Vikrant Rona: ಕಿಚ್ಚನ 'ವಿಕ್ರಾಂತ್ ರೋಣ' ಟೀಸರ್ ರಿಲೀಸ್ ಯಾವಾಗ ಗೊತ್ತಾ?

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ರಂಗಿತರಂಗ' ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ  ಪ್ಯಾನ್ ಇಂಡಿಯಾ ಬಿಗ್‌ ಬಜೆಟ್‌ ಸಿನಿಮಾ 'ವಿಕ್ರಾಂತ್ ರೋಣ' ಟೀಸರ್ ರಿಲೀಸ್ ಬಗ್ಗೆ ಸ್ಪೆಷಲ್ ಮಾಹಿತಿಯೊಂದು ಬಹಿರಂಗವಾಗಿದೆ. 

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅಭಿನಯದ 'ರಂಗಿತರಂಗ' ಖ್ಯಾತಿಯ ಅನೂಪ್ ಭಂಡಾರಿ (Anup Bhandari) ನಿರ್ದೇಶನದ ಪ್ಯಾನ್ ಇಂಡಿಯಾ ಬಿಗ್‌ ಬಜೆಟ್‌ ಸಿನಿಮಾ 'ವಿಕ್ರಾಂತ್ ರೋಣ' (Vikranth Rona) ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಈಗಾಗಲೇ ಚಿತ್ರದ ಟೀಸರ್, ​ಪೋಸ್ಟರ್ ಲುಕ್‌ಗಳು ಬಿಡುಗಡೆಯಾಗಿ ಸಿನಿರಸಿಕರ ಗಮನ ಸೆಳೆದಿದ್ದು, ಇದೀಗ ಚಿತ್ರದ ಟೀಸರ್ (Teaser) ರಿಲೀಸ್ ಬಗ್ಗೆ ಸ್ಪೆಷಲ್ ಮಾಹಿತಿಯೊಂದು ಬಹಿರಂಗವಾಗಿದೆ. 'ವಿಕ್ರಾಂತ್ ರೋಣ' ಸಿನಿಮಾ 2 ಡಿ ಮತ್ತು 3 ಡಿ ಯಲ್ಲಿ ಸಿದ್ಧವಾಗಿದ್ದು, ಈ ಚಿತ್ರದ ಟೀಸರನ್ನು 'ಕೆಜಿಎಫ್ 2' (KGF 2) ಹಾಗೂ 'ಆರ್‌ಆರ್‌ಆರ್‌' (RRR) ಚಿತ್ರದ ಜೊತೆಗೆ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.

Add Asianetnews Kannada as a Preferred SourcegooglePreferred

Vikrant Rona ಸರ್‌ಪ್ರೈಸ್ ರೂಟ್‌ಮ್ಯಾಪ್ ಕೊಟ್ಟ ಕಿಚ್ಚ ಸುದೀಪ್!

ವಿಶೇಷವಾಗಿ ಐಪಿಎಲ್ (IPL) ನೇರಪ್ರಸಾರ ನಡೆಯುವ ಸಮಯದಲ್ಲೂ ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರದ ನಿರ್ಮಾಪಕ ಜಾಕ್ ಮಂಜು (Jack Manju) ಯೋಚನೆ ಮಾಡಿದ್ದು, ಅದು ಯಾವಾಗ ಎಂದು ಬಹಿರಂಗಪಡಿಸಿಲ್ಲ. 'ವಿಕ್ರಾಂತ್ ರೋಣ' ಚಿತ್ರಕ್ಕೆ ಸುದೀಪ್‌ ಅವರೇ ಕನ್ನಡದ ಜೊತೆಗೆ, ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್‌ನ ಡಬ್ಬಿಂಗ್‌ ಮಾಡಿ ಮುಗಿಸಿದ್ದಾರೆ. ಚಿತ್ರದಲ್ಲಿ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಒಂದು ಹಾಡು, ಕೆಲ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗಡಂಗ್ ರಕ್ಕಮ್ಮ ಎಂಬ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video