Asianet Suvarna News Asianet Suvarna News

ಸ್ಯಾಂಡಲ್‌ವುಡ್‌ ಇತಿಹಾಸದಲ್ಲೇ ರಿಷಬ್ ಶೆಟ್ಟಿ ಹೊಸ ರೆಕಾರ್ಡ್! ಸಿನಿಮಾ ಶೂಟಿಂಗ್ ಮೊದಲೇ 'ಕಾಂತಾರ ಪ್ರೀಕ್ವೆಲ್' ಸೇಲ್..!

ರಿಷಬ್ ಶೆಟ್ಟಿ ಈಗ ಡಿಮ್ಯಾಂಡ್ ಕಾ ಬಾಪ್. ಅದಕ್ಕೆ ಕಾರಣ ಶೆಟ್ರು ಗುರಿ ಇಟ್ಟು ಹೊಡೆದ ಒಂದೇ ಒಂದು ಗೋಲಿ ಕಾಂತಾರ ಸಿನಿಮಾ. ಈ ಸಿನಿಮಾ ಮಾಡಿದ ಮೋಡಿ ಹೇಗೆ ವರ್ಕ್ ಆಗಿದೆ ಅಂತ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಗೊತ್ತು. ಇದೇ ನಿರೀಕ್ಷೆ ಮೇಲೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಾಂತಾರ ಪ್ರೀಕ್ವೇಲ್ ಕಥೆಯನ್ನ ಕೈಗೆತ್ತಿಕೊಂಡಿದ್ದಾರೆ. 

First Published Mar 25, 2024, 10:34 AM IST | Last Updated Mar 25, 2024, 10:34 AM IST

ಕಾಂತರ ಪ್ರೀಕ್ವೆಲ್ ಸಿನಿಮಾ ಮೇಲೆ ಇಡೀ ಭಾರತೀಯ ಸಿನಿ ಜಗತ್ತು ಕಣ್ಣಿಟ್ಟಿದೆ. ಆದ್ರೆ ಈ ಸಿನಿಮಾ ಶೂಟಿಂಗ್ ಇನ್ನೂ ಆರಂಭ ಆಗಿಲ್ಲ. ಆದಾಗ್ಲೆ ಕಾಂತಾರ ಪ್ರೀಕ್ವೆಲ್‌ನಲ್ಲಿ(Kantara prequel) ರಿಷಬ್ ಶೆಟ್ಟಿ(Rishab Shetty) ಹೊಸ ಇತಿಹಾಸ ಬರೆದಿದ್ದಾರೆ. ಚಿತ್ರೀಕರಣ ಮೊದಲೇ ಕಾಂತಾರ ಪ್ರೀಕ್ವೆಲ್ ಮಾರಾಟ ಆಗಿದೆ. ಇದು ಸ್ಯಾಂಡಲ್‌ವುಡ್(Sandalwood) ಇತಿಹಾಸದಲ್ಲೇ ಮೊದಲು. ಕಾಂತಾರ ಪ್ರೀಕ್ವೆಲ್ ಸೆಟ್ ವರ್ಕ್ ನಡೀತಿದೆ. 300 ಜನರ ತಂಡ ಕುಂದಾಪುರದ ಕೆರಾಡಿಯಲ್ಲಿ ಸೆಟ್ ವರ್ಕ್ ಕೆಲಸ ಮಾಡುತ್ತಿದ್ದಾರೆ. ಜೂನ್ನಿಂದ ಫುಲ್ ಪ್ಲೆಡ್ಜ್ ಚಿತ್ರೀಕರಣ ಆರಂಭ ಆಗುತ್ತಿದೆ. ಈ ಮಧ್ಯೆ ಕಾಂತಾರ ಪ್ರೀಕ್ವೆಲ್ ಒಟಿಟಿಗೆ(OTT) ಸೇಲ್ ಆಗಿದೆ. ಅಮೆಜಾನ್ ಪ್ರೈಂ ಕಂಪೆನಿ 250 ರಿಂದ 300 ಕೋಟಿ ಕೊಟ್ಟು ಕಾಂತಾರ ಪ್ರೀಕ್ವೆಲ್ ಸಿನಿಮಾ ಪ್ರದರ್ಶನದ ಹಕ್ಕು ಪಡೆದಿದೆಯಂತೆ. ಅಮೆಜಾನ್(Amazon) ಪ್ರೈಮ್ ವಿಡಿಯೋ ಇತ್ತೀಚೆಗೆ ದೊಡ್ಡ ಈವೆಂಟ್ ನಡೆದಿತ್ತು. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಕಾಂತಾರ ಚಾಪ್ಟರ್1 ಪೋಸ್ಟರ್ ಹಂಚಿಕೊಂಡಿರುವ ಅಮೇಜಾನ್ ಪ್ರೈಮ್ ಥಿಯೇಟರ್ನಲ್ಲಿ ರಿಲೀಸ್ ಆದ ಬಳಿಕ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಸಿನಿಮಾ ವೀಕ್ಷಿಸಬಹುದು’ ಎಂದು ಮಾಹಿತಿ ನೀಡಿದ್ದಾರೆ. ಕಾಂತಾರ ಚಾಪ್ಟರ್1 ಫೋಟೋ ಹಂಚಿಕೊಂಡಿರೋ ಅಮೇಜಾನ್ ಈ ಸಿನಿಮಾದ ಬಗ್ಗೆ ಮತ್ತೊಂದು ಗುಟ್ಟು ಬಿಟ್ಟುಕೊಟ್ಟಿದೆ. ಸಿನಿಮಾದ ಪಾತ್ರವರ್ಗದಲ್ಲಿ ರಿಷಬ್ ಜೊತೆ ಕಿಶೋರ್ ಕುಮಾರ್ ಹಾಗೂ ಅಚ್ಯುತ್ ಕುಮಾರ್ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ಮೂಲಕ ಕಾಂತಾರ ಚಾಪ್ಟರ್1ರಲ್ಲಿ ಅವರು ನಟಿಸುತ್ತಿರುವ ವಿಚಾರ ಖಚಿತಪಡಿಸಿದ್ದಾರೆ. 

ಇದನ್ನೂ ವೀಕ್ಷಿಸಿ:  ಯುವ ಕಾರ್ಯಕ್ರಮದಲ್ಲಿ ದೊಡ್ಮನೆ ಕುಟುಂಬ ಭಾಗಿ!ಯುವ ನನ್ನ ಮಗ ಅಲ್ಲ ಅಶ್ವಿನಿ, ಅಪ್ಪು ಪುತ್ರ ಎಂದ ರಾಘಣ್ಣ!

Video Top Stories