Man Of The Match ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ಡಿ ಸತ್ಯ ಪ್ರಕಾಶ್‌!

ಪುನೀತ್‌ ರಾಜ್‌ಕುಮಾರ್‌ ಅವರ ಪಿಆರ್‌ಕೆ ಪ್ರೊಡಕ್ಷನ್ಸ್‌ ನಿರ್ಮಾಣದ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಡಿ ಸತ್ಯ ಪ್ರಕಾಶ್‌ ಸಾರಥ್ಯದಲ್ಲಿ ಮೂಡಿಬಂದಿರುವ ವಿಡಂಬನೆ ಲಘು ಹಾಸ್ಯದ ಸಿನಿಮಾ ಮ್ಯಾನ್ ಆಫ್ ದಿ ಮ್ಯಾಚ್ ಇಂದು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ. 

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ ಪಿಆರ್‌ಕೆ (PRK) ಪ್ರೊಡಕ್ಷನ್ಸ್‌ ನಿರ್ಮಾಣದ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಡಿ ಸತ್ಯ ಪ್ರಕಾಶ್‌ ಸಾರಥ್ಯದಲ್ಲಿ ಮೂಡಿಬಂದಿರುವ ವಿಡಂಬನೆ ಲಘು ಹಾಸ್ಯದ ಸಿನಿಮಾ ಮ್ಯಾನ್ ಆಫ್ ದಿ ಮ್ಯಾಚ್ (Man Of The Match) ಇಂದು ಅಮೆಜಾನ್‌ ಪ್ರೈಮ್‌ನಲ್ಲಿ (Amazon Prime) ಬಿಡುಗಡೆಯಾಗಿದೆ. ನಟರಾಜ್‌ ಎಸ್‌ ಭಟ್‌ (Nataraj S Bhat), ಧರ್ಮಣ್ಣ ಕಡೂರು, ವೀಣಾ ಸುಂದರ್‌, ಅಥರ್ವ ಪ್ರಕಾಶ್ ಮತ್ತು ವಾಸುಕಿ ವೈಭವ್ ಸೇರಿದಂತೆ ಅನೇಕರು ಮುಖ್ಯ ಮಾತ್ರದಲ್ಲಿ ನಟಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಮಾರ್ಟಿನ್' ರಿಲೀಸ್ ಡೇಟ್ ಫಿಕ್ಸ್

'ಮ್ಯಾನ್‌ ಆಫ್‌ ದಿ ಮ್ಯಾಚ್ ಎಂಬುದು ನನ್ನ ಹೃದಯಕ್ಕೆ ಹತ್ತಿರವಾದ ಸಿನಿಮಾ ಮತ್ತು ಅದು ಎಂದಿಗೂ ನನ್ನ ಹೃದಯಕ್ಕೆ ಸೀಮಿತವಾಗಿಯೇ ಇರುತ್ತದೆ. ನಾನು ಒಂದು ದಿನ ಪುನೀತ್‌ ಸರ್ ಜೊತೆಗೆ ಮಾತನಾಡುತ್ತಿದ್ದೆ. ಆಗ ಒಂದು ದಿನ ಮೊದಲ ಲಾಕ್‌ಡೌನ್‌ ವೇಳೆ, 'ಮ್ಯಾನ್ ಆಫ್ ದಿ ಮ್ಯಾಚ್' ಕಥೆಯನ್ನು ನಾನು ಹಂಚಿಕೊಂಡೆ. ಅವರಿಗೆ ತಕ್ಷಣ ಇಷ್ಟವಾಯಿತು. ಇದು ಒಂದು ಉತ್ತಮ ಐಡಿಯಾ ಎಂದು ಅವರು ಹೇಳಿದರು. ಅದೇ ಸಮಯದಲ್ಲಿ, ಇದನ್ನು ಜಾರಿಗೆ ತರುವುದು ಕಷ್ಟ. ಆದರೆ, ಇಂಥ ಹೊಸ ಹೆಜ್ಜೆಗಳನ್ನು ನಾವು ಇಡಬೇಕು ಮತ್ತು ಹೊಸ ತಲೆಮಾರಿನ ಸಿನಿಮಾ ನಿರ್ಮಾಣ ಮಾಡಬೇಕು ಎಂದು ಅವರು ಇದನ್ನು ಬೆಂಬಲಿಸಲು ಒಪ್ಪಿದರು' ಎಂದು ನಿರ್ದೇಶಕ ಡಿ ಸತ್ಯ ಪ್ರಕಾಶ್ ಹೇಳಿದರು. ಜೊತೆಗೆ ಧರ್ಮಣ್ಣ ಕಡೂರು ಸಹ ಚಿತ್ರದ ಬಗ್ಗೆ ಮಾತನಾಡಿದರು.

Related Video