Asianet Suvarna News Asianet Suvarna News

ಬಡ್ನಿ ಹೈದ ಹನುಮಂತನಿಗೆ ಲವ್ ಪ್ರಪೋಸ್ ಮಾಡಿದ ನಿಶ್ವಿಕಾ

ಸರಿಗಮಪ ಖ್ಯಾತಿಯ ಕುರಿಗಾಹಿ ಹನುಮಂತು ಇಮೇಜ್ ಈಗ ಡಬಲ್ ಆಗಿದೆ. ಸ್ಟಾರ್ ಹೀರೋಯಿನ್ಗಳೇ ಈ ಬಡ್ನಿಹೈದನಿಗೆ ಪ್ರೇಮ ನಿವೇದನೆ ಮಾಡುತ್ತಿದ್ದಾರೆ.

Sep 20, 2022, 4:12 PM IST

ಸರಿಗಮಪ ಖ್ಯಾತಿಯ ಕುರಿಗಾಹಿ ಹನುಮಂತು ಇಮೇಜ್ ಈಗ ಡಬಲ್ ಆಗಿದೆ. ಸ್ಟಾರ್ ಹೀರೋಯಿನ್ಗಳೇ ಈ ಬಡ್ನಿಹೈದನಿಗೆ ಪ್ರೇಮ ನಿವೇಧನೆ ಮಾಡುತ್ತಿದ್ದಾರೆ. ಇಷ್ಟು ದಿನ ಹನುಮಂತುಗೆ ಮದುವೆ ಯಾವಾಗ ಅಂತ ಕೇಳುತ್ತಿದ್ರು. ಇದೀಗ ಹನುಮಂತು ಮದುವೆ ಆಗೋ ದಿನ ಹತ್ತಿರ ಆದಂತಿದೆ. ಯಾಕಂದ್ರೆ ಸ್ಯಾಂಡಲ್ವುಡ್ ನಟಿ ನಿಶ್ವಿಕಾ ನಾಯ್ಡು ಹನುಮಂತು ಗಾನಸುಧೆಗೆ ಮನಸೋತು ಲವ್ ಪ್ರಪೋಸ್ ಮಾಡಿದ್ದಾರೆ. ಹಾಗಂತ ಇದು ರೀಯಲ್ ಅಲ್ಲ.. ಖಾಸಗಿ ವಾಹಿನಿಯಲ್ಲಿ ಬರೋ ಸೂಪರ್ ಜೋಡಿ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ನಿಶ್ವಿಕಾ ನಾಯ್ಡು ಹೋಗಿದ್ರು. ಅದೇ ವೇದಿಕೆಯಲ್ಲಿ ಹನುಮಂತು ಕೂಡ ರಾಕಿಭಾಯ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ರು. ಆಗ  ನಿರೂಪಕಿ ಶ್ವೇತಾ ಚಂಗಪ್ಪ ಗೆಸ್ಟ್ ಚೇರ್ ಮೇಲೆ ಕೂತಿದ್ದ ನಿಶ್ವಿಕಾನ ತೋರಿಸುತ್ತಾ, ಇಂತಹ ಸುಂದರ  ಹುಡುಗಿ ಕಂಡರೆ ಏನನಿಸುತ್ತದೆ ಎಂದು ಕೇಳಿದರು. ಆಗ ನಿಶ್ವಿಕಾ ಹಾರ್ಟ್ ಸಿಂಬಲ್ ತೋರಿಸುತ್ತಾ, ಪ್ರಪೋಸ್ ಮಾಡಿದ್ದಾರೆ. ಅಷ್ಟೆ ಅಲ್ಲ ನನಗಾಗಿ ಒಂದು ರೋಮ್ಯಾಂಟಿಕ್ ಸಾಂಗ್ ಹಾಡು ಎಂದಿದ್ದಾರೆ. ಆದ್ರೆ ಅದಕ್ಕೆ ಹನುಮಂತು ಭಜನಿ ಪದ ಹಾಡುತ್ತೇನೆ ಅಕ್ಕಾ ಎಂದು ಕರೆದಿದ್ದಾರೆ. ಈ ಸನ್ನಿವೇಷ ನೋಡಿ ಅಲ್ಲಿದ್ದವರೆಲ್ಲಾ ಬಿದ್ದು ಬಿದ್ದು ನಕ್ಕ ಘಟನೆ ನಡೆದಿದೆ.