
Pungi Dance: ವಿರಾಜ್ ಪುಂಗಿ ಹಾಡಿಗೆ ಸೊಂಟ ಬಳುಕಿಸಿದ ದಿವ್ಯಾ ಸುರೇಶ್
ಇತ್ತೀಚೆಗಷ್ಟೇ ಸ್ಯಾಂಡಲ್‌ವುಡ್‌ನ ರ‍್ಯಾಪರ್ ಚಂದನ್ ಶೆಟ್ಟಿಯ 'ಲಕ ಲಕ ಲ್ಯಾಂಬೋರ್ಗಿನಿ' ಸಾಂಗ್ ಬಿಡುಗಡೆಯಾಗಿ ಸಿನಿಪ್ರಿಯರ ಮೆಚ್ಚುಗೆಯನ್ನು ಪಡೆದಿತ್ತು. ಇದೀಗ ವಿರಾಜ್ ಕನ್ನಡಿಗ ಧ್ವನಿಯಲ್ಲಿ 'ಪುಂಗಿ ಡ್ಯಾನ್ಸ್' ಎನ್ನುವ ವಿಡಿಯೋ ಆಲ್ಬಮ್ ಸಾಂಗ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಒಳ್ಳೆ ಪ್ರತಿಕ್ರಿಯೆ ಪಡೆದುಕೊಂಡಿದೆ.
ಇತ್ತೀಚೆಗಷ್ಟೇ ಸ್ಯಾಂಡಲ್‌ವುಡ್‌ನ ರ‍್ಯಾಪರ್ ಚಂದನ್ ಶೆಟ್ಟಿಯ 'ಲಕ ಲಕ ಲ್ಯಾಂಬೋರ್ಗಿನಿ' ಸಾಂಗ್ ಬಿಡುಗಡೆಯಾಗಿ ಸಿನಿಪ್ರಿಯರ ಮೆಚ್ಚುಗೆಯನ್ನು ಪಡೆದಿತ್ತು. ಇದೀಗ ವಿರಾಜ್ ಕನ್ನಡಿಗ (Viraj Kannadiga) ಧ್ವನಿಯಲ್ಲಿ 'ಪುಂಗಿ ಡ್ಯಾನ್ಸ್' (Pungi Dance) ಎನ್ನುವ ವಿಡಿಯೋ ಆಲ್ಬಮ್ ಸಾಂಗ್ (Album Song) ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಒಳ್ಳೆ ಪ್ರತಿಕ್ರಿಯೆ ಪಡೆದುಕೊಂಡಿದೆ. ಬಿಗ್‌ಬಾಸ್ ಖ್ಯಾತಿಯ ದಿವ್ಯಾ ಸುರೇಶ್ (Divya Suresh) ಅವರು ಈ ಹಾಡಿನಲ್ಲಿ ನಾಗಿನಿ ಡ್ಯಾನ್ಸ್ ಮಾಡಿದ್ದು, ಸಿನಿರಸಿಕರಿಗೆ ಹೊಸ ವರ್ಷಕ್ಕೆ ರಸದೌತಣ ನೀಡಿದ್ದಾರೆ. ಹಾಡು ತುಂಬಾ ಅದ್ಭುತವಾಗಿ ಮೂಡಿಬಂದಿದೆ.
Vikrant Rona: ಫೆಬ್ರವರಿ 24ರಂದು ಕಿಚ್ಚ ಸುದೀಪ್ ಚಿತ್ರ ಬಿಡುಗಡೆಯಾಗುತ್ತಾ?
ಇದು ನನ್ನ ಬಹುದೊಡ್ಡ ಕನಸಾಗಿತ್ತು. 2021ರ ಹೊಸ ವರ್ಷಕ್ಕೆ ಈ ಹಾಡನ್ನು ರಿಲೀಸ್ ಮಾಡಬೇಕು ಅಂದಿಕೊಂಡಿದ್ದೆ. ಆದರೆ ಅದು 2022ಕ್ಕೆ ನೆರವೇರಿದೆ ಎಂದು ವಿರಾಜ್ ಹೇಳಿದ್ದಾರೆ. ಜೊತೆಗೆ ದಿವ್ಯಾ ಸುರೇಶ್ಗೆ ಈ ಹಾಡಿನಲ್ಲಿರುವ ಕ್ಯಾರೆಕ್ಟರ್ ತುಂಬಾ ಸೂಟ್ ಆಗುತ್ತದೆ. ದಿವ್ಯಾ ಅವರನ್ನು ನಾನು ಬಿಗ್ಬಾಸ್ನಲ್ಲಿ ನೋಡಿದ್ದೆ. ಆಗಲೇ ಈ ಹಾಡಿಗೆ ಅವರನ್ನು ಹಾಕಿಕೊಳ್ಳಬೇಕು ಎಂದು ವಿರಾಜ್ ತಿಳಿಸಿದ್ದಾರೆ. ನಿರಂಜನ್ ಬೋಪಣ್ಣ (Niranjan Bopanna) ಕ್ಯಾಮೆರಾ ಕೈಚಳಕದಲ್ಲಿ ಮೂಡಿಬಂದಿರುವ ಈ ಹಾಡಿಗೆ ಅಪ್‌ಸ್ಟಾರ್ಟ್ ಮ್ಯೂಸಿಕ್ (Upstart Music ) ಸಂಸ್ಥೆಯವರು ಬಂಡವಾಳ ಹೂಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment(