Asianet Suvarna News Asianet Suvarna News

ಮತ್ತೆ ಮಾಯಾಮೃಗ: ಮಾಳವಿಕಾ ಮಗಳಾಗಿ ವಿದ್ಯಾಭೂಷಣರ ಮಗಳು ಮೇಧಾ

ಇಪ್ಪತ್ತೈದು ವರ್ಷಗಳ ಹಿಂದೆ ಬರುತ್ತಿದ್ದ ಟಿಎನ್ ಸೀತಾರಾಂ ನಿರ್ದೇಶನದ 'ಮಾಯಾಮೃಗ' ಧಾರಾವಾಹಿ ಇದೀಗ ಹಿಂದಿನ ಕಥೆಯ ಮುಂದುವರಿಕೆಯಾಗಿ 'ಮತ್ತೆ ಮಾಯಾಮೃಗ' ಅನ್ನೋ ಶೀರ್ಷಿಕೆಯಲ್ಲಿ ಪ್ರಸಾರವಾಗುತ್ತಿದೆ. ಇದರಲ್ಲಿ ಹಿಂದೆ ಸುಬ್ರಹ್ಮಣ್ಯ ಸ್ವಾಮಿಗಳಾಗಿದ್ದು, ಸಂನ್ಯಾಸ ದೀಕ್ಷೆ ತೊರೆದು ಸಂಸಾರಸ್ಥರಾದ ವಿದ್ಯಾಭೂಷಣರ ಮಗಳು ಮೇಧಾ ವಿದ್ಯಾಭೂಷಣ ಮುಖ್ಯಪಾತ್ರದಲ್ಲಿದ್ದಾರೆ. ಅವರಿಲ್ಲಿ ಮಾಳವಿಕಾ ಮಗಳ ಪಾತ್ರದಲ್ಲಿ ಮಿಂಚಲಿದ್ದಾರೆ.

In Mathe Mayamruga serial Medha is in lead
Author
First Published Nov 1, 2022, 2:32 PM IST

ಸಿರಿಕನ್ನಡ ಅನ್ನೋ ಚಾನೆಲ್ ಶುರುವಾಗಿ ನಾಲ್ಕೈದು ವರ್ಷ ಆಯ್ತು. ಇದೀಗ ಇದರಲ್ಲಿ ಟಿಎನ್‌ ಸೀತಾರಾಂ ಅವರ ನಿರ್ದೇಶನದ ಸೀರಿಯಲ್‌ 'ಮತ್ತೆ ಮಾಯಾಮೃಗ' ರಾತ್ರಿ 9 ಗಂಟೆಗೆ ಪ್ರಸಾರ ಆರಂಭಿಸಿದೆ. ನಿನ್ನೆಯ ಆರಂಭಿಕ ಸಂಚಿಕೆ ಸರಳವಾಗಿ ಸೊಗಸಾಗಿ ಮೂಡಿಬಂದಿತ್ತು. ಹಿಂದಿನ ಮಾಯಾಮೃಗ ನೋಡಿದ ನೆನಪಲ್ಲೇ ಹಲವರು ಈ ಸೀರಿಯಲ್ ನೋಡಿದರು. ಈ ಹಿಂದೆ ಸೀತಾರಾಂ ಅವರೇ ಹೇಳಿದ ಹಾಗೆ ಕಥೆಯ ಎಳೆ ಹಳೆಯದೇ ಇದ್ದರೂ ಹೊಸ ಪಾತ್ರಗಳು ಸೀರಿಯಲ್‌ಗೆ ಎಂಟ್ರಿ ಕೊಟ್ಟಿದ್ದವು. ಹಿಂದಿನ ಸೀರಿಯಲ್‌ನ ನೆಕ್ಸ್ಟ್‌ ಜನರೇಶನ್ ಎಂಟ್ರಿ ಕುತೂಹಲ ಮೂಡಿಸುವ ಹಾಗಿತ್ತು. ಹಿಂದಿನ 'ಮಾಯಾಮೃಗ'ದಲ್ಲಿ ಮದುವೆ, ಸಾಂಸಾರಿಕ ಬಿಕ್ಕಟ್ಟು ಎದುರಿಸುತ್ತಿದ್ದ ಮಾಳವಿಕಾಗೆ ಈ ಸೀರಿಯಲ್‌ನಲ್ಲಿ ಮದುವೆಯ ವಯಸ್ಸಿಗೆ ಬಂದ ಮಗಳಿದ್ದಾಳೆ. ಆ ಪಾತ್ರವನ್ನು ಸಂಗೀತ ವಿದ್ವಾಂಸ, ಸುಬ್ರಹ್ಮಣ್ಯ ಮಠದ ಸ್ವಾಮೀಜಿ ಆಗಿದ್ದು ಆ ಬಳಿಕ ರಮಾ ಅವರ ಕೈ ಹಿಡಿದು ಸಂಸಾರಿಕ ಜೀವನಕ್ಕೆ ಕಾಲಿಟ್ಟ ವಿದ್ಯಾಭೂಷಣರ ಮಗಳಿದ್ದಾರೆ. ಆಕೆ ಇದರಲ್ಲಿ ಮಾಳವಿಕಾ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.

ಟ್ಯಾಲೆಂಟೆಡ್ ಹುಡುಗಿ ಮೇಧಾ
ಮೇಧಾ ವಿದ್ಯಾಭೂಷಣ್‌ ಈ ಹಿಂದೆ ನಾಟಕಗಳಲ್ಲಿ ಅಭಿನಯಿಸಿದ್ದರು. ನಾಟಕದಲ್ಲಿ ಇವರ ದ್ರೌಪದಿ ಪಾತ್ರ ನಾಟಕ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ರಂಗಭೂಮಿ ಹಿನ್ನೆಲೆಯ ಕಾರಣ ನಟನೆಯ ಬಗ್ಗೆ ಚಕಾರ ಎತ್ತುವ ಹಾಗಿಲ್ಲ. ಇವರು ಶಾಸ್ತ್ರೀಯ ಸಂಗೀತ ಗಾಯಕಿಯೂ ಹೌದು. ಅನೇಕ ಕಡೆ ಸಂಗೀತ ಕಚೇರಿ ನೀಡಿದ್ದಾರೆ. ಇವರ ಸಂಗೀತದ ಸಿಡಿಗಳು ಬಿಡುಗಡೆಯಾಗಿವೆ. ಅನೇಕ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಭಾಗಿಯಾಗಿದ್ದವರು. ಇವರಿಗೊಬ್ಬ ಸಹೋದರನೂ ಇದ್ದಾರೆ. ಅವರ ಹೆಸರು ಅನಿರುದ್ಧ್. ಇವರು ಫೋಟೋಗ್ರಫಿ, ಕ್ರಿಕೆಟ್‌ ಅನ್ನು ಹವ್ಯಾಸ ಮಾಡಿಕೊಂಡವರು.

Olavina Nildana : ತಾರಿಣಿಗೆ ಗುಂಡೇಟು, ಈ ಕೇಸಲ್ಲಿ ಸಿದ್ಧಾಂತ್‌ನ ಸಿಕ್ಕಿಹಾಕಿಸ್ತಾನಾ ಪಾಲಾಕ್ಷ?

ಟಿಎನ್‌ಎಸ್‌ ಇನ್ನೊಂದು ಸೀರಿಯಲ್‌ನಲ್ಲಿ ನಟಿಸಬೇಕಿತ್ತು!
ಕೋವಿಡ್‌ಗೂ ಮೊದಲು ಟಿಎನ್‌ ಸೀತಾರಾಂ ಅವರು ಒಂದು ಸೀರಿಯಲ್‌ ಮಾಡಲು ಮುಂದಾಗಿದ್ದರು. ಅದು ಸ್ಪೋರ್ಟ್ಸ್ ಹಿನ್ನೆಲೆಯ ಹುಡುಗಿಯ ಕಥೆ. ಅದರಲ್ಲಿ ನಾಯಕಿಗೆ ಹಾಡು ಹೇಳಲೂ ಬರಬೇಕು. ಅಂಥಾ ಸ್ಟ್ರಾಂಗ್ ನಾಯಕಿ ಪಾತ್ರಕ್ಕೆ ಟಿಎನ್‌ ಸೀತಾರಾಂ ಅವರು ಹುಡುಕಾಟದಲ್ಲಿದ್ದಾಗ ತಮ್ಮ ಸ್ನೇಹಿತರ ಮೂಲಕ ಅವರ ಕಣ್ಣಿಗೆ ಬಿದ್ದ ಹುಡುಗಿ ಈ ಮೇಧಾ ಹಿರಣ್ಮಯಿ ಅಥವಾ ಮೇಧಾ ವಿದ್ಯಾಭೂಷಣ್. ಈಕೆಯನ್ನೇ ಟಿಎನ್ ಸೀತಾರಾಂ ತಮ್ಮ ಸೀರಿಯಲ್‌ ನಾಯಕಿಯನ್ನಾಗಿ ಮಾಡಲು ಹೊರಟಿದ್ದರು. ಆದರೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಬೇಕಿದ್ದ ಈ ಸೀರಿಯಲ್ ತಾಂತ್ರಿಕ ಕಾರಣಕ್ಕೆ ಪ್ರಸಾರವಾಗಲೇ ಇಲ್ಲ.

ಮತ್ತೆ ಮಾಯಾಮೃಗದಲ್ಲಿ ಮೇಧಾ
ಇದೀಗ ತಮ್ಮ ನಿರ್ದೇಶನದ 'ಮತ್ತೆ ಮಾಯಾಮೃಗ' ಸೀರಿಯಲ್‌ನಲ್ಲಿ ಬಹುಮುಖ್ಯ ಪಾತ್ರವನ್ನು ಟಿಎನ್‌ ಸೀತಾರಾಂ ಅವರು ಮೇಧಾ ಅವರಿಗೆ ನೀಡಿದ್ದಾರೆ. ಇದರಲ್ಲಿ ಮೇಧಾ ಅವರು ಮಾಳವಿಕಾ ಮಗಳ(Daughter) ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎಐ ಇಂಜಿನಿಯರ್‌(AI Engineer) ಆಗಿ ದೊಡ್ಡ ಸಾಧನೆ ಮಾಡಬೇಕೆಂಬ ಕನಸು ಹೊತ್ತ ಈ ಕಾಲದ ಹುಡುಗಿ ಪಾತ್ರದಲ್ಲಿ ಮೇಧಾ ಕಾಣಿಸಿಕೊಂಡಿದ್ದಾರೆ. ಆದರೆ ತಾಯಿ ಮಾಳವಿಕಾ ಈಕೆಗೆ ಮದುವೆ(Marriage) ಆಗುವಂತೆ ಒತ್ತಾಯ ಮಾಡುತ್ತಾರೆ. ಈಕೆ ತಾಯಿಯನ್ನು ಆವಾಯ್ಡ್ ಮಾಡುತ್ತಾ ತನ್ನ ಸಾಧನೆ ಮುಂದುವರಿಸುವ ಮನಸ್ಥಿತಿಯಲ್ಲಿ ಇರುತ್ತಾಳೆ.

 

ಮತ್ತೆ ಮಾಯಾಮೃಗದಲ್ಲಿ ಕಲಾವಿದರ ದಂಡು
ಮತ್ತೆ ಮಾಯಾಮೃಗ ಸೀರಿಯಲ್‌(Serial)ನಲ್ಲಿ ದೊಡ್ಡ ಕಲಾವಿದರ ದಂಡೇ ಇದೆ. ಇದರಲ್ಲಿ ಟಿಎನ್‌ಎಸ್‌ ಅವರ ಕೋರ್ಟ್ ಸೀನ್ ಇಲ್ಲದೇ ಹೋದರೂ ಅವರು ಇದರಲ್ಲಿ ಲಾಯರ್‌(Lawyer) ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಹಿರಿಯ ಕಲಾವಿದೆ ಲಕ್ಷ್ಮೀ ಚಂದ್ರಶೇಖರ್‌ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ. ಮಾಳವಿಕಾ, ಜಯಶ್ರೀ, ಮಂಜುಭಾಷಿಣಿ, ದೀಪಾ ಮೊದಲಾದವರು ಹಿಂದಿನ ತಲೆಮಾರನ್ನು (Generation) ಪ್ರತಿನಿಧಿಸಿದರೆ, ಮೇಧಾ ವಿದ್ಮಾಭೂಷಣ್‌, ನಾಗಾರ್ಜುನ್, ಲಹರಿ ಭಾರಿಘಾಟ್, ನಿಖಿತಾ ಮೊದಲಾದವರು ಈ ಜನರೇಶನ್‌ನ ಪ್ರತಿನಿಧಿಗಳು. ಟಿಎನ್‌ಎಸ್ ಜೊತೆಗೆ ಪಿ ಶೇಷಾದ್ರಿ ಮತ್ತು ನಾಗೇಂದ್ರ ಶಾ ನಿರ್ದೇಶನ (Direction) ಮಾಡಿದ್ದಾರೆ.

BBK9 ಕಂಟೆಂಟ್‌ಗೂ ಕೇರ್‌ ಮಾಡದೆ TRPಗೂ ತಲೆ ಕೆಡಿಸಿಕೊಳ್ಳದೆ ಇರೋದು ನೇಹಾ ಗೌಡ ಒಬ್ಬಳೇ'

Follow Us:
Download App:
  • android
  • ios