ಕಾಂತಾರ-1 ಬಗ್ಗೆ ತಿಳಿದುಬಂತು ಅಚ್ಚರಿ ಸಂಗತಿ! ಶೆಟ್ರು ಯಾವೆಲ್ಲಾ ಅಭ್ಯಾಸದಲ್ಲಿ ನಿರತರಾಗಿದ್ದಾರೆ ಗೊತ್ತಾ?
ಕಾಂತಾರ ಚಾಪ್ಟರ್ 1 ಗಾಗಿ ಕುಂದಾಪುರದಲ್ಲಿ ಇದೇ ವಾರದಿಂದ ಪ್ರೀಕ್ವೆಲ್ ಶೂಟಿಂಗ್ ಆರಂಭ ಆಗಲಿದ್ದು, ಅದ್ಧೂರಿ ಸೆಟ್ ನಿರ್ಮಾಣ ಆಗಲಿದೆ. ವಿಶೇಷ ಅಂದ್ರೆ ರಾಮೋಜಿ ಫಿಲ್ಮಂ ಸಿಟಿ ನಂತರ ಅತಿದೊಡ್ಡ ಸೆಟ್‌ಗಳಲ್ಲಿ ಇದು ಎರಡನೇಯದ್ದೂ ಎನ್ನಲಾಗುತ್ತಿದೆ.
ಕಾಂತಾರ ಸಿನಿಮಾ (Kantara movie) ಬಗ್ಗೆ ಹೊಸ ಅಪ್ಡೇಟ್ ತಿಳಿದುಬಂದಿದೆ. ಈ ಹಿಂದೆ ಕಾಂತಾರ ಕಣಕ್ಕೆ ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ (Mohanlal) ಎಂಟ್ರಿ ಕೊಡುತ್ತಾರೆ ಎನ್ನುವ ವಿಷಯ ಪ್ರೇಕ್ಷಕರನ್ನು ಹುಬ್ಬೇರಿಸುವಂತೆ ಮಾಡಿತ್ತು, ಅಷ್ಟೆ ಅಲ್ಲದೆ ಕಾಡುಬೆಟ್ಟ ಶಿವನ ತಂದೆಯಾಗಿ ಮೋಹನ್ ಲಾಲ್ ಬಣ್ಣ ಹಚ್ಚುತ್ತಾರೆ ಅಂತ ಹೇಳಲಾಗುತ್ತಿತ್ತು. ಆದರೆ ಈಗ ಕಾಂತಾರ ಪ್ರೀಕ್ವೆಲ್ ಶೂಟಿಂಗ್ ಬಗ್ಗೆ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಪ್ರೀ ಪ್ರೊಡಕ್ಷನ್ ಕೆಲಸವನ್ನು ಮುಗಿಸಿರುವ ಕಾಂತಾರದ ಸಾರಥಿ ರಿಷಬ್ 20 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಸುವುದಕ್ಕೆ ರೂಪ ರೇಷೆ ತಯಾರಿಸಿದ್ದಾರೆ ಎಂದು ತಿಳಿದುಬಂದಿದೆ. ಅದರಂತೆ ಕುಂದಾಪುರುದಲ್ಲಿ 20 ದಿನ ಫಸ್ಟ್ ಶೆಡ್ಯೂಲ್ ಶೂಟಿಂಗ್ ಶುರುವಾಗುತ್ತಿದೆ.
ಕುಂದಾಪುರದಲ್ಲಿ ಇದೇ ವಾರದಿಂದ ಕಾಂತಾರ ಪ್ರೀಕ್ವೆಲ್ ಶೂಟಿಂಗ್ ಆರಂಭ ಆಗಲಿದ್ದು, ಅದ್ಧೂರಿ ಸೆಟ್ ನಿರ್ಮಾಣ ಆಗಲಿದೆ. ವಿಶೇಷ ಅಂದ್ರೆ ರಾಮೋಜಿ ಫಿಲ್ಮಂ ಸಿಟಿ (Ramoji Film City) ನಂತರ ಅತಿದೊಡ್ಡ ಸೆಟ್ ಗಳಲ್ಲಿ ಇದು ಎರಡನೇಯದ್ದೂ ಎನ್ನಲಾಗುತ್ತಿದೆ. 200 X 200 ಅಡಿ ಒಳಾಂಗಣ ಸೆಟ್ ನಿರ್ಮಾಣ ಮಾಡಲಾಗುತ್ತಿದ್ದು, ಇದೇ ಸೆಟ್ ನಲ್ಲಿ ಎಡಿಟಿಂಗ್ ಹಾಗೂ ಡಬ್ಬಿಂಗ್ ವ್ಯವಸ್ಥೆಯನ್ನೂ ಸಹ ಮಾಡಲಾಗುತ್ತದೆ. ಈ ನಡುವೆ ಬೆಂಗಳೂರು, ಹೈದ್ರಾಬಾದ್, ಚೆನ್ನೈನಿಂದ 600 ಕ್ಕೂ ಹೆಚ್ಚು ಕಾರ್ಮಿಕರು ಸೆಟ್ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಬರೋಬ್ಬರಿ 125 ಕೋಟಿ ವೆಚ್ಚದಲ್ಲಿ ಈ ಸೆಟ್ ಅನ್ನು ನಿರ್ಮಾಣ ಮಾಡಲಾಗುತ್ತಿದೆಯಂತೆ.
ಈ ನಡುವೆ ಶೆಟ್ರು (Rishabh Shetty) ಈ ಬಾರಿ ಬನವಾಸಿಯ ಕದಂಬರ ಕಾಲಘಟ್ಟದಲ್ಲಿ ಕಾಂತಾರ ಪ್ರೀಕ್ವೆಲ್‌ಅನ್ನು ಕಟ್ಟಿಕೊಡೋದಕ್ಕೆ ಹೊರಟಿದ್ದಾರೆ. ಅದಕ್ಕಾಗಿ ಡಿವೈನ್ ಸ್ಟಾರ್ ಕೇರಳದ ಕಲೆ ಕಲರಿಪಯಟ್ಟು ಹಾಗೂ ಕುದುರೆ ಸವಾರಿ ಅಭ್ಯಾಸದಲ್ಲಿ ನಿರತರಾಗಿದ್ದಾರಂತೆ. ಕಾಂತಾರ ಸೀಕ್ವೆಲ್‌ಗಾಗಿ ಬೆವರು ಬಸಿದ ತಂತ್ರಜ್ಞರ ತಂಡವೇ ಈಗ ಪ್ರೀಕ್ವೆಲ್‌ಗೆ ದುಡಿಯುತ್ತಿದೆ. ಆದ್ರೆ ಶೆಟ್ಟರ ಜೊತೆ ಯಾರೆಲ್ಲಾ ಕಲಾವಿದರು ಇರ್ತಾರೆ? ಕಾಡುಬೆಟ್ಟು ಶಿವಪ್ಪನಿಗೆ ಜೊತೆಯಾಗೋ ನಾಯಕಿ ಯಾರು? ರುಕ್ಮಿಣಿ ವಸಂತ್, ಅಲಿಯಾ ಭಟ್, ಸಾಯಿ ಪಲ್ಲವಿ ಈ ಮೂವರಲ್ಲಿ ಕಾಂತಾರ ಕ್ವೀನ್ ಯಾರು? ಹೊಂಬಾಳೆ ಸಂಸ್ಥೆ ಅದ್ಯಾವ ನಾಯಕಿಗೆ ರೆಡ್ ಕಾರ್ಪೆಟ್ ಹಾಕಲಿದೆ? ಅನ್ನೋದನ್ನು ಕಾದುನೋಡಬೇಕಿದೆ.
ಇದನ್ನೂ ವೀಕ್ಷಿಸಿ: ಸಿದ್ಧವಾಗುತ್ತಿದೆ ಸೂಪರ್ ಸ್ಟಾರ್ ಬಯೋಪಿಕ್ ? ಸಾಜಿದ್ ನಾಡಿಯಾದ್ವಾಲ್ ನಿರ್ಮಾಣದಲ್ಲಿ ಬರುತ್ತಾ ಚಿತ್ರ..?