Asianet Suvarna News Asianet Suvarna News

ಡ್ರಗ್ಸ್ ಮಾಫಿಯಾ ಬಗ್ಗೆ ಫಿಲ್ಮ್ ಚೇಂಬರ್ ಮಹತ್ವದ ಸಭೆಗೆ ಶಿವಣ್ಣ ಗೈರು

Sep 2, 2020, 2:25 PM IST

ಫಿಲ್ಮ್ ಚೇಂಬರ್‌ನಲ್ಲಿ ಮಹತ್ವದ ಮೀಟಿಂಗ್ ನಡೆಯಲಿದ್ದು, ನಟ ನಟಿಯರ ಮೇಲೆ ಡ್ರಗ್ಸ್ ಆರೋಪದ ಸಂಬಂಧ ಚರ್ಚೆ ನಡೆಯಲಿದೆ. ಸ್ಯಾಂಡಲ್‌ವುಡ್‌ನ ನಟ ನಟಿಯರು ಡ್ರಗ್ಸ್ ಜಾಲದಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಚರ್ಚೆಯಾಗಲಿದೆ.

ಇಂದ್ರಜಿತ್ ಲಂಕೇಶ್‌ಗೆ ಹೊಸ ನೋಟಿಸ್: ಸಾಕ್ಷಿ ಕೇಳಿದ ಸಿಸಿಬಿ

ಸ್ಯಾಂಡಲ್‌ವುಡ್ ಮಹತ್ವದ ಸಭೆಗೆ ಶಿವರಾಜ್ ಕುಮಾರ್ ಗೈರಾಗಿದ್ದಾರೆ. ಸಭೆಯಲ್ಲಿ ಏನೇನು ಚರ್ಚೆಯಾಗುತ್ತೋ ಆಮೇಲೆ ಮುಂದಿನ ನಿರ್ಧಾರ ಎಂದಿದ್ದಾರೆ ಶಿವರಾಜ್ ಕುಮಾರ್. ನಿನ್ನೆಯೇ ಸಭೆ ನಡೆಸಲಿದ್ದೇವೆ ಎಂದ ಚೇಂಬರ್ ಮಾಧ್ಯಮಕ್ಕೂ ಆಹ್ವಾನ ನೀಡಲಾಗಿತ್ತು.