ಕ್ಲಾಸ್ ರೂಂನಲ್ಲಿ 'ಗೌರಿ’ ಮ್ಯೂಸಿಕಲ್ ಟೀಸರ್ ಬಿಡುಗಡೆ! ಕ್ರಿಕೆಟರ್ ಶ್ರೇಯಾಂಕರನ್ನ ನೋಡಿ ತ್ರಿಲ್ ಆದ ಸ್ಟುಡೆಂಟ್ಸ್!

ಗೌರಿ ಸಿನಿಮಾದ ಮ್ಯೂಸಿಕಲ್ ಟೀಸರ್ ಬಿಡುಗಡೆಯ ನಂತರ ಕ್ಲಾಸ್ ರೂಂನಲ್ಲಿಯೇ ಶ್ರೇಯಾಂಕ ಕ್ರಿಕೆಟ್ ಆಡಿದ್ರು. ಶ್ರೇಯಾಂಕ ವಿದ್ಯಾರ್ಥಿಗಳ ಬೌಲಿಂಗ್‍ಗೆ ಬ್ಯಾಟ್ ಬೀಸಿದ್ರು.

First Published May 26, 2024, 11:09 AM IST | Last Updated May 26, 2024, 11:10 AM IST

ಸಾಂಸ್ಕೃತಿಕ ನಗರಿ ಮೈಸೂರಿನ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಭ್ರಮವೋ ಸಂಭ್ರಮ. ಅಲ್ಲಿ ನೆರೆದಿದ್ದ ಜನರಲ್ಲಿ ಕುತೂಹಲ ಮನೆ ಮಾಡಿತ್ತು. ಯಾಕಂದ್ರೆ ಫಸ್ಟ್ ದಿ ಫಸ್ಟ್ ಟೈಂ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಆರ್‌ಸಿಬಿಯ ಪುಟ್ಟಿ ಶ್ರೇಯಾಂಕ ಪಟೇಲ್(Shreyanka Patil) ರಂಗು ತುಂಬಿತ್ತು. ಅದಕ್ಕೆ ಕಾರಣ ಇಂದ್ರಜಿಂತ್ ಲಂಕೇಶ್ ನಿರ್ದೇಶನದ ಗೌರಿ ಸಿನಿಮಾದ(Gauri Movie) ಮ್ಯೂಸಿಕಲ್ ಟೀಸರ್‌ನನ್ನ (Musical teaser)ಕಾಲೇಜಿನ ಕ್ಲಾಸ್ ರೂಂನಲ್ಲಿ ಬಿಡುಗಡೆ ಮಾಡಿದ್ದು. ಭಾರತದ ಸ್ಟಾರ್ ಕ್ರಿಕೆಟರ್, ಆರ್‌ಸಿಬಿಯ ಆಲ್‍ರೌಂಡರ್, ಕರ್ನಾಟಕದ ಹೆಮ್ಮೆಯ ಆಟಗಾರ್ತಿ ಶ್ರೇಯಾಂಕ ಪಾಟೀಲ್ 'ಐ ಲವ್ ಯೂ ಸಮಂತ’ ಮ್ಯೂಸಿಕಲ್ ಟೀಸರನ್ನ ಮಾಡಿದ್ದಾರೆ. ತೆರೆ ಮೇಲೆ ಟೀಸರ್ ಬರುತ್ತಿದ್ದಂತೆ ನೆರೆದಿದ್ದ ನೂರಾರು ವಿದ್ಯಾರ್ಥಿಗಳು ಕುಣದು ಕುಪ್ಪಳಿಸಿದ್ರು. ಕ್ಲಾಸ್ ರೂಂನಲ್ಲಿದ್ದ ಬೆಂಚ್ ಮೇಲೆ ಹತ್ತಿ ಶಿಳ್ಳೆ ಹೊಡೆದ್ರು. ಗೌರಿ ಸಿನಿಮಾದ ಟೈಂ ಬುರುತ್ತೆ ಟೈಂ ಬರುತ್ತೆ ಅನ್ನೋ ಹಾಡು ಈಗಾಗ್ಲೆ ಬಿಡುಗಡೆ ಆಗಿ ಟ್ರೆಂಡ್ ಆಗಿದೆ. ಹೀಗಾಗಿ ಕಾಲೇಜಿನಲ್ಲಿ ನಡೆದ ಗೌರಿ ಸಿನಿಮಾದ ಎರಡನೇ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ 'ಗೌರಿ’ ಚಿತ್ರದ ನಾಯಕ ಸಮರ್ಜಿತ್ ಲಂಕೇಶ್ ಜೊತೆ ಟೈಂ ಬರುತ್ತೆ.. ಟೈಂ ಬರುತ್ತೆ..’ ಹಾಡಿಗೆ ಶ್ರೇಯಾಂಕ ಪಾಟೀಲ್ ಹುಕ್ ಸ್ಟೆಪ್ ಹಾಕಿದ್ರು. 

ಇದನ್ನೂ ವೀಕ್ಷಿಸಿ:  ದುಬೈನಲ್ಲಿ ದರ್ಶನ್ ವಿಜಯಲಕ್ಷ್ಮಿ ವಿವಾಹ ವಾರ್ಷಿಕೋತ್ಸವ! ಪತ್ನಿಗೆ ಉಂಗುರ ಹಾಕಿ ಕೇಕ್ ತಿನ್ನಿಸಿದ ದರ್ಶನ್!

Video Top Stories