
ಇದು ಕನ್ನಡ ಸಿನಿಮಾ ಪವರ್: ಬಾಹುಬಲಿಗೆ ಸೆಡ್ಡು ಹೊಡೆದ ‘ಕಾಂತಾರ’
ಕಾಂತಾರ ಸಿನಿಮಾ ಭರ್ಜರಿ ಯಶಸ್ಸು ಕಂಡಿದ್ದು, ಗಲ್ಲಾಪೆಟ್ಟಿಗೆ ಉಡೀಸ್ ಮಾಡಿದೆ. ಬಾಹುಬಲಿ ಸಿನಿಮಾದ ದಾಖಲೆಯನ್ನು ಮುರಿದಿದೆ.
ಕಾಂತಾರ ಸಿನಿಮಾವು ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದೆ. ಕಲೆಕ್ಷನ್ ವಿಚಾರದಲ್ಲಿಯೂ ಸದ್ದು ಮಾಡಿದೆ. ಇದೀಗ ಬಾಹುಬಲಿ ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡಿದೆ. ಬಾಹುಬಲಿ 5ನೇ ವಾರಾಂತ್ಯಕ್ಕೆ 23 ಕೋಟಿ 30 ಲಕ್ಷ ರೂಪಾಯಿ ಗಳಿಸಿತ್ತಂತೆ. ಆದರೆ ಕಾಂತಾರ ಸಿನಿಮಾ 5ನೇ ವಾರಕ್ಕೆ 26 ಕೋಟಿ ರೂ. ಕಲೆಕ್ಷನ್ ಮಾಡಿ ಪ್ರಭಾಸ್ ಸಿನಿಮಾಗೇ ಸೆಡ್ಡು ಹೊಡೆದು ಬಿಟ್ಟಿದೆ. ಇದು ಕನ್ನಡ ಚಿತ್ರದ ಪವರ್ ಎಂದು ಕನ್ನಡ ಜನತೆ ಮಾತಾಡುತ್ತಿದ್ದಾರೆ. ಒಟ್ಟು 200 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಕಾಂತಾರ.