Salaga ಟೀಮ್ ಜೊತೆ ಮತ್ತೊಂದು ಚಿತ್ರ ಮಾಡಲು ತಯಾರಾದ ದುನಿಯಾ ವಿಜಯ್‌!

'ಸಲಗ' ಚಿತ್ರದ ಯಶಸ್ಸಿನ ನಂತರ ದುನಿಯಾ ವಿಜಯ್‌ ಸ್ಯಾಂಡಲ್‌ವುಡ್‌ನಲ್ಲಿ ಮುಂದೇನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಹೌದು! 'ಸಲಗ'ದ ನಂತರ ದುನಿಯಾ ವಿಜಯ್‌ ಅವರ ಮುಂದಿನ ಚಿತ್ರ ಯಾವುದು, ಮತ್ತೆ ನಿರ್ದೇಶನ ಮಾಡುತ್ತಾರಾ.

Share this Video
  • FB
  • Linkdin
  • Whatsapp

'ಸಲಗ' (Salaga) ಚಿತ್ರದ ಯಶಸ್ಸಿನ ನಂತರ ದುನಿಯಾ ವಿಜಯ್‌ (Duniya Vijay) ಸ್ಯಾಂಡಲ್‌ವುಡ್‌ನಲ್ಲಿ ಮುಂದೇನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಹೌದು! 'ಸಲಗ'ದ ನಂತರ ದುನಿಯಾ ವಿಜಯ್‌ ಅವರ ಮುಂದಿನ ಚಿತ್ರ ಯಾವುದು, ಮತ್ತೆ ನಿರ್ದೇಶನ ಮಾಡುತ್ತಾರಾ ಅಥವಾ ಬೇರೆ ನಿರ್ದೇಶಕರ ಜತೆ ಕೆಲಸ ಮಾಡುತ್ತಾರಾ ಮಾಡಿದರೂ ಆ ಚಿತ್ರಕ್ಕೆ ಬಂಡವಾಳ ಹೂಡುವವರ್ಯಾರು ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಅದಕ್ಕೀಗ ಉತ್ತರ ಕೊಡುವಂತಹ ಸಿನಿಮಾ ಮಾಡಲು ದುನಿಯಾ ವಿಜಯ್‌ ಹೊರಟಿದ್ದಾರೆ. 

Salaga Movie: ಸಕ್ಸಸ್​ ಮೀಟ್​ನಲ್ಲಿ ಭಾವುಕರಾದ ದುನಿಯಾ ವಿಜಯ್!

ಅವರದೇ ಬ್ಯಾನರ್‌ನಲ್ಲಿ ದುನಿಯಾ ವಿಜಯ್‌ ಚಿತ್ರವನ್ನು ಮಾಡಲು ಸಜ್ಜಾಗಿದ್ದು, ಮೂಲಗಳ ಪ್ರಕಾರ ಬಹುತೇಕ 'ಸಲಗ' ಚಿತ್ರದ ಟೀಮ್ ಸೇರಿಕೊಂಡು ಈ ಚಿತ್ರವನ್ನು ಮಾಡುತ್ತಿದ್ದಾರಂತೆ. ಇನ್ನು ದುನಿಯಾ ವಿಜಯ್ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವೀ ಮೇಕರ್ಸ್‌ನಲ್ಲಿ ತಯಾರಾಗುತ್ತಿರುವ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ನಂದಮೂರಿ ಬಾಲಕೃಷ್ಣ (Nandamuri Balakrishna) ಎದುರಿಗೆ ದುನಿಯಾ ವಿಜಯ್ ವಿಲನ್ ಆಗಿ ಅಬ್ಬರಿಸಲಿದ್ದಾರೆ. ಖ್ಯಾತ ನಿರ್ದೇಶಕ ಗೋಪಿಚಂದ್​ ಮಲಿನೇನಿ (Gopichand Malineni) ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದು, ನಾಯಕಿಯಾಗಿ ಶ್ರುತಿ ಹಾಸನ್​ ಕಾಣಿಸಿಕೊಳ್ಳುತ್ತಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video