Asianet Suvarna News Asianet Suvarna News

ಹೇಗಿತ್ತು ಜೈಲು ಹಕ್ಕಿ ಪವಿತ್ರಾ ಗೌಡ ಮೊದಲ ದಿನ..? ಪರಪ್ಪನ ಅಗ್ರಹಾರದಲ್ಲಿ ಪವಿತ್ರಾ ಖೈದಿ ನಂ .6024!

ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್  ಗೆಳತಿ ಪವಿತ್ರ ಗೌಡ ಈಗ ಜೈಲು ಹಕ್ಕಿ. ಕಂಬಿ ಹಿಂದೆ ಬಂದಿ ಆದ ಪವಿತ್ರಾಗೌಡ  ಮೊದಲ ದಿನ ಹೇಗಿತ್ತು ಗೊತ್ತಾ..?

ಐಷಾರಾಮಿ ಬಂಗ್ಲೆಯಲ್ಲಿದ್ದುಕೊಂಡು ಲಕ್ಸುರಿ ಲೈಫ್ ನಡೆಸ್ತಿದ್ದ ನಟಿ ಪವಿತ್ರಾಗೌಡ(Pavithra Gowda) ಕೊಲೆ ಕೇಸ್(Renukaswamy murder case) ಗ ಪಡಿಸಿಕೊಂಡಿದ್ದ ನಟ ದರ್ಶನ್‌ಗೆ(Darshan) ಮಾಡಿದ್ದುಣ್ಣೋ ಮಾರಾಯ ಎನ್ನುವಂತಾಗಿದೆ. ನಟ ದರ್ಶನ್ ಪೊಲೀಸ್ ಕಸ್ಟಡಿಗೆ(Police custody) ವಹಿಸಿದ್ರೆ ಪವಿತ್ರಾಗೌಡ ಸೇರಿದಂತೆ 10 ಆರೋಪಿಗಳನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿತ್ತು. ಎ1 ಪವಿತ್ರಾಗೌಡ ಜೊತೆ ಇತರೆ ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರಿದ್ದು ಮೊದಲ ದಿನ ಕಳೆದಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನ ಮಹಿಳಾ ವಿಭಾಗದ ಡಿ ಬ್ಯಾರಕ್‌ಗೆ ಪವಿತ್ರಾಗೌಡ ಶಿಫ್ಟ್ ಮಾಡಲಾಗಿದೆ. ಜೈಲಿನಲ್ಲಿ ಡಿ ಬ್ಯಾರಕ್ ಪ್ರತ್ಯೇಕ ಕೊಠಡಿಗಳನ್ನು ಹೊಂದಿದೆ. ಇನ್ನು ಇತರೆ ಆರೋಪಿಗಳು ಜೈಲಾಸ್ಪತ್ರೆ ಬಳಿಯ ಬಿ ಬ್ಯಾರಕ್ಗೆ ಶಿಫ್ಟ್ ಆಗಿದ್ದಾರೆ. ಅಲ್ಲಿರುವ ಪ್ರತಿ ಕೊಠಡಿಯಲ್ಲಿಯೂ ಇಬ್ಬರು ಆರೋಪಿಗಳನ್ನು ಇರಿಸಲಾಗಿದೆ. ಜುಲೈ 4ರವರೆಗೆ ಎಲ್ಲಾ 13 ಆರೋಪಿಗಳು ಸೆರೆವಾಸ ಅನುಭವಿಸಲಿದ್ದಾರೆ. ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಎ1 ಆರೋಪಿ ಪವಿತ್ರಾ ಗೌಡ ಜೈಲಿನಲ್ಲಿ ಸರಿಯಾಗಿ ಊಟ ಮಾಡದೇ, ರಾತ್ರಿಯಲ್ಲಿ ನಿದ್ರೆ ಕೂಡ ಮಾಡದೆ ಚಡಪಡಿಸುತ್ತಿದ್ದಾರೆ. ಹೈಪೈಯಾಗಿ ಲೈಫ್ ಲೀಡ್ ಮಾಡಿದ್ದ ಪವಿತ್ರಾ ಗೌಡ ಜೈಲು ಹಕ್ಕಿಯಾಗಿ ಸೆರೆವಾಸದಲ್ಲಿದ್ದಾರೆ.

ಇದನ್ನೂ ವೀಕ್ಷಿಸಿ:  ಲಾಜಿಕ್‌ ಇಲ್ಲದ ಮಾತು ಆಡೋದ್ರಲ್ಲಿ ದರ್ಶನ್‌ ಎಕ್ಸ್‌ಪರ್ಟ್‌! ಅಭಿಮಾನಿ ಕೊಟ್ಟ ಉಡುಗೊರೆ ಏನು? ನಟ ಹೇಳಿದ್ದೇನು?