
ಸುವರ್ಣ ಪಾರ್ಟಿಯಲ್ಲಿ 'ಸಿಂಗಾರ ಸಿರಿ': ತಂದೆಯೇ ಮೊದಲ ಹೀರೋ ಅಂದ ಸಪ್ತಮಿ ಗೌಡ
ಸುವರ್ಣ ನ್ಯೂಸ್'ನ ಹೊಸ ವರ್ಷದ ಕಾರ್ಯಕ್ರಮ 'ಸುವರ್ಣ ಪಾರ್ಟಿ'ಯಲ್ಲಿ ನಟಿ ಸಪ್ತಮಿ ಗೌಡ ಭಾಗಿಯಾಗಿದ್ದಾರೆ. ಅನೇಕ ವಿಚಾರಗಳನ್ನು ಮಾತನಾಡಿದ್ದಾರೆ.
ಕಾಂತಾರ ಸಿನಿಮಾದಿಂದ ಲೀಲಾ ಎಂದು ಕರೆಸಿಕೊಳ್ಳುತ್ತಿದ್ದೇನೆ. 2023ರ ಸಿನಿಮಾಗಳು ಇದೆ. ಏನು ಆಗುತ್ತೆ ಎಂದು ಕಾಯುತ್ತಿದ್ದೇನೆ ಎಂದು ನಟಿ ಸಪ್ತಮಿ ಗೌಡ ಹೇಳಿದರು. ಹಾಗೇ ಈ ಕಾರ್ಯಕ್ರಮದಲ್ಲಿ ಅವರ ತಂದೆ ಕೂಡ ಬಂದಿದ್ದು, ಮಗಳ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ಹೊಂಬಾಳೆಯವರು ಒಳ್ಳೆ ಅವಕಾಶ ಕೊಟ್ಟು, ರಿಷಬ್ ತುಂಬಾ ಚೆನ್ನಾಗಿ ತೊಡಗಿಸಿಕೊಂಡರು ಎಂದು ಮಗಳ ಬಗ್ಗೆ ಹೆಮ್ಮೆಯನ್ನು ಪಟ್ಟರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ