
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಮಾರ್ಟಿನ್' ರಿಲೀಸ್ ಡೇಟ್ ಫಿಕ್ಸ್
ಬಹದ್ದೂರ್ ಗಂಡು ಧ್ರುವ ಸರ್ಜಾ ಬರ್ತಿದ್ದಾರೆ ಅಂದ್ರೆ ಭರ್ಜರಿ ಸೌಂಡು ಇರುತ್ತೆ. ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿರುತ್ತೆ. ಆಕ್ಷನ್ ಪ್ರಿನ್ಸ್ ಅಬ್ಬರಕ್ಕೆ ಡೇಟ್ ಫಿಕ್ಸ್ ಆಗಿದ್ದು, ಧ್ರುವ ಅಭಿಮಾನಿಗಳು ಮಾರ್ಟಿನ್ ಹಬ್ಬ ಮಾಡೋದಕ್ಕೆ ರೆಡಿಯಾಗಿದ್ದಾರೆ.
ಬಹದ್ದೂರ್ ಗಂಡು ಧ್ರುವ ಸರ್ಜಾ ಬರ್ತಿದ್ದಾರೆ ಅಂದ್ರೆ ಭರ್ಜರಿ ಸೌಂಡು ಇರುತ್ತೆ. ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿರುತ್ತೆ. ಈ ಹಿಂದೆ ಕರಾಬು ಪೊಗರು ಮೂಲಕ ಮಾಸ್ ಹೈದರ ಹೃದಕ್ಕೆ ಲಗ್ಗೆ ಇಟ್ಟಿದ್ದ ಅದ್ಧೂರಿ ಹುಡುಗ ಈಗ ಮಾರ್ಟಿನ್ ಆಗಿ ದಾಂಗುಡಿ ಇಡೋದಕ್ಕೆ ಸಜ್ಜಾಗಿದ್ದಾರೆ. ಆಕ್ಷನ್ ಪ್ರಿನ್ಸ್ ಅಬ್ಬರಕ್ಕೆ ಡೇಟ್ ಫಿಕ್ಸ್ ಆಗಿದ್ದು, ಧ್ರುವ ಅಭಿಮಾನಿಗಳು ಮಾರ್ಟಿನ್ ಹಬ್ಬ ಮಾಡೋದಕ್ಕೆ ರೆಡಿಯಾಗಿದ್ದಾರೆ. ಮಾರ್ಟಿನ್ ನಿರ್ಮಾಪಕ ಉದಯ್ ಕೆ ಮೆಹ್ತ ಮಾರ್ಟಿನ್ ಮೂವಿಯನ್ನ ಸೆಪ್ಟೆಂಬರ್ 30ಕ್ಕೆ ತೆರೆ ಮೇಲೆ ತರೋದಕ್ಕೆ ಪ್ಲಾನ್ ಮಾಡಿದ್ದೇವೆ ಅಂತ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಎಕ್ಸ್ ಕ್ಲ್ಯೂಸೀವ್ ಆಗಿ ಮಾಹಿತಿ ನೀಡಿದ್ದಾರೆ.