Bahukrita Vesham: ಡಿಲೇರಿಯಂ ಫೋಬಿಯಾ ಕಥೆಯುಳ್ಳ ಚಿತ್ರದಲ್ಲಿ ವೈಷ್ಣವಿ ಗೌಡ!

ಬಿಗ್‌ಬಾಸ್‌ ಸ್ಪರ್ಧಿ ವೈಷ್ಣವಿ ಹಾಗೂ ಶಶಿಕಾಂತ್‌ ಜೋಡಿಯಾಗಿ ನಟಿಸಿರುವ 'ಬಹುಕೃತ ವೇಷಂ' ಚಿತ್ರ ಇಂದು ಬಿಡುಗಡೆಯಾಗಿದೆ. ವಿದೇಶಗಳಲ್ಲೂ ಈ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತಯಾರಿ ಮಾಡಿಕೊಂಡಿದೆ.

Share this Video
  • FB
  • Linkdin
  • Whatsapp

ಬಿಗ್‌ಬಾಸ್‌ ಸ್ಪರ್ಧಿ ವೈಷ್ಣವಿ ಗೌಡ (Vaishnavi Gowda) ಹಾಗೂ ಶಶಿಕಾಂತ್‌ (Shashikanth) ಜೋಡಿಯಾಗಿ ನಟಿಸಿರುವ 'ಬಹುಕೃತ ವೇಷಂ' (Bahukrita Vesham) ಚಿತ್ರ ಇಂದು ಬಿಡುಗಡೆಯಾಗಿದೆ. ವಿದೇಶಗಳಲ್ಲೂ ಈ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತಯಾರಿ ಮಾಡಿಕೊಂಡಿದೆ. ಇಡೀ ಕುಟುಂಬ ನೋಡುವಂತಹ ಈ ಚಿತ್ರವನ್ನು ರಾಜ್ಯದಲ್ಲಿ 70ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಯುಎಸ್‌ಎ ಸೇರಿದಂತೆ ಬೇರೆ ಬೇರೆ ಕಡೆ 25 ಕಡೆ ಸಿನಿಮಾ ಪ್ರದರ್ಶನವಾಗುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Salaga ಟೀಮ್ ಜೊತೆ ಮತ್ತೊಂದು ಚಿತ್ರ ಮಾಡಲು ತಯಾರಾದ ದುನಿಯಾ ವಿಜಯ್‌!

ಮಧ್ಯಮ ವರ್ಗದ ಒಳ್ಳೆಯ ಕುಟುಂಬದ ಹುಡುಗಿಯೊಬ್ಬಳ ಜೀವನದಲ್ಲಿ ಬರುವ ಕೆಲವು ತಿರುವುಗಳು, ಕೆಲ ಘಟನೆಗಳು ಆಕೆಯನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತದೆ ಅನ್ನೋದೆ ಸಿನಿಮಾದ ಕಥೆಯ ಒಂದು ಎಳೆ. ಇಡೀ ಸಿನಿಮಾ ಹುಡುಗಿಯೊಬ್ಬಳ ಸುತ್ತ ಟ್ರಾವೆಲ್‌ ಆಗುತ್ತದೆ. 'ಕನ್ನಡದ ಮಟ್ಟಿಗೆ ಇದು ಹೊಸ ರೀತಿಯ ಸಿನಿಮಾ. ಜೀವನಕ್ಕಾಗಿ ಹತ್ತಾರು ವೇಷಗಳನ್ನು ಹಾಕುತ್ತೇವೆ. ಅಂಥ ವೇಷಗಳ ಸುತ್ತ ಇಡೀ ಕತೆ ಸಾಗುತ್ತದೆ. ಹೀಗಾಗಿ ಚಿತ್ರಕ್ಕೆ ಉದರ ನಿಮಿತ್ತಂ ಬಹುಕೃತ ವೇಷಂ ಎನ್ನುವ ಸಬ್‌ ಟೈಟಲ್‌ ಇಟ್ಟುಕೊಂಡಿದ್ದೇವೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ' ಎಂದು ನಿರ್ದೇಶಕ ಪ್ರಶಾಂತ್‌ ಕೆ ಯರಂಪಳ್ಳಿ (Prashantha K Yallampalli) ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video