ಯುವ ಕಾರ್ಯಕ್ರಮದಲ್ಲಿ ದೊಡ್ಮನೆ ಕುಟುಂಬ ಭಾಗಿ!ಯುವ ನನ್ನ ಮಗ ಅಲ್ಲ ಅಶ್ವಿನಿ, ಅಪ್ಪು ಪುತ್ರ ಎಂದ ರಾಘಣ್ಣ!

ದೊಡ್ಮನೆ ಮೂರನೇ ತಲೆಮಾರು ಯುವರಾಜ್  ಕುಮಾರ್ ಕ್ರೇಜ್ ಹೇಗಿದೆ ಅಂತ ಹೊಸಪೇಟೆಯಲ್ಲಿ ಪ್ರ್ಯೂ ಆಗಿತ್ತು. ಯುವ ರಾಜ್ ಕುಮಾರ್ ಸ್ಟೇಜ್ ಮೇಲೆ ಎಂಟ್ರಿ ಕೊಡುತ್ತಿದ್ದಂತೆ ಇಡೀ ಹೊಸಪೇಟೆಯೇ ಅಭಿಮಾನಿಗಳ ಕೂಗಿನಿಂದ ಗೂಯಿಗುಡುತ್ತಿತ್ತು.
 

First Published Mar 25, 2024, 10:07 AM IST | Last Updated Mar 25, 2024, 10:07 AM IST

ವಿಜಯನಗರ ಜಿಲ್ಲೆ ಹೊಸಪೇಟೆ ಸ್ಯಾಂಡಲ್‌ವುಡ್‌ನ(Sandalwood) ದೊಡ್ಮನೆ ರಾಜವಂಶದ ಭದ್ರಕೋಟೆ. ಈ ಕೋಟೆಯಲ್ಲಿರೋ ಒಬ್ಬೊಬ್ಬ ಅಭಿಮಾನಿಗಳೂ ದೊಡ್ಮನೆಯ ಸೈನಿಕರಂತೆ ಇರುವರು. ಅಣ್ಣಾವ್ರ ಮನೆಯ ಯಾವುದೇ ಸಿನಿಮಾ ಬಂದ್ರು ಅದನ್ನ ನೋಡಿ ಖುಷಿ ಪಟ್ಟು ಆರಾಧಿಸಿ ಅನುಭವಿಸೋದ್ರ ಜೊತೆಗೆ ಗೆಲ್ಲಿಸೋ ಜಬಾಬ್ಧಾರಿಯನ್ನೂ ಸೈನಿಕರಂತೆ ಹೆಗಲ ಮೇಲೆ ಹೊತ್ತು ಮೆರಿತಾರೆ. ಇದೀಗ ಇಂತಹ ಡೈ ಹಾರ್ಡ್ ಅಭಿಮಾನಿಗಳ ಎದುರೇ ದೊಡ್ಮನೆಯ ಯುವರಾಜ, ಅಣ್ಣಾವ್ರ ಮೊಮ್ಮಗ, ರಾಘವೇಂದ್ರ ರಾಜ್ ಕುಮಾರ್ ಪುತ್ರ, ಅಪ್ಪು ಚಿತ್ರರಂಗಕ್ಕೆ ಲಾಚ್ ಮಾಡಬೇಕಿದ್ದ ಯುವ ರಾಜ್ ಕುಮಾರ್(Yuvaraj kumar) ದರ್ಶನ ಆಗಿದೆ. ಅದಕ್ಕೆ ಕಾರಣ ಯುವರಾಜ್ ಕುಮಾರ್ ನಟನೆಯ ಯುವ ಸಿನಿಮಾ(Yuva movie). ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್‌ ಅಚ್ಚು ಮೆಚ್ಚಿನ ನೆಚ್ಚಿನ ತಾಣ. ಈಗ ಅದೇ ಅಪ್ಪು ನೆಚ್ಚಿನ ಊರಿನಲ್ಲಿ ಸಾವಿರಾರು ಅಭಿಮಾನಿಗಳ ಎದುರು ಯುವ ಸಿನಿಮಾದ ಅದ್ದೂರಿ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿದೆ. ಯುವ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ದೊಡ್ಮನೆ ಕುಟುಂಬ ಭಾಗಿ ಆಗಿತ್ತು. ರಾಘವೇಂದ್ರ ರಾಜ್ ಕುಮಾರ್ ದಂಪತಿ, ವಿನಯ್ ರಾಜ್ ಕುಮಾರ್ ಆಶ್ವಿನಿ ಪುನೀತ್ ರಾಜ್ ಕುಮಾರ್ ಬಂದಿದ್ರು. ನಟ ರಾಘವೇಂದ್ರ ರಾಜ್ ಕುಮಾರ್ ತನ್ನ ಮಗನ ಬಗ್ಗೆ ಮಾತನಾಡಿದ್ದು ಅಪ್ಪು ಬಗ್ಗೆ ಮಾತನಾಡಿದ್ದನ್ನ ಕೇಳಿ ಕಾರ್ಯಕ್ರಮದಲ್ಲಿದ್ದವರು ಒಂದು ಕ್ಷಣ ಮೌನವಾಗಿದ್ರು.

ಇದನ್ನೂ ವೀಕ್ಷಿಸಿ:  ಬಬಲಾದಿ ಮುತ್ಯಾರ ಬೆಂಕಿ ಭವಿಷ್ಯಕ್ಕೆ ತಬ್ಬಿಬ್ಬಾದವರು ಯಾರು? ಭವಿಷ್ಯ ನುಡಿದ ಮೂರೇ ದಿನದಲ್ಲಿ ರಾಜಕಾರಣದಲ್ಲಿ ಗಢಗಢ!

Video Top Stories