ಟ್ರೈಲರ್ ರಿಲೀಸ್ ಕಾರ್ಯಕ್ರಮ: ಹಿರಿಯ ಕಲಾವಿದ ಅಂದವರಿಗೆ ಫನ್ನಿಯಾಗಿ ಕಿಚಾಯಿಸಿದ ಸುದೀಪ್!

ಹಿರಿ ಕಿರಿಯರ ಸಮ್ಮಿಲನದ ಸಿನಿಮಾಗೆ ಸುದೀಪ್ ಸಪೋರ್ಟ್!
ಕೌಸಲ್ಯಾ ಸುಪ್ರಜಾ ರಾಮ ಟ್ರೈಲರ್ ರಿಲೀಸ್ ಮಾಡಿದ ಹೆಬ್ಬುಲಿ..!
ಕೌಸಲ್ಯಾ ಸುಪ್ರಜಾ ರಾಮ ಚಿತ್ರಕ್ಕೆ ಅರ್ಜುನ್ ಜನ್ಯಾ ಮ್ಯೂಸಿಕ್!

First Published Jul 16, 2023, 3:22 PM IST | Last Updated Jul 16, 2023, 3:22 PM IST

ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರೋ ಕೌಸಲ್ಯಾ ಸುಪ್ರಜಾ ರಾಮ(Kausalya Supraja Rama) ಸಿನಿಮಾದ ಟ್ರೈಲರ್(trailer) ಬಿಡುಗಡೆ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ಸೂಪರ್ ಸ್ಟಾರ್, ಭಾರತೀಯ ಚಿತ್ರರಂಗದ ಬಾದ್ ಷಾ ಕಿಚ್ಚ ಸುದೀಪ್(Kichcha Sudeep) ಗೆಸ್ಟ್ ಆಗಿ ಬಂದಿದ್ರು. ಈ ಸಿನಿಮಾ ನಿರ್ಮಾಣ ಮಾಡ್ತಿರೋದು ಮಾಜಿ ಸಚಿವ, ಸ್ಯಾಂಡಲ್ವುಡ್ನ ಕೌರವ ಬಿ.ಸಿ ಪಾಟೀಲ್. ಕೃಷ್ಣನ್ ಲವ್ ಸ್ಟೋರಿಯಂತಹ ಹಿಟ್ ಸಿನಿಮಾಗಳನ್ನ ಕೊಟ್ಟ ಶಶಾಂಕ್ ನಿರ್ದೇಶನದ ಸಿನಿಮಾ ಇದು. ಈ ಸಿನಿಮಾ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಒಂದು ಫನ್ನಿ ಘಟನೆ ನಡೀತು. ಅದೇನ್ ಗೊತ್ತಾ.? ಚಿತ್ರತಂಡದವರೆಲ್ಲಾ ಕಿಚ್ಚ  ಹಿರಿಯ ಕಲಾವಿದ ಸುದೀಪ್ ನಮ್ಮ ಕಾರ್ಯಕ್ರಮಕ್ಕೆ ಬಂದಿದ್ದಾರೆ ಅಂತ ಸ್ಟೇಜ್ ಹತ್ತುತ್ತಿದ್ದಂತೆ ಮಾತಿಗಿಳಿದ್ರು. ಆದ್ರೆ ಸುದೀಪ್ ವೇದಿಕೆ ಏರಿ ಹಿರಿಯ ಕಲಾವಿದ ಅಂದವರಿಗೆ ತನ್ನದೇ ದಾಟಿಯಲ್ಲಿ ಫನ್ನಿಯಾಗಿ ಕಿಚಾಯಿಸಿದ್ರು ಕಿಚ್ಚ. ಕೌಸಲ್ಯಾ ಸುಪ್ರಜಾ ರಾಮ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ಘಟನೆ ನಡೀತು. ಈ ಸಿನಿಮಾದ ನಾಯಕಿ ಬೃಂದಾ ಆಚಾರ್ (Brinda Acharya)ನನಗೆ ಕಿಚ್ಚ ಸುದೀಪ್ ಸರ್ ತರದ ಲವರ್ ಬೇಕು. ಸುದೀಪ್ ಸರ್ ನನಗೆ ತುಂಬಾ ಇಷ್ಟ ಅಂತ ಹೇಳ್ಬಿಟ್ರು. ಇದಕ್ಕೆ ಕಿಚ್ಚ ಫುಲ್ ಬ್ಲಷ್ ಆಗಿ ಎಲ್ಲರೂ ಹಿರಿಯ ನಟ ಅಂತ ಕರೆದ್ರು. ಆದ್ರೆ ಬೃಂಧಾ ನನಗೆ ನಿಮ್ ತರ ಲವರ್ ಬೇಕು ಅಂದ್ರಿ ನನಗೆ ಜೀವ ಬಂತು ಅಂತ ಹಾಸ್ಯ ಚಟಾಕೆ ಹರಸಿದ್ರು. ಕಿಚ್ಚನ ಕಾಮಿಡಿಯಿಂದ ಕೌಸಲ್ಯಾ ಸುಪ್ರಜಾ ರಾಮ ಸಿನಿಮಾದ ಕಾರ್ಯಕ್ರಮ ಸಿಕ್ಕಾಪಟ್ಟೆ ಎಂಟರ್ಟೈನಿಂಗ್ ಆಗಿತ್ತು.

ಇದನ್ನೂ ವೀಕ್ಷಿಸಿ:  ಕೆಜಿಎಫ್ ಸರಣಿ ನೋಡಿ ಥ್ರಿಲ್ ಆದ ಜಪಾನ್ ಮಂದಿ: ಎರಡು ದಿನಕ್ಕೆ ಜಪಾನ್‌ನಲ್ಲಿ ಗಳಿಸಿದ್ದೆಷ್ಟು..?