Asianet Suvarna News Asianet Suvarna News

'ಗುಂಟೂರು ಖಾರಂ' ಅಬ್ಬರಕ್ಕೆ ಹಳೇ ರೆಕಾರ್ಡ್‌ಉಡೀಸ್.!: ಮಹೇಶ್ ಬಾಬು ದರ್ಬಾರ್‌ಗೆ ಟಾಲಿವುಡ್ ಫುಲ್ ಸ್ಟನ್..!

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಟನೆಯ ಗುಂಟೂರು ಖಾರಂ ಸಿನಿಮಾದ ಗ್ಲಿಮ್ಸ್ ಬಿಗೆಸ್ಟ್ ರೆಕಾರ್ಡ್ ಮಾಡಿದೆ. 

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತೆ ಟ್ರ್ಯಾಕ್‌ಗೆ ಬಂದಿದ್ದಾರೆ. ಸರ್ಕಾರು ವಾರಿ ಪಾಟ ಸಿನಿಮಾದಿಂದ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ್ದ ಮಹೇಶ್ ಬಾಬು ನೆಕ್ಟ್ಸ್ ಪ್ರಾಜೆಕ್ಟ್ ಗುಂಟೂರು ಖಾರಂನಲ್ಲಿ ದರ್ಬಾರ್ ಮಾಡ್ತಾರೆ ಅಂತ ಪ್ರಿನ್ಸ್ ಫ್ಯಾನ್ಸ್ ಊಹಿಸಿದ್ರು. ಅದು ಈಗ ನಿಜ ಆಗಿದೆ. ಮಹೇಶ್ ಬಾಬು ನಟನೆಯ ಗುಂಟೂರು ಖಾರಂ ಸಿನಿಮಾದ ಟೈಟಲ್ ಅನೌನ್ಸ್ನ ಸಣ್ಣದೊಂದು ಗ್ಲಿಮ್ಸ್ ರಿಲೀಸ್ ಆಗಿತ್ತು. ಇದೀಗ ಆ ಗ್ಲಿಮ್ಸ್ ಬಿಗೆಸ್ಟ್ ರೆಕಾರ್ಡ್ ಮಾಡಿದೆ. ಬಿಡುಗಡೆ ಆಗಿ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ತೆಲುಗು ಸಿನಿಮಾದ ಗ್ಲಿಂಪ್ಸ್ ಎಂಬ ದಾಖಲೆ ಬರೆದಿದೆ ಗುಂಟೂರು ಖಾರಂನ ಈ ಗ್ಲಿಮ್ಸ್. ಗ್ಲಿಮ್ಸ್ನಲ್ಲಿ ಮಹೇಶ್ ಬಾಬು ಗುಂಟೂರು ಖಾರಂ ರೆಕಾರ್ಡ್ ನೋಡಿ ಟಾಲಿವುಡ್ ಮಂದಿ ಸ್ಟನ್ ಆಗಿದ್ದಾರೆ. 

ಇದನ್ನೂ ವೀಕ್ಷಿಸಿ: ಡಾರ್ಲಿಂಗ್ ಪ್ರಭಾಸ್ ಫ್ಯಾನ್ಸ್‌ಗೆ ಮತ್ತೊಂದು ಸರ್ಪ್ರೈಸ್: ನಿಮ್ಮ ಮುಂದೆ ಬರಲಿದೆ ಆದಿಪುರುಷ್ ಆಕ್ಷನ್ ಟ್ರೈಲರ್..!