗ ಬಂದಿರೋ ಸುದ್ದಿ. ಉಪೇಂದ್ರ ‘ಯುಐ’ ಚಿತ್ರದಲ್ಲಿ ಚೀಪ್ ಸಾಂಗ್(Cheap Song) ಇದೆ ಅಂತ ಆ ಹಾಡಿನ ಪ್ರೋಮೋ ಬಿಟ್ಟಿದ್ದಾರೆ. ಈ ಚೀಪ್ ಸಾಂಗ್ ಸಾಹಿತ್ಯ ಕೇಳಿ ತಲೆ ಕೆಡಿಸಿಕೊಂಡಿರೋ ಫ್ಯಾನ್ಸ್ಗೆ ಈ ಹಾಡನ್ನ ಪೂರ್ತಿ ಕೇಳೋಕೆ ಇದೇ 26ನೇ ತಾರೀಖು ಸಮುಯ ಕೂಡಿ ಬರುತ್ತೆ.

ಇದನ್ನೂ ವೀಕ್ಷಿಸಿ:  Yuva Movie: ಶುರುವಾಯ್ತು ದೊಡ್ಮನೆ ಅಭಿಮಾನಿಗಳ 'ಯುವ' ಉತ್ಸವ..! ಹತ್ತಿರ ಆಗುತ್ತಿದೆ ಅಪ್ಪು ಫ್ಯಾನ್ಸ್ ಆಸೆ ಈಡೇರೋ ದಿನ..!

Video Top Stories