Asianet Suvarna News Asianet Suvarna News

'ತ್ರಿಬಲ್ ರೈಡಿಂಗ್' ಹಾಡಿನ ಮೇಕಿಂಗ್ ರಿಲೀಸ್: ಮೂವರು ನಾರಿಯರ ಜೊತೆ ಗಣಿ ಸ್ಟೆಪ್

ತ್ರಿಬಲ್ ರೈಡಿಂಗ್ ಸಿನಿಮಾ ಮ್ಯೂಸಿಕ್'ನಿಂದಲೇ ಸದ್ದು ಮಾಡುತ್ತಿದ್ದು, ಚಿತ್ರದ ಹಾಡಿನ ಮೇಕಿಂಗ್ ರಿಲೀಸ್ ಆಗಿದೆ.
 

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾದ ಹಾಡುಗಳೇ ಈಗ ಟ್ರೆಂಡಿಂಗ್'ನಲ್ಲಿವೆ. ಸಿನಿಮಾದ ಎಟ್ಟ ಎಟ್ಟ ಸಾಂಗ್ ಗಣಿ ಅಭಿಮಾನಿಗಳ ಹೃದಯ ಗೆದ್ದಿದ್ದು, ಇದೀಗ ಎಟ್ಟ ಎಟ್ಟ ಹಾಡಿನ ಮೇಕಿಂಗ್ ರಿಲೀಸ್ ಆಗಿದೆ. ಗಣೇಶ್ ನಟನೆ ಮಾತ್ರವಲ್ಲ, ಬೆಸ್ಟ್ ಡಾನ್ಸರ್ ಕೂಡ ಹೌದು. ಅದರಲ್ಲೂ ತ್ರಿಬಲ್ ರೈಡಿಂಗ್ ಸಿನಿಮಾ ಮೂರು ಜನ ಹುಡುಗಿರು ಒಬ್ಬ ಹುಡುಗನ ಕಥೆಯಿರುವ ಸಿನಿಮಾ. ಇಲ್ಲಿ ಗಣಿಗೆ ಜೋಡಿಯಾಗಿ ಮೇಘಾ ಶೆಟ್ಟಿ, ಅಧಿತಿ ಪ್ರಭುದೇವ, ರಚನಾ ಇಂದನ್ ನಟಿಸಿದ್ದಾರೆ. ಈ ನಾಲ್ಕು ಜನರನ್ನು ಒಂದೇ ಹಾಡಿನಲ್ಲಿ ಸೆರೆ ಹಿಡಿಯಲಾಗಿದೆ. ಮುರುಳಿ ಮಾಸ್ಟರ್ ಕೋರಿಯೋಗ್ರಫಿಯಲ್ಲಿ ತ್ರಿಬಲ್ ರೈಡಿಂಗ್ ಸ್ಟಾರ್ಸ್, ಮಸ್ತ್ ಡಾನ್ಸ್ ಮಾಡಿದ್ದಾರೆ. ಇವರ ಡಾನ್ಸ್ ಧಮಾಕವನ್ನು ಜೈ ಆನಂದ್ ಕ್ಯಾಮೆರಾದಲ್ಲಿ ಚಿತ್ರಿಸಿದ್ದಾರೆ. 

ಲಿಪ್‌ಕಿಸ್ ಮಾಡಿ ಮಗಳ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಐಶ್ವರ್ಯಾ ರೈ; ನೆಟ್ಟಿಗರ ಟ್ರೋಲ್

Video Top Stories