ಲಿಪ್‌ಕಿಸ್ ಮಾಡಿ ಮಗಳ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಐಶ್ವರ್ಯಾ ರೈ; ನೆಟ್ಟಿಗರ ಟ್ರೋಲ್

ಬಾಲಿವುಡ್ ಸ್ಟಾರ್ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಮತ್ತು ನಟ ಅಭಿಷೇಕ್ ಬಚ್ಚನ್ ಏಕೈಕ ಪುತ್ರಿ ಆರಾಧ್ಯಾ ಬಚ್ಚನ್‌ಗೆ ಇಂದು (ನವೆಂಬರ್ 11) ಹುಟ್ಟುಹಬ್ಬದ ಸಂಭ್ರಮ.

Aishwarya Rai kisses her daughter Aaradhya Bachchan on 11th birthday and photo viral sgk

ಬಾಲಿವುಡ್ ಸ್ಟಾರ್ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಮತ್ತು ನಟ ಅಭಿಷೇಕ್ ಬಚ್ಚನ್ ಏಕೈಕ ಪುತ್ರಿ ಆರಾಧ್ಯಾ ಬಚ್ಚನ್‌ಗೆ ಇಂದು (ನವೆಂಬರ್ 11) ಹುಟ್ಟುಹಬ್ಬದ ಸಂಭ್ರಮ. 11ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಆರಾಧ್ಯಾಳಿಗೆ ಅಮ್ಮ ಐಶ್ವರ್ಯಾ ರೈ ಪ್ರೀತಿಯ ಸಿಹಿ ಮುತ್ತು ನೀಡಿ ಶುಭಕೋರಿದ್ದಾರೆ. ಮಗಳಿಗೆ ಲಿಪ್‌ಕಿಸ್ ಮಾಡಿರುವ ಐಶ್ವರ್ಯಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಶ್ವರ್ಯಾ ಮಗಳಿಗೆ ಕಿಸ್ ಮಾಡಿರುವುದಕ್ಕೆ ಕೆಲವರು ತಕರಾರು ಮಾಡಿದ್ದಾರೆ. ಇನ್ನು ಕೆಲವರು ವಿಶ್ ಮಾಡಿ ಬೆಸ್ಟ್ ತಾಯಿ-ಮಗಳು ಎನ್ನುತ್ತಿದ್ದಾರೆ. 

ಅಂದಹಾಗೆ ಐಶ್ವರ್ಯಾ ರೈ ಮಗಳು ಆರಾಧ್ಯಳಿಗೆ ಮುತ್ತು ನೀಡುತ್ತಿರುವ ಫೋಟೋ ಶೇರ್ 'ನನ್ನ ಪ್ರೀತಿ, ನನ್ನ ಜೀವ, ತುಂಬಾ ಪ್ರೀತಿಸುತ್ತೀನಿ, ನನ್ನ ಆರಾಧ್ಯ' ಎಂದು ಬರೆದುಕೊಂಡಿದ್ದಾರೆ. ತಾಯಿ-ಮಗಳ ಮುದ್ದಾದ ಫೋಟೋಗೆ ಅಭಿಮಾನಿಗಳು ಲೈಕ್ಸ್ ಮತ್ತು ಹಾರ್ಟ್ ಇಮೋಜಿ ಹಾಕಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಅತಿಯಾಯಿತು, ತುಟಿಗೆ ಕಿಸ್ ಮಾಡುವುದು ಸರಿಯಲ್ಲ ಎಂದು ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. 

ಅನೇಕರು 'ಹುಟ್ಟುಹಬ್ಬ ಶುಭಾಶಯಗಳು ಮಿನಿ ಐಶ್' ಎಂದು ಹೇಳಿದ್ದಾರೆ. ಮತ್ತೋರ್ವ ಆಭಿಮಾನಿ ಕಾಮೆಂಟ್ ಮಾಡಿ ಸುಂದರವಾದ ಕ್ಷಣವನ್ನು ಕ್ಯಾಪ್ಚರ್ ಮಾಡಲಾಗಿದೆ ಎಂದು ಹೇಳಿದ್ದಾರೆ. ತಾಯಿ-ಮಗಳ ಅದ್ಭುತವಾದ ಫೋಟೋ ಎಂದು ಮತ್ತೋರ್ವ ಕಾಮೆಂಟ್ ಮಾಡಿ ಪ್ರೀತಿ ವ್ಯಕ್ತಪಡಿಸಿದ್ದಾರೆ. 

ಅವಳೇನೂ ಅಂಬೆಗಾಲಿಡುವ ಮಗುನಾ? ಮಗಳ ಕೈ ಹಿಡಿದು ಓಡಾಡುವ ಐಶ್ವರ್ಯಾ ರೈ ಸಖತ್ ಟ್ರೋಲ್

ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ಮದುವೆಯಾಗಿ 15 ವರ್ಷಗಳು ಕಳೆಯಿತು. ಏಪ್ರಿಲ್ 20, 2007ರಲ್ಲಿ ಐಶ್ವರ್ಯಾ ರೈ ಹಸೆಮಣೆ ಏರಿದರು. ಮುಂಬೈನ ಅಮಿತಾಭ್ ಬಚ್ಚನ್ ಅವರ ಪ್ರತೀಕ್ಷ ಬಂಗಲೆಯಲ್ಲಿ ಇಬ್ಬರು ಮದುವೆ ನೆರವೇರಿತ್ತು. ಅದ್ದೂರಿಯಾಗಿ ನಡೆದ ಮದುವೆ ಸಮಾರಂಭದಲ್ಲಿ ಸಿನಿಮಾರಂಗದ ಗಣ್ಯರು ಮತ್ತು ಆಪ್ತರು ಭಾಗಿಯಾಗಿದ್ದರು. ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಐಶ್ವರ್ಯಾ ಮಗಳಿಗೆ ಜನ್ಮ ನೀಡಿದರು. 2011 ನವೆಂಬರ್ 16ರಂದು ಆರಾಧ್ಯ ಜನಿಸಿದರು. ಇದೀಗ 11ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 

ಆರಾಧ್ಯಾ ಸದಾ ತಾಯಿಯ ಜೊತೆಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ವಿದೇಶಿ ಪ್ರವಾಸ ಅಥವಾ ಯಾವುದೇ ಈವೆಂಟ್‌ನಲ್ಲೂ ಐಶ್ವರ್ಯಾ ಮಗಳ ಜೊತೆಯೇ ಇರುತ್ತಾರೆ. ಸದಾ ಜೊತೆಯಲ್ಲೇ ಕೈ ಹಿಡಿದು ಓಡಾಡುವ ಐಶ್ವರ್ಯಾ ಆಗಾಗ ಟ್ರೋಲಿಗರ ಬಾಯಿಗೂ ಆಹಾರವಾಗುತ್ತಾರೆ. ಆದರೂ ಐಶ್ ಯಾವುದೇ ಟ್ರೋಲ್‌ಗಲಿಗೂ ತಲೆಕೆಡಿಸಿಕೊಳ್ಳುವುದಿಲ್ಲ. ಮಗಳನ್ನು ಸದಾ ಜೊತೆಯಲ್ಲೇ ಕರೆದುಕೊಂಡು ಓಡಾಡುತ್ತಾರೆ. ಇತ್ತೀಚಿಗಷ್ಟೆ ಐಶ್ವರ್ಯಾ ರೈ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮಗಳ ಜೊತೆ ಭೇಟಿ ನೀಡಿದ್ದ ಐಶ್ವರ್ಯಾ ಫೋಟೋಗಳು ವೈರಲ್ ಆಗಿತ್ತು.

ಪಾರ್ಟಿಯಲ್ಲಿ ಮಿಂಚಿದ ಐಶ್ವರ್ಯಾ, ರಜನಿಕಾಂತ್, ಖುಷ್ಬೂ; ಫೋಟೋ ವೈರಲ್

ಐಶ್ವರ್ಯಾ ರೈ ಅವರಿಗೆ ಈ ವರ್ಷ ತುಂಬಾ ವಿಶೇಷ. ಐಶ್ ನಟನೆಯ ಪೊನ್ನಿಯಿನ್ ಸೆಲ್ವನ್ ಸಿನಿಮಾ ರಿಲೀಸ್ ಆಗಿದ್ದು ಭರ್ಜರಿ ಕಲೆಕ್ಷನ್ ಮಾಡಿದೆ. ಮಣಿರತ್ನಂ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡಿದೆ. ಸದ್ಯ ಮೊದ  ಭಾಗ ರಿಲೀಸ್ ಆಗಿದೆ. ಎರಡನೇ ಭಾಗ ಬಿಡುಗಡೆಗೆ ತಯಾರಿ ನಡೆಯುತ್ತಿದೆ. ಅನೇಕ ವರ್ಷಗಳ ಬಳಿಕ ಐಶ್ವರ್ಯಾ ಈ ಸಿನಿಮಾ ಮೂಲಕ ತಮಿಳು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 

Latest Videos
Follow Us:
Download App:
  • android
  • ios