ರೂಪಾಂತರ ಚಿತ್ರದ ಮೂಲಕ ಬೆಂಗಳೂರು ರೌಡಿಸಂಗೆ Raj B Shetty ಎಂಟ್ರಿ!

'ಗರುಡ ಗಮನ ವೃಷಭ ವಾಹನ' ಸಿನಿಮಾದ ಯಶಸ್ಸಿನಲ್ಲಿರುವ ನಟ, ನಿರ್ದೇಶಕ ರಾಜ್‌ ಬಿ. ಶೆಟ್ಟಿ ವಿಭಿನ್ನ ಶೈಲಿಯ ಕಥೆಯಿರುವ ಮತ್ತೊಂದು ಸಿನಿಮಾದಲ್ಲಿ ನಟಿಸಿದ್ದಾರೆ. ಅದೂ ಬೆಂಗಳೂರಿಗನ ಡಾನ್ ಪಾತ್ರ ಇದಾಗಿರುವುದು ವಿಶೇಷ.

Share this Video
  • FB
  • Linkdin
  • Whatsapp

'ಒಂದು ಮೊಟ್ಟೆಯ ಕಥೆ' (Ondu Mottea kathe) ಚಿತ್ರದ ಮೂಲಕ ಜನಾರ್ದನ್ ಆಗಿ ಪರಿಚಯವಾದ ನಟ ರಾಜ್‌ ಬಿ ಶೆಟ್ಟಿ (Raj B Shetty) ಅತಿ ಹೆಚ್ಚು ಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚಿನ ಸಿನಿಮಾ 'ಗರುಡಗಮನ ವೃಷಭವಾಹನ' ಗ್ಯಾಂಗ್‌ಸ್ಟರ್‌ ಚಿತ್ರದಲ್ಲಿಯೂ ರಾಜ್ ಸಖತ್ ಆಗಿ ಮಿಂಚಿದ್ದಾರೆ. ಇದೀಗ ವಿಭಿನ್ನ ಶೈಲಿಯ ನಿರೂಪಣೆಯ ಸಿನಿಮಾದಲ್ಲಿ ಅವರು ನಟಿಸಿದ್ದು, ಅದರ ಹೆಸರು 'ರೂಪಾಂತರ' (Roopantara). ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ರೌಡಿಯ ಪಾತ್ರ ನಿರ್ವಹಿಸಿದ್ದಾರೆ. ಅದೂ ಬೆಂಗಳೂರಿಗನ ಡಾನ್ ಪಾತ್ರ ಇದಾಗಿರುವುದು ವಿಶೇಷ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುದ್ದು ಮಗಳಿಗೆ ವೀಕೆಂಡ್‌ನಲ್ಲಿ ಕನ್ನಡದ ಪಾಠ ಮಾಡಿದ Yash!

ಈಗಾಗಲೇ 'ರೂಪಾಂತರ' ಚಿತ್ರದ ಚಿತ್ರೀಕರಣವೂ ಮುಗಿದಿದೆ. ಮಿಥಿಲೇಶ್‌ ಎಡವಲದ್‌ ಎಂಬುವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 'ಒಂದು ಮೊಟ್ಟೆಯ ಕಥೆ' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಸುಹಾಸ್‌ 'ರೂಪಾಂತರ'ಕ್ಕೂ ಹಣ ಹೂಡಿದ್ದಾರೆ. 'ಗರುಡ ಗಮನ ವೃಷಭ ವಾಹನ' ರೀತಿ ನನಗೆ ಖುಷಿ ಕೊಟ್ಟ ಪ್ರಾಜೆಕ್ಟ್ ಇದು. ಇಂಟ್ರೆಸ್ಟಿಂಗ್‌ ಕಥೆಯನ್ನು ಈ ಸಿನಿಮಾ ಹೊಂದಿದೆ. ಮನುಷ್ಯ ಬೇರೆ ಬೇರೆ ಸಂದರ್ಭಗಳಲ್ಲಿ ಬದಲಾಗುತ್ತಾನೆ. ಅಂತಹ ಒಂದು ಬದಲಾವಣೆಯ ಕಥೆ ಈ ಚಿತ್ರದಲ್ಲಿದೆ. ನಾನು ಇದರಲ್ಲಿ ಬೆಂಗಳೂರು ಮೂಲದ ರೌಡಿಯಾಗಿರುತ್ತೇನೆ ಎಂದು ರಾಜ್ ಬಿ ಶೆಟ್ಟಿ ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video