Asianet Suvarna News Asianet Suvarna News

ಸಿದ್ಧವಾಗುತ್ತಿದೆ ಸೂಪರ್ ಸ್ಟಾರ್ ಬಯೋಪಿಕ್ ? ಸಾಜಿದ್ ನಾಡಿಯಾದ್ವಾಲ್ ನಿರ್ಮಾಣದಲ್ಲಿ ಬರುತ್ತಾ ಚಿತ್ರ..?

ಬಯೋಪಿಕ್ ಸಿನಿಮಾಗಳು ಬಂದು ಬಾಕ್ಸಾಫೀಸ್‌ನಲ್ಲಿ ಇತಿಹಾಸ ಬರೆದ ಕಥೆ ಹತ್ತಾರಿವೆ. ಈಗ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ತಲೈವಾ ರಜನಿಕಾಂತ್ ಬಯೋಪಿಕ್ ಬಗ್ಗೆ ದೊಡ್ಡ ನ್ಯೂಸ್ ಒಂದು ಹೊರ ಬಂದಿದೆ. 

ಸೂಪರ್ ಸ್ಟಾರ್ ರಜನಿಕಾಂತ್. ಒಬ್ಬ ಬಸ್ ಕಂಡೆಕ್ಟರ್ ಆಗಿದ್ದ ಹುಡುಗ ಇಂದು ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್. ಇವರ ಸಾಧನೆಯ ಬಯೋಪಿಕ್ ಬಂದ್ರೆ ಹೇಗಿರುತ್ತೆ ಅಲ್ವಾ. ಅದಕ್ಕೆ ಈಗ ವೇಧಿಕೆ ಸಿದ್ಧವಾಗಿದೆಂತೆ. ರಜನಿಕಾಂತ್ ಅವರ ಜೀವನವನ್ನು(Rajinikanth Biopic) ಆಧರಿಸಿದ ಸಿನಿಮಾ ಮಾಡಲು ಬಾಲಿವುಡ್ ನಿರ್ಮಾಪಕ ಸಾಜಿದ್ ನಾಡಿಯಾದ್ವಾಲ್(Sajid Nadiadwal) ಸಿದ್ಧರಾಗಿದ್ದಾರಂತೆ. ಹಲವಾರು ವರ್ಷಗಳಿಂದ ರಜನಿ(Rajinikanth)ಬಯೋಪಿಕ್ ಬಗ್ಗೆ ಸುದ್ದಿ ಆಗುತ್ತಲೇ ಇದೆ. ಆದರೆ, ಯಾವುದೂ ನಿಕ್ಕಿ ಆಗಿರಲಿಲ್ಲ. ಈ ಬಾರಿ ನಿರ್ಮಾಪಕರ ಹೆಸರೂ ಬಹಿರಂಗ ಆಗಿದೆ. ಅಷ್ಟೆ ಅಲ್ಲ ರಜನಿ ರೋಲ್ನಲ್ಲಿ ಯಾರು ನಟಿಸಿದ್ರೆ ಚಂದ ಅನ್ನೋದಕ್ಕೆ ಹೆಸರು ಕೂಡ ಸಿಕ್ಕಿದೆ. ರಜನಿಕಾಂತ್ ಅಳಿಯ ಧನುಷ್(Dhanush) ಹೆಸರು ಈಗ ಚಾಲ್ತಿಯಲ್ಲಿದೆ. ರಜನಿಕಾಂತ್ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಸ್ಟಾರ್ ಹೀರೋ ಆಗಿರೋ ತಲೈವ ಕನ್ನಡ ಚಿತ್ರಗದಲ್ಲೂ ಮಿಂಚಿದ್ದು, ರಜಿನಿ ಜೀವನ ಅನೇಕರಿಗೆ ಸ್ಫೂರ್ತಿ. ಇದನ್ನು ತೆರೆಮೇಲೆ ತರುವ ಪ್ರಯತ್ನಗಳು ನಡೆಯುತ್ತಿವೆ ಆದ್ರೆ ಯಾರು ಡೈರೆಕ್ಟ್ ಮಾಡ್ತಾರೆ ಅನ್ನೋದು ಇನ್ನೂ ರಟ್ಟಾಗಿಲ್ಲ. ಈ ಬಯೋಪಿಕ್ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿರೋದುಂತು ನಿಜ. 

ಇದನ್ನೂ ವೀಕ್ಷಿಸಿ:  ಗಡಿನಾಡು ಬೆಳಗಾವಿಯಲ್ಲಿ ಲೋಕ ಕದನ ಗೆಲ್ಲೋರ್ಯಾರು? ಯುವ ನಾಯಕ v/s ಮಾಜಿ ಸಿಎಂ ನಡುವೆ ಬಿಗ್ ಫೈಟ್ !