Asianet Suvarna News Asianet Suvarna News

ದುಬೈನಲ್ಲಿ ದರ್ಶನ್ ವಿಜಯಲಕ್ಷ್ಮಿ ವಿವಾಹ ವಾರ್ಷಿಕೋತ್ಸವ! ಪತ್ನಿಗೆ ಉಂಗುರ ಹಾಕಿ ಕೇಕ್ ತಿನ್ನಿಸಿದ ದರ್ಶನ್!

ನಟ ದರ್ಶನ್‌ ಮತ್ತು ಪತ್ನಿ ವಿಜಯಲಕ್ಷ್ಮಿ ದುಬೈನಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.
 

ನಟ ದರ್ಶನ್ ಗೃಹಸ್ತಾಶ್ರಮಕ್ಕೆ ಕಾಲಿಟ್ಟು 21 ವರ್ಷ ಆಗಿದೆ. 19-05-2003 ರಂದು ಬೆಳಗ್ಗೆ 9.10 ರಿಂದ 9.50 ರವರೆಗಿದ್ದ ಶುಭ ಮಿಥುನ ಲಗ್ನದಲ್ಲಿ ವಿಜಯಲಕ್ಷ್ಮೀ ಕೊರಳಿಗೆ ನಟ ದರ್ಶನ್(Darshan) ಮಾಂಗಲ್ಯಧಾರಣೆ ಮಾಡಿದ್ದರು. ಇವರ ಮದುವೆ ಧರ್ಮಸ್ಥಳದ ವಸಂತ್ ಮಹಲ್‌ನಲ್ಲಿ ನಡೆದಿತ್ತು. ಇದೀಗ ಈ ದಂಪತಿಗಳ ಬಾಂಧವ್ಯ 21ನೇ ವರ್ಷಕ್ಕೆ ಬಂದಿದೆ. ಈ ದಾಂಪತ್ಯ ಜೀವನದಲ್ಲಿ ಸುಖ ದಃಖವನ್ನ ಕಂಡಿರೋ ದರ್ಶನ್ ವಿಜಯಲಕ್ಷ್ಮಿ(Vijayalakshmi) ತಮ್ಮ ವಿವಾಹ ವಾರ್ಷಿಕೋತ್ಸವನ್ನ(wedding anniversary) ಆಚರಿಸಿಕೊಂಡಿದ್ದಾರೆ. ಆ ವಿಡಿಯೋವನ್ನ ನಟ ದರ್ಶನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚುತ್ತಿದ್ದಾರೆ. ಇತ್ತೀಚೆಗೆ ನಟ ದರ್ಶನ್ ಕಾರ್ಯಕ್ರಮ ಒಂದರಲ್ಲಿ ಇವತ್ತು ಇವಳಿರುತ್ತಾಳೆ ನಾಳೆ ಅವಳು ಇರುತ್ತಾರೆ ಅಂತ ಡೈಲಾಗ್ ಹೊಡೆದು ಪೇಚೆಗೆ ಸಿಲುಕಿದ್ರು, ದರ್ಶನ್ ವಿರುದ್ಧ ಮಹಿಳಾ ಸಂಘಟನೆಗಳು ದೂರು ನೀಡಿದ್ರು, ಆದ್ರೆ ಈಗ ದರ್ಶನ್ ತನ್ನ ಪತ್ನಿ ಜೊತೆ ವಿವಾದ ವಾರ್ಷಿಕೋತ್ಸವ ಮಾಡಿಕೊಂಡು ಆವತ್ತು ಇವತ್ತು ಮುಂದೆಯೂ ಇವಳೇ ಇರುತ್ತಾಳೆ ಅಂತ ತೋರಿಸಿದ್ದಾರೆ. ತನ್ನ ಫ್ಯಾಮಿಲಿ ಸಮೇತ ದುಬೈಗೆ ಹಾರಿದ್ದ ದರ್ಶನ್ ತನ್ನ ಪ್ರೀತಿಯ ಮಡದಿಗೆ ಉಂಗುರ ಹಾಕಿ ಕೇಕ್ ತಿನ್ನಿಸಿ ವೆಡ್ಡಿಂಗ್ ಆನಿವರ್ಸರಿ ಆಚರಿಸಿದ್ದಾರೆ. ದುಬೈನಲ್ಲಿ(Dubai) ನಟ ದರ್ಶನ್‌ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಈ ಹಿಂದೆ ಕೂಡ ಹಲವು ಬಾರಿ ದರ್ಶನ್ ದುಬೈಗೆ ಹೋಗಿ ಬಂದಿದ್ರು. ಈ ಭಾರಿ ಪತ್ನಿ ಸಮೇತ ದುಬೈಗೆ ಹೋಗಿದ್ದ ದರ್ಶನ್ಗೆ ಪ್ಯಾನ್ಸ್ ಸರ್ಪ್ರೈಸ್ ಕೊಟ್ಟಿದ್ದಾರೆ. 

ಇದನ್ನೂ ವೀಕ್ಷಿಸಿ:  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫ್ಯಾನ್ಸ್‌ಗೆ ಗುಡ್ ನ್ಯೂಸ್! ಫಿಕ್ಸ್ ಆಯ್ತು ಮಾರ್ಟಿನ್ ಸಿನಿಮಾ ರಿಲೀಸ್ ಡೇಟ್..!

Video Top Stories