ಅಪ್ಪು ಕಂಚಿನ ಪ್ರತಿಮೆ ಮೆರವಣಿಗೆ ಮಾಡಿ ಕುಣಿದು ಕುಪ್ಪಳಿಸಿದ ಅಭಿಮಾನಿಗಳು; ವಿಡಿಯೋ ವೈರಲ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಹೊಂದಿ ಒಂದು ವರ್ಷವೇ ಆಗುತ್ತಾ ಬಂತು. ಇನ್ನೇನು ಮೂರು ತಿಂಗಳು ಕಳೆದರೆ ವರ್ಷ ಭರ್ತಿಯಾಗುತ್ತೆ. ಆದರೆ ಅಭಿಮಾನಿಗಳ ಅಭಿಮಾನದ ಹೊಳೆ ಇನ್ನು ಕಡಿಮೆಯಾಗಿಲ್ಲ. ಇದಕ್ಕೆ ಮತ್ತೊಂದದು ಉದಾಹಾರಣೆ ಎಂದರೆ ಕೊಪ್ಪಳದ ಈ ದೃಶ್ಯ.ಅಪ್ಪು ಕಂಚಿನ ಪ್ರತಿಮೆ ಮೆರವಣಿಗೆ ಮಾಡಿದ ಅಭಿಮಾನಿಗಳು.ಕೊಪ್ಪಳ ಜಿಲ್ಲೆ ಯಲಬುರ್ಗಾ ಪಟ್ಟಣದಲ್ಲಿ ಅಪ್ಪು ಕಂಚಿನ ಪ್ರತಿಮೆಯನ್ನು ಅಭಿಮಾನಿಗಳು ಮೆರವಣಿಗೆ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಹೊಂದಿ ಒಂದು ವರ್ಷವೇ ಆಗುತ್ತಾ ಬಂತು. ಇನ್ನೇನು ಮೂರು ತಿಂಗಳು ಕಳೆದರೆ ವರ್ಷ ಭರ್ತಿಯಾಗುತ್ತೆ. ಆದರೆ ಅಭಿಮಾನಿಗಳ ಅಭಿಮಾನದ ಹೊಳೆ ಇನ್ನು ಕಡಿಮೆಯಾಗಿಲ್ಲ. ಇದಕ್ಕೆ ಮತ್ತೊಂದದು ಉದಾಹಾರಣೆ ಎಂದರೆ ಕೊಪ್ಪಳದ ಈ ದೃಶ್ಯ.ಅಪ್ಪು ಕಂಚಿನ ಪ್ರತಿಮೆ ಮೆರವಣಿಗೆ ಮಾಡಿದ ಅಭಿಮಾನಿಗಳು.ಕೊಪ್ಪಳ ಜಿಲ್ಲೆ ಯಲಬುರ್ಗಾ ಪಟ್ಟಣದಲ್ಲಿ ಅಪ್ಪು ಕಂಚಿನ ಪ್ರತಿಮೆಯನ್ನು ಅಭಿಮಾನಿಗಳು ಮೆರವಣಿಗೆ ಮಾಡಿದ್ದಾರೆ. ಯಲಬುರ್ಗಾ ಪಟ್ಟಣದಲ್ಲಿ ಮೂರು ಅಡಿ ಕಂಚಿನ ಪ್ರತಿಮೆಯನ್ನು ಅಭಿಮಾನಿಗಳು ಸ್ಥಾಪನೆ ಮಾಡಿದ್ದಾರೆ.ಅಪ್ಪು ಕಂಚಿನ ಪ್ರತಿಮೆಯನ್ನ ಪಟ್ಟಣದಲ್ಲಿ ಮೆರವಣಿಗೆ ಮಾಡಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.ಯಲಬುರ್ಗಾ ಪಟ್ಟಣದ ಟಿಪ್ಪು ಸರ್ಕಲ್, ಕನಕದಾಸ್ ಸರ್ಕಲ್ ಮೂಲಕ ಬೃಹತ್ ಮೆರವಣಿಗೆ ಮಾಡಲಾಗಿದೆ. ಮೂರು ಲಕ್ಷ ವೆಚ್ಚದಲ್ಲಿ ಬೆಂಗಳೂರಿನಲ್ಲಿ ಕಂಚಿನ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಪ್ರತಿಮೆಗೆ ಹೂ ಹಾಕಿ ನಮಸ್ಕರಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

Related Video