Duniya Vijay: ಅಪ್ಪನ ಜೊತೆ ನಟಿಸಲು ಜಿಮ್‌ನಲ್ಲಿ ಮೋನಿಕಾ ಫುಲ್ ವರ್ಕೌಟ್..!

ಸ್ಯಾಂಡಲ್‌ವುಡ್‌ ಸಲಗ ದುನಿಯಾ ವಿಜಯ್ ಹುಟ್ಟು ಹಬ್ಬ ಭರ್ಜರಿಯಾಗೆ ನಡೆದಿದೆ. ಈ ಟೈಂನಲ್ಲಿ ವಿಜಯ್ ತನ್ನ ಮೊದಲ ಪುತ್ರಿ ಮೋನಿಕಾರನ್ನ ಚಿತ್ರರಂಗಕ್ಕೆ ಪರಿಚಯಿಸೋ ಸ್ವೀಟ್ ಸಮಾಚಾರವನ್ನ ಪಕ್ಕಾ ಮಾಡಿದ್ದಾರೆ.

First Published Jan 22, 2024, 9:54 AM IST | Last Updated Jan 22, 2024, 9:56 AM IST

ವಿಜಯ್‌ರ ಮೊದಲ ಮಗಳು ಮೋನಿಕಾ(Monica) ಅಪ್ಪನ ಸಿನಿಮಾದಿಂದಲೇ ಚಿತ್ರರಂಗಕ್ಕೆ ಲಾಂಚ್‌ ಆಗುತ್ತಿದ್ದಾರೆ. ಈ ಸಿನಿಮಾವನ್ನ ನಿರ್ದೇಶಕ ಜಡೇಶ್ ಹಂಪಿ ಡೈರೆಕ್ಟ್ ಮಾಡುತ್ತಿದ್ದು, ಈ‌ ಸಿನಿಮಾದಲ್ಲಿ ನಟ ವಿಜಯ್ ಕುಮಾರ್(Duniya Vijay) ಮಗಳಾಗಿ ಮೋನಿಕಾ ರೀಲ್ ಮೇಲೆ ಬರಲಿದ್ದಾರೆ. ನಟ ವಿಜಯ್ ಕುಮಾರ್ ನಟನೆಯ ಭೀಮ ಸಿನಿಮಾ(Bheema movie) ರಿಲೀಸ್ ಆಗುತ್ತಿದ್ದ ಹಾಗೆ ಜಡೇಶ್ ಜೊತೆಗಿನ ಸಿನಿಮಾ ಕೈಗೆತ್ತಿಕೊಳ್ಳುತ್ತಿದ್ದಾರೆ ವಿಜಯ್. ಹೀಗಾಗಿ ಈ ಸಿನಿಮಾದಲ್ಲಿ ನಟಿಸುತ್ತಿರೋ ಮಗಳು ಮೋನಿಕಾಗೆ ಜಿಮ್‌ನಲ್ಲಿ ಫಿಟ್‌ನೆಸ್ ಟ್ರೈನಿಂಗ್ ಮಾಡುತ್ತಿದ್ದಾರೆ ವಿಜಯ್. ಅಪ್ಪ ಮಗಳ ವರ್ಕೌಟ್ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮೋನಿಕಾ ಥಿಯೇಟರ್ ಆರ್ಟಿಸ್ಟ್.. ಅಪ್ಪನ ಹಾಗೆ ಕಷ್ಟ ಪಟ್ಟು ನಟನಾ ವಿದ್ಯೆ ಕಲಿತಿದ್ದಾರೆ. ಮುಂಬೈಗೆ ಹೋಗಿ ಅನುಪಮ್‌ಖೇರ್ ನಟನಾ ಶಾಲೆಯಲ್ಲಿ ಅಭಿನಯ ಕಲಿತು ಬಂದಿದ್ದಾರೆ. ಈಗ ಸಿನಿಮಾ ರಂಗಕ್ಕೆ ಕಾಲಿಡಲು ಅಪ್ಪನ ಜೊತೆ ಫಿಟ್ನೆಸ್ ಮಾಡುತ್ತಿದ್ದಾರೆ‌. ಈ ವಿಡಿಯೋ ನೋಡಿದ ಪ್ರತಿಯೊಬ್ರು ಮೋನಿಕಾ ವಿಜಯ್‌ಗೆ ಚಿತ್ರರಂಗದಲ್ಲಿ ಒಳ್ಣೆ ಭವಿಷ್ಯ ಇದೆ ಅಂತ ಹೇಳುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  Sandalwood: ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ವಿಶ್ ಮಾಡಿದ ಸ್ಯಾಂಡಲ್‌ವುಡ್..!

Video Top Stories