ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?

ದಳಪತಿ ವಿಜಯ್ ಇದೊಂದು ಹೆಸರು ಇವತ್ತು ಇಡೀ ತಮಿಳು ನಾಡಲ್ಲಿ ಧಗ ಧಗಿಸುತ್ತಿದೆ. ತಮಿಳು ಚಿತ್ರರಂಗದ ನಂಬರ್ ಒನ್ ಹೀರೋ ಆಗಿದ್ದ ವಿಜಯ್​​ ಅತಿ ಹೆಚ್ಚು ಸಂಭಾವನೆ ಪಡೆದ ಹೀರೋ ಅನ್ನೋ ಹೆಗ್ಗಳಿಕೆ ಪಡೆದವರು. ವಿಜಯ್ ರಾಜಕಾರಣಿ ಆದ್ಮೇಲೆ ಹೆಜ್ಜೆ ಹೆಜ್ಜೆಗೂ ಸವಾಲುಗಳು ಸುತ್ತಿಕೊಳ್ತಾನೆ ಇವೆ..

Share this Video
  • FB
  • Linkdin
  • Whatsapp

ಕಾಲಿವುಡ್​​ ಸೂಪರ್​ ಸ್ಟಾರ್ ದಳಪತಿ ವಿಜಯ್​(Thalapathy Vijay) ತನ್ನ ಸಿನಿ ವೃತ್ತಿಗೆ ಗುಡ್​​ಬೈ ಹೇಳಿ ಆಗಿದೆ. ಆದ್ರೆ ವಿಜಯ್ ನಟನೆಯ ಕೊನೇಯ ಒಂದೇ ಒಂದು ಸಿನಿಮಾ ಜನ ನಾಯಗನ್ ಬಿಡುಗಡೆ ಆಗಬೇಕಿದೆ. ಆ ಕಡೆ ರಾಜಕೀಯ ಭವಿಷ್ಯ ಕಟ್ಟಿಕೊಳ್ಳೋ ಪಣ ತೊಟ್ಟಿರೋ ಈ ಹೀರೋಗೆ ಹೆಜ್ಜೆ ಹೆಜ್ಜೆಗೂ ಸವಾಲುಗಳು ಸುತ್ತಿಕೊಳ್ತಿವೆ. ಹಾಗಾದ್ರೆ ವಿಜಯ್​​ಗೆ ಎದುರಾಗುತ್ತಿರೋ ಆ ಅಗ್ನಿ ಪರೀಕ್ಷೆಗಳು ಹೇಗಿವೆ..? ವಿಜಯ್ ಒನ್ ಮ್ಯಾನ್ ಶೋ ಅವತಾರ ಹೇಗಿದೆ ನೋಡೋಣ ಬನ್ನಿ...
ದಳಪತಿ ವಿಜಯ್​ಹೆಜ್ಜೆ ಹೆಜ್ಜೆಗೂ ಅಗ್ನಿ ಪರೀಕ್ಷೆ; ಒನ್ ಮ್ಯಾನ್ ಶೋ ದಳಪತಿಗೆ ಇಲ್ಲವಾ ಶ್ರೀರಕ್ಷೆ..?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಳಪತಿ ವಿಜಯ್ ಇದೊಂದು ಹೆಸರು ಇವತ್ತು ಇಡೀ ತಮಿಳು ನಾಡಲ್ಲಿ ಧಗ ಧಗಿಸುತ್ತಿದೆ. ತಮಿಳು ಚಿತ್ರರಂಗದ ನಂಬರ್ ಒನ್ ಹೀರೋ ಆಗಿದ್ದ ವಿಜಯ್​​ ಅತಿ ಹೆಚ್ಚು ಸಂಭಾವನೆ ಪಡೆದ ಹೀರೋ ಅನ್ನೋ ಹೆಗ್ಗಳಿಕೆಯಿಂದ ಹಿಡಿದು, ಅತಿ ಹೆಚ್ಚು ಬಾಕ್ಸಾಫೀಸ್​​ ಕಲೆಕ್ಷನ್ ಮಾಡೋ ತಮಿಳು ಸೂಪರ್​ ಸ್ಟಾರ್ ಅನ್ನೋ ಪಟ್ಟಕ್ಕೂ ಏರಿದ್ದಾರೆ. ಆದ್ರೆ ಈಗ ಅಭಿನಯಕ್ಕೆ ಗುಡ್​​ಬೈ ಹೇಳಿರೋ ವಿಜಯ್​ ಚುನಾವಣೆಗೆ ಧುಮುಕಿದ್ದಾರೆ. ವಿಜಯ್ ರಾಜಕಾರಣಿ ಆದ್ಮೇಲೆ ಹೆಜ್ಜೆ ಹೆಜ್ಜೆಗೂ ಸವಾಲುಗಳು ಸುತ್ತಿಕೊಳ್ತಾನೆ ಇವೆ..

ವಿಜಯ್ ಈಗ ತಮಿಳು ನಾಡಿನಲ್ಲಿ ಒನ್ ಮ್ಯಾನ್ ಶೋ ಆಟ ಶುರು ಮಾಡಿದ್ದಾರೆ. ಯಾವ ಗುರುವಿನ ಶ್ರೀರಕ್ಷೆಯೂ ಇಲ್ಲದೇ ನನಗೆ ಮತದಾರರೇ ಗುರು ಅಂತ ಗೆಲ್ಲೋ ಪಣ ತೊಟ್ಟಿರೋ ವಿಜಯ್, ಅಬ್ಬರಿಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಅಖಂಡ ತಮಿಳು ನಾಡು ಸುತ್ತಿರೋ ದಳಪತಿ ಮತದಾರರಿಗೆ ಓಟಿನ ಗಾಳ ಹಾಕಿದ್ದಾರೆ. ವಿಜಯ್ ಅಬ್ಬರ ಹೇಗಿದೆ ಅಂದ್ರೆ ಇಡೀ ದ್ರಾವಿಡ ನಾಡಲ್ಲಿ ದಳಪತಿ ಅನ್ನೋ ಸೌಂಡೌಂದೇ ಕೇಳಿಸ್ತಾ ಇದೆ..

ತಮಿಳು ರಣಾಂಗಣದಲ್ಲಿ ವಿಜಯ್ ಏಕಾಂಗಿ ವೀರ; ದಳಪತಿ ಕಟೌಟ್​ನಿಂದ್ಲೇ TVK ಅಭ್ಯರ್ಥಿಗಳ ಪ್ರಚಾರ

ದಳಪತಿ ವಿಜಯ್​​ ತಮಿಳು ನಾಡು ಎಲ್ಲಾ ವಿಧಾನಸಬೆ ಕ್ಷೇತ್ರಗಳಿಗೂ ತನ್ನ ಟಿವಿಕೆ ಪಕ್ಷದಿಂದ ಅಭ್ಯರ್ಥಿಗಳನ್ನ ಅಖಾಡಕ್ಕೆ ಇಳಿಸಿದ್ದಾರೆ. ಆದ್ರೆ ಈ ಟಿವಿಕೆ ಪಕ್ಷಕರೋ ಒಂದೇ ಒಂದು ಮುಖಪುಟ ಅಂದ್ರೆ ಅದು ವಿಜಯ್. ಇವರ ಮೇಲೆ ಇಡೀ ಟಿವಿಕೆ ಪಕ್ಷದ ಭವಿಷ್ಯ ರೂಪುಗೊಳ್ಳಬೇಕು. ಹೀಗಾಗಿ ದಳಪತಿ ಕಳೆದ ಒಂದು ವರ್ಷದ ಹಿಂದಿನಿಂದಲೇ ಏಕಾಂಗಿಯಾಗಿ ತನ್ನ ಅಭ್ಯರ್ಥಿಗಳ ಪರ ಇಡೀ ತಮಿಳು ನಾಡು ಸುತ್ತುತ್ತಿದ್ದಾರೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ.. 

Related Video